Posts

Campus Life

  ಕಾಲೇಜು ಜೀವನಕ್ಕೆ ಕಾಲಿಡುವ ಮಕ್ಕಳಿಗೊ೦ದು ಮುನ್ನುಡಿ ಕಾಲೇಜು ಅಂದ ತಕ್ಷಣ ಒಂದು  ದೂಡ್ಡ ಕಟ್ಟಡ,ಒಳಗಡೆ ಬಂದಿರೋರಿಗೆ ಮಾರ್ಗದರ್ಶನ ನೀಡೋ ಕಛೇರಿ. ಪ್ರಾಂಶುಪಾಲರು, ಆಡಳಿತ ಮಂಡಳಿ, ಗ್ರಂಥಾಲಯ, ಹಾಸ್ಟೆಲ್ ‌ ಮತ್ತುಅದರ ವಾರ್ಡನ್ ಇವಷ್ಟೇ ಅಲ್ಲದೇ, ಹುಡುಗ ಹುಡಗಿಯರು ಜೂತೆಗೆ ಓದಬಹುದಾದ ಅವಕಾಶ,ಪಿಯುಸಿಗಿಂತ ಸ್ವಲ್ಪ ಜಾಸ್ತಿ ಸ್ವತಂತ್ರ ಸಿಕ್ಕ ಭಾವನೆಯನ್ನು ಎಲ್ಲ ಯುವಕ-ಯುವತಿಯರಲ್ಲಿ ಕಾಣಬಹುದು. ಇವೆಲ್ಲದರ ಮಧ್ಯ ನನ್ನ ಗಮನ ಸೆಳೆದದ್ದು ಕ್ಯಾಂಪಸ್ಸಿನ ಚಿತ್ರಣ, ಅದನ್ನೆ ಒಂದು ಪಾತ್ರವಾಗಿ ಮಾಡಿದಾಗ ಮೂಡಿ ಬರುವ ಭಾವನೆಗಳ ಚಿತ್ರಣ- ನಿಮ್ಮದೇ ಕ್ಯಾಂಪಸ್ಸಿನ ಒಂದು ಚಿತ್ರಣ. ಭವಿಷ್ಯದ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಹೊತ್ತ ಹುಡುಗರು-ಹುಡುಗಿಯರು ನನ್ನ ಹತ್ತಿರ ಬರ್ತಾರೆ,  ನನ್ ಜೊತೆ ತಮ್ಮ ಪದವಿ ಮುಗಿಯೋವರೆಗೂ ಇರುತ್ತಾರೆ .ಇನ್ನು ನನ್ನ ಆಶ್ರಯದಲ್ಲಿ ಕಾಲೇಜಿಗೆ ಬಂದು, ಕ್ಲಾಸಿನ ಮುಖ ಕೂಡಾ ನೋಡದೇ ಇರೋರು,ಗ್ರಂಥಾಲಯಕ್ಕೆ ಹೋಗ್ದೆ ಇರೋರು, ನನ್ನ ಜೊತೆ ಇರುತ್ತಾರೆ. ಇನ್ನು ನಾನು ನೋಡೋಕೆ ಹೇಗಿದೀನಿ ಅ೦ದರೆ,ಮರ,ಗಿಡ,ತೋಟದ ಒಳ್ಳೆಯ ಗಾಳಿ, ಸುತ್ತ ಹಸಿರು ಅಲ್ಲಲ್ಲಿ ನನ್ನ ಕುತ್ಕೋಳೋಕೆ  ಚಾಪೆ ತರಹ ಇರೋ ಹುಲ್ಲಿನ ಹಾಸು ಇದೆ, ಬೆಂಚು ಇವೆ ಗೊತ್ತಾ.ಅಯ್ಯೋ ಇನ್ನ ನನ್ನ ಜೊತೆ ಫುಟ್ಬಾಲ ಆಡೋಕೆ,ಕ್ರಿಕೆಟ ಆಡೋಕೆ,ಜಿಮ್‌ ಇದು ಕೊಡಾ ಇದೆ. ಯಾರು ಅಂತಾ ಗೊತ್ತಾಗಲಿಲ್ವಾ ನಿಮಗೆ? ಎಸ್, ಹೌದು, ಅದು ನಾನೇ ನಿಮ್ಮ ಕ್ಯಾ೦ಪಸ್ ಬೇರೆ-ಬೇರೆ ಕಾಲೇಜಿ