Posts

Showing posts from May, 2021

ಮದನ್ ಲಾಲ್ ದಿಂಗ್ರಾ:ಸ್ವಾತಂತ್ರ ಪೂರ್ವದ ದೇಶ ಭಕ್ತ ಹುತಾತ್ಮ

Image
ಮದನ್ ಲಾಲ್ ದಿಂಗ್ರಾ:ಸ್ವಾತಂತ್ರ ಪೂರ್ವ ದ ದೇ ಶ ಭಕ್ತಹುತಾತ್ಮ . ಈಗಿನ ಕಾಲದಲ್ಲಿ ಹೆಚ್ಚಿನ ವಿದ್ಯಾ ಭ್ಯಾ ಸಕ್ಕೆ ಂದು ವಿದೇ ಶಕ್ಕೆ ತೆರಳಿದವರಲ್ಲಿ ದೇ ಶ ಭಾಷೆಯನ್ನು ಮರೆತವರೇ ಹೆಚ್ಚು,ಹೋ ಗುವ ಮುನ್ನವೇ ತಮ್ಮ ಭವಿಷ್ಯವನ್ನು ಅಲ್ಲಿಯೇ ರೂಪಿಸುಕೊ ಳ್ಳುವುದು ಎಂಬ ದೃಢ ನಿಶ್ಚಯದಿಂದ ಪ್ರಯಾಣ ಬೆಳೆಸುವರೇ ಹೆಚ್ಚು ಎಂಬುದು ಎಲ್ಲರಿಗು ತಿಳಿದಿರುವ ವಿಷಯ.ವ್ಯಾಪಾರದ ಉದ್ದೇಶದಿಂದ ಬಂದು ತಮ್ಮ ಕುತಂತ್ರ ನೀ ತಿಯಿಂದ ಅಧಿಕಾರ ಸ್ಥಾಪಿಸಿದ ಬ್ರಿ ಟಿಷರಿಂದ ಪ್ರಾರಂಭವಾಗಿ ಇಂದಿನವರೆಗೂ ಹಿಂದುಗಳನ್ನು ಮತ್ತು ಹಿಂದುಸ್ತಾನವನ್ನು ಬೌದ್ಧಿಕವಾಗಿ ಹಾಗು ಭೌತಿಕವಾಗಿ ದೋ ಚಿಕೊ ಳ್ಳುವ ಮನಸ್ಥಿತಿಗಳನ್ನು ನೋ ಡುತ್ತಲೇ ಬೆಳೆದಿದ್ದೇವೆ ಆದರೆ ಇಲ್ಲಿ ಇಂದು ಪ್ರಸ್ತಾಪಿಸಿರುವ ವ್ಯಕ್ತಿತ್ವವು ತನ್ನನ್ನು ತಾನು ಏಕಚಿತ್ತದಿಂದ ಬಲಿದಾನ ಮಾಡಿದ ಪಂಜಾಬಿನ ಧೀ ಮಂತ,ಶ್ರೀ ಮಂತ  ಹಾಗು ವಿದ್ಯಾವಂತ ಮದನ್ ಲಾಲ್ ದಿಂಗ್ರಾ ಅವರದ್ದು. ದೇ ಶದ ಎಲ್ಲೆಡೆ ಬ್ರಿ ಟಿಷರ ದುರಾಡಳಿತದಿಂದ ಕಾರ್ಮೋ ಡ ಕವಿದ ವಾತಾವರಣವದು, ಆದರೆ ದೂರದ ಇಂಗ್ಲೆಂಡ್ ದೇ ಶದ ಲಂಡನ್ ನಗರದಲ್ಲಿನ ಭಾರತ ಭವನದಲ್ಲಿದ್ದಹೆಚ್ಚಿನ ವಿದ್ಯಾ ಭ್ಯಾ ಸಕ್ಕೆ ಂದು ನೆಲಸಿದ್ದಯುವಕರಲ್ಲಿ ಮಾತ್ರ ಸ್ವದೇ ಶ,ಸ್ವಾತಂತ್ರ್ಯ ಸ್ವಾ ಭಿಮಾನ,ಬಲಿದಾನ,ಸಂಸ್ಕೃತಿ ಮತ್ತು ಇತಿಹಾಸದ ಬಗ್ಗ್ಗೆ ಕ್ರಾಂತಿಕಾರಿ ಆಲೆ ಎಬ್ಬಿ ಸುವುದರಲ್ಲಿ ವಿನಾಯಕ ದಾಮೋ ದರ್ ಸಾವರ್ಕ ರ್,ಪಂಡಿತ್ ಶ್ಯಾ ಮಜಿ ಕೃಷ್ಣವರ್ಮ ,ಲಾಲ್ ಹರದ

ಬದಲಾದ ಕಾಲದಲ್ಲಿ ಬೇಕಾದ ಬದಲಾವಣೆಗಳು

  ಪ್ರಪಂಚವನ್ನು ನನ್ನ ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂಬ ದುರುದ್ದೇಶದಿಂದ, ತಪಸ್ಸುಮಾಡಿ ವರ ಪಡೆದುಕೊಂಡು ಭಸ್ಮವಾದ ಅಸುರರ ಬಗ್ಗೆಯೂ ಓದಿದ್ದೇವೆ. ಸರ್ವಾಧಿಕಾರದ ಮನೋಭಾವದಿಂದ ರಾಷ್ಟ್ರವನ್ನು ನಿರ್ಮಾಣ ಮಾಡಲು ಹೋಗಿ ದುರಂತ ಕಥೆಯಾದ ನಿದರ್ಶನಗಳನ್ನು ಕಂಡಿದ್ದೇವೆ, ಆದರೆ "ವಸುದೈವ ಕುಟುಂಬಕಂ", ಪ್ರಪಂಚವೆಲ್ಲಾ ಒಂದು ಕುಟುಂಬವಿದ್ದಂತೆ ಎಂಬ ನಂಬಿಕೆಯ ಮೇಲೆ ಭಾರತವು ಶತ-ಶತಮಾನಗಳಿಂದ ತನ್ನ ಮೇಲೆ ನಡೆದ ಸಾಂಸ್ಕೃತಿಕ, ಆರ್ಥಿಕ, ಧಾರ್ಮಿಕ ಶೋಷಣೆಗಳನ್ನು ಮತ್ತು ಪರಿಣಾಮಗಳನ್ನು ಎದುರಿಸುತ್ತಲೇ ಬಂದಿದೆ. ಪ್ರಪಂಚಕ್ಕೆ ತನ್ನ ಸಾಮರ್ಥ್ಯವನ್ನು   ಪರಿಚಯಿಸುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ. ಈ ಆತ್ಮಸ್ಥೈರ್ಯಕ್ಕೆ ಕಾರಣವನ್ನು ಗಮನಿಸಿದಾಗ,ಸದಾಚಾರ, ಸತ್ಕಾರ್ಯ ಮತ್ತು ಸತ್ಸಂಗಗಳನ್ನು ಪ್ರಪಂಚಕ್ಕೆ ತಿಳಿಸಿಕೊಟ್ಟ ವೇದ, ವೇದಾಂತ, ಉಪನಿಷತ್ತು, ಶಾಸ್ತ್ರ, ಪುರಾಣ ಮತ್ತು ಗೀತೋಪದೇಶಗಳು ಎಂಬುದನ್ನು ಪ್ರತಿಯೊಬ್ಬರು ಮರೆಯಬಾರದು. ಪ್ರತಿಯೊಂದು ಕಾಲಘಟ್ಟದಲ್ಲಿಯೂ ದೇಶವು ತನ್ನ ಮೇಲಾದ ಅನ್ಯಾಯ, ಅತಿಕ್ರಮಣಗಳನ್ನು ಸಹಿಸಿಕೊಂಡು ಪುನರುಜ್ಜೀವನವನ್ನು ಪ್ರಾರಂಭಿಸಲು ದೇಶದಲ್ಲಿರುವ ಚಿಂತಕರು, ವಿದ್ವಾಂಸರು, ಸಂತರು, ಸ್ವಾಮೀಜಿಗಳು, ದೇಶದ ಭವಿಷ್ಯದ ಬಗ್ಗೆ ಯೋಜನೆಗಳನ್ನು ರೂಪಿಸಿ ದೇಶವನ್ನು ಪುನರ್ನಿರ್ಮಾಣ ಮಾಡುವ ಕಾರ್ಯಕ್ಕೆ ಮುನ್ನುಡಿ ಹಾಕಿ ಕೊಡುತ್ತಾರೆ.   ಕಾಲಕ್ಕನುಗುಣವಾಗಿ ಮಾನಸಿಕವಾಗಿ ಧನಾತ್ಮಕ ಚಿಂತನೆಗಳ ಮತ್ತು ದೈಹಿಕವಾಗಿ