ಮದನ್ ಲಾಲ್ ದಿಂಗ್ರಾ:ಸ್ವಾತಂತ್ರ ಪೂರ್ವದ ದೇಶ ಭಕ್ತ ಹುತಾತ್ಮ

ಮದನ್ ಲಾಲ್ ದಿಂಗ್ರಾ:ಸ್ವಾತಂತ್ರ ಪೂರ್ವ ದ ದೇ ಶ ಭಕ್ತಹುತಾತ್ಮ .
ಈಗಿನ ಕಾಲದಲ್ಲಿ ಹೆಚ್ಚಿನ ವಿದ್ಯಾ ಭ್ಯಾ ಸಕ್ಕೆ ಂದು ವಿದೇ ಶಕ್ಕೆ ತೆರಳಿದವರಲ್ಲಿ ದೇ ಶ ಭಾಷೆಯನ್ನು ಮರೆತವರೇ ಹೆಚ್ಚು,ಹೋ ಗುವ
ಮುನ್ನವೇ ತಮ್ಮ ಭವಿಷ್ಯವನ್ನು ಅಲ್ಲಿಯೇ ರೂಪಿಸುಕೊ ಳ್ಳುವುದು ಎಂಬ ದೃಢ ನಿಶ್ಚಯದಿಂದ ಪ್ರಯಾಣ ಬೆಳೆಸುವರೇ ಹೆಚ್ಚು ಎಂಬುದು ಎಲ್ಲರಿಗು
ತಿಳಿದಿರುವ ವಿಷಯ.ವ್ಯಾಪಾರದ ಉದ್ದೇಶದಿಂದ ಬಂದು ತಮ್ಮ ಕುತಂತ್ರ ನೀ ತಿಯಿಂದ ಅಧಿಕಾರ ಸ್ಥಾಪಿಸಿದ ಬ್ರಿ ಟಿಷರಿಂದ ಪ್ರಾರಂಭವಾಗಿ
ಇಂದಿನವರೆಗೂ ಹಿಂದುಗಳನ್ನು ಮತ್ತು ಹಿಂದುಸ್ತಾನವನ್ನು ಬೌದ್ಧಿಕವಾಗಿ ಹಾಗು ಭೌತಿಕವಾಗಿ ದೋ ಚಿಕೊ ಳ್ಳುವ ಮನಸ್ಥಿತಿಗಳನ್ನು ನೋ ಡುತ್ತಲೇ
ಬೆಳೆದಿದ್ದೇವೆ ಆದರೆ ಇಲ್ಲಿ ಇಂದು ಪ್ರಸ್ತಾಪಿಸಿರುವ ವ್ಯಕ್ತಿತ್ವವು ತನ್ನನ್ನು ತಾನು ಏಕಚಿತ್ತದಿಂದ ಬಲಿದಾನ ಮಾಡಿದ ಪಂಜಾಬಿನ
ಧೀ ಮಂತ,ಶ್ರೀ ಮಂತ  ಹಾಗು ವಿದ್ಯಾವಂತ ಮದನ್ ಲಾಲ್ ದಿಂಗ್ರಾ ಅವರದ್ದು.
ದೇ ಶದ ಎಲ್ಲೆಡೆ ಬ್ರಿ ಟಿಷರ ದುರಾಡಳಿತದಿಂದ ಕಾರ್ಮೋ ಡ ಕವಿದ ವಾತಾವರಣವದು, ಆದರೆ ದೂರದ ಇಂಗ್ಲೆಂಡ್ ದೇ ಶದ ಲಂಡನ್
ನಗರದಲ್ಲಿನ ಭಾರತ ಭವನದಲ್ಲಿದ್ದಹೆಚ್ಚಿನ ವಿದ್ಯಾ ಭ್ಯಾ ಸಕ್ಕೆ ಂದು ನೆಲಸಿದ್ದಯುವಕರಲ್ಲಿ ಮಾತ್ರ
ಸ್ವದೇ ಶ,ಸ್ವಾತಂತ್ರ್ಯ
ಸ್ವಾ ಭಿಮಾನ,ಬಲಿದಾನ,ಸಂಸ್ಕೃತಿ ಮತ್ತು ಇತಿಹಾಸದ ಬಗ್ಗ್ಗೆ ಕ್ರಾಂತಿಕಾರಿ ಆಲೆ ಎಬ್ಬಿ ಸುವುದರಲ್ಲಿ ವಿನಾಯಕ ದಾಮೋ ದರ್
ಸಾವರ್ಕ ರ್,ಪಂಡಿತ್ ಶ್ಯಾ ಮಜಿ ಕೃಷ್ಣವರ್ಮ ,ಲಾಲ್ ಹರದಯಾಳ್,ವೀ ರೇ ಂದ್ರನಾಥ್,ಗ್ಯಾ ನಚಂದ ವರ್ಮ ,ವಿ,ವಿ,ಸ್ ಆಯ್ಯರ್ ಮತ್ತು ಎಂ, ಟಿ,ಪಿ
ಆಚಾರ್ಯ ಇನ್ನು ಮುಂತಾದವರು ತಮ್ಮನ್ನು ತಾವು ಪೂರ್ಣಾ ಹುತಿ ಮಾಡಿಕೊ ಂಡಿದ್ದರು.
ದೇ ಶದ ಇತಿಹಾಸ,ವರ್ತ ಮಾನದ ಬಗ್ಗೆ ಆ ಯುವಕರಲ್ಲಿದ್ದಜ್ಞಾ ನ ಹಾಗು ಭವಿಷ್ಯದ ಕುರಿತಾಗಿನ ಅವರ ಯೋ ಜನೆ ಮತ್ತು
ಕಾರ್ಯ ಸಾಧನೆ ಮಾಡುವ ಚಾತುರ್ಯ ತೆ ನೋ ಡಿದರೆ ಇಂದಿನ ಯುವಕರಿಗೂ ಕೂಡ ಸ್ಪೂರ್ತಿ ಆಗುವುದರಲ್ಲಿ ಸಂದೇ ಹವೇ ಇಲ್ಲಆದರೆ
ತಿಳಿದಿಕೊ ಳ್ಳುವ ಹಂಬಲ ಮತ್ತು ತಾಳ್ಮೆ ಇರಬೇ ಕಷ್ಟೇ.
ಎಷ್ಟ ೋ ಭಾರತೀ ಯರ ಮನಸ್ಸಿ ನಲ್ಲಿ ಅಸಹಾಯಕತೆ ಮನೆಮಾಡಿ ಜೀ ವ ಭಯದಿಂದ ಶರಣಾಗುವ ಪರಿಸ್ಥಿತಿ ನಿರ್ಮಾ ಣವಾಗಿತ್ತು ಆದರೆ
ಶತ್ರು ರಾಷ್ಟ್ರಗಳಲ್ಲಿದ್ದು ಅವರದೇ ಸಂಪನ್ಮೂ ಲಗಳನ್ನು ಬಳಸಿಕೊ ಂಡು ತಮ್ಮ ಕ್ರಾಂತಿಕಾರಿ ಬರಹಗಳ ಮೂಲಕ ಇಂಗ್ಲೆಂಡಿನಲ್ಲಿದ್ದ
ಭಾರತೀ ಯರನ್ನು ಜಾಗೃತಿಗೊ ಳಿಸುವಲ್ಲಿ ಭಾರತ ಭವನದ ಪಾತ್ರ ಅವಿಸ್ಮರಣೀ ಯವಾಗಿ.ಉಳಿದಿದೆ.
ಇಂಗ್ಲೆಂಡಿನ ಜೀ ವನ ಶೈ ಲಿ ಮತ್ತು ಅಲ್ಲಿನ ಪಾಶ್ಚಾತ್ಯ ಉಡುಗೆ ತೊ ಡುಗೆಗಳಿಗೆ ಆಕರ್ಷಿ ತನಾಗಿ ಕುಟುಂಬದ ವಿರೋ ಧದ ನಡುವೆಯೂ
ಇಂಜಿನಿಯರಿಂಗ್ ವಿದ್ಯಾ ಭ್ಯಾ ಸಕ್ಕೆ ಬಂದ ಮದನ್ ಲಾಲ್ ದಿಂಗ್ರಾ ಭಾರತ ಭವನದ ಸಂಪರ್ಕ ಕ್ಕೆ ಬೇ ಗನೆ ಬಂದು ಬಿಟ್ಟರು.
ಚರ್ಚೆ ,ವ್ಯಾಖ್ಯಾನಗಳಲ್ಲಿ ಅತಿಯಾಗಿ ಆಸಕ್ತಿ ಇಲ್ಲದ ಇವರು ಸಾವರ್ಕ ರ್ ಅವರ ಭಾಷಣದಿಂದ ಪ್ರಭಾವಿತನಾಗಿ ಭಾರತೀ ಯರ
ಪರಾಕ್ರಮದ ಬಗ್ಗೆ ಅವಹೇ ಳನ ಮಾಡಿದ ಗುಂಪಿನ ಸವಾಲನ್ನು ಸ್ವೀಕರಿಸಿ ಗುಂಡುಸೂಜಿಯಿಂದ ಹಸ್ತರೇ ಖೆಗಳ ಮೇ ಲೆ ಚುಚ್ಚಿಸಿಕೊ ಂಡು
ಭಾರತೀ ಯರ ರಾಷ್ಟ್ರ ಭಕ್ತಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ.
ದಿಂಗ್ರಾರವರ ತಂದೆ ಜಿಲ್ಲಾ ಪೊಲೀ ಸ್ ಅಧಿಕಾರಿಯಾಗಿದ್ದು ಬ್ರಿ ಟಿಷ್ ಅಧಿಕಾರಿಗಳಿಗೆ ರಾಜನಿಷ್ಠೆ ತೋ ರಿಸುತ್ತಿದ್ದಅಂಶವನ್ನು
ಆಧಾರವಾಗಿಟ್ಟುಕೊ ಂಡು,ಲಂಡನ್ನಿನ ಭಾರತೀ ಯ ವಿದ್ಯಾ ರ್ಥಿ ಗಳನ್ನು ಕ್ರಾಂತಿಕಾರಿ ಮಾರ್ಗ ದಿಂದ ಶಾಂತಿ ಮಾರ್ಗ ಕ್ಕೆ ಬದಲಾಯಿಸಲು ಸ್ಥಾಪಿಸಿದ್ಧ
ನ್ಯಾ ಷನಲ್ ಇಂಡಿಯನ್ ಅಸ್ಸೊ ಸಿಯೆಷನ್ನಿನ ಸದಸ್ಯನಾಗುತ್ತಾನೆ ನಂತರ ರಿವಾಲ್ವರ್ ಲೈ ಸೆನ್ಸ್ ಪಡೆದು ಅಲ್ಲಿಯೇ ಇದ್ದಶಾಲೆಯಲ್ಲಿ ಗುರಿ
ಹೊ ಡೆಯುವ ಅಭ್ಯಾ ಸವನ್ನು ಮಾಡುತ್ತಾರೆ.
ಬ್ರಿ ಟನ್ನಿನಲ್ಲಿದ್ದಭಾರತೀ ಯ ಸಚಿವಾಲಯದ ಸಲಹೆಗಾರನಾದ ಲಾರ್ಡ್ ಕರ್ಜ ನ್ ದಿಂಗ್ರಾರವರ ತಂದೆ ಮತ್ತು ಅಣ್ಣನಿಗೆ
ಪರಿಚಿತರಾಗಿದ್ದರಿಂದ ಭಾರತ ಭವನದ ಪ್ರತಿ ವಿಚಾರಗಳನ್ನು ನನಗೆ ತಿಳಿಸಬೇ ಕೆಂಬ ಸೂಚನೆ ನೀ ಡುತ್ತಾನೆ ಆದರೆ ದೇ ಶಭಕ್ತಮದನ್ ಲಾಲ್
ಅವರು ಒಮ್ಮೆ ಯೂ ಅವರಿಗೆ ನಿಜವಾದ ಸುದ್ದಿಯನ್ನು ನೀ ಡದೆ ಚಳ್ಳೆಹಣ್ಣು ತಿನ್ನಿಸುತ್ತಾರೆ.
ಭಾರತದಲ್ಲಿ ಬ್ರಿ ಟಿಷ್ ಸರ್ಕಾ ರದ ವಿರುದ್ಧಧ್ವನಿ ಎತ್ತುತ್ತಿದ್ದದೇ ಶ ಭಕ್ತರನ್ನು ಕರಿನೀ ರಿನ ಶಿಕ್ಷೆ ಗೆ ಒಳಪಡಿಸಲಾಗುತ್ತಿತ್ತು, ಈ ವಿಷಯ
ತಿಳಿಯುವ ಮೊದಲೇ ರಿವಾಲ್ಪರ್ ಲೈ ಸನ್ಸ್ ಪಡೆದಿದ್ದದಿಂಗ್ರಾರವರು ಆರು ಗುಂಡಿನ ಕೋ ಲ್ಡ್ ರಿವಾಲ್ವರನ್ನು ಖರೀ ದಿಸಿರುತ್ತಾರೆ ಹಾಗು ಅದಕ್ಕೆ
ಕೆಲಸ ನೀ ಡುವ ಸಮಯ ಬಂದಿತೆಂದು ಬ್ರಿ ಟಿಷರ ವಿರುದ್ಧಸೇ ಡು ತೀ ರಿಸಿಕೊ ಳ್ಳುವ ನಿರ್ಧಾ ರ ಮಾಡಿಯೇ ಬಿಡುತ್ತಾರೆ.
ಅದರಂತೆಯೇ ಇಂದಿಗೆ ಸರಿಯಾಗಿ ೧೧೧ ವರ್ಷ ಗಳ ಹಿಂದೆ ಅಂದರೆ ಜುಲೈ ೧, ೧೯೦೯ ರಂದು ನ್ಯಾ ಷನಲ್ ಇಂಡಿಯನ್
ಅಸ್ಸೊ ಸಿಯೆಷನ್ನ ವಾರ್ಷಿ ಕೋ ತ್ಸವದ ಸಮಾರಂಭ ನಡೆಯುವ ಸ್ಥಳಕ್ಕೆ ಆಮಂತ್ರಣವಿಲ್ಲದಿದ್ದರು ನೀ ಲಿ ಬಣ್ಣದ ಪಂಜಾಬಿನ ಪೇ ಟ ಧರಿಸಿ ಕಣ್ಣಿಗೆ
ಕನ್ನಡಕ ಹಾಕಿಕೊ ಂಡು ಬಹು ಠೀ ವಿಯಿಂದ ಹೋ ಗಿ, ಸಭೆಯ ಮುಖ್ಯ ಅಥಿತಿಯಾಗಿದ್ದಲಾರ್ಡ್ ವಿಲಿಯಂ ಕರ್ಜ ನ್ ಗೆ ಯಾವುದೊ ಗುಪ್ತವಿಷಯ
ತಿಳಿಸಲು ಬಂದಂತೆ ಕಿರುಧ್ವನಿಯಲ್ಲಿ ಮಾತನಾಡುತ್ತಹತ್ತಿರ ಹೋ ಗಿ ತನ್ನ ರಿವಾಲ್ವರನ್ನು ತಗೆದು ಒಂದೇ ಭಾರಿ ನಾಲ್ಕು ಗುಂಡುಗಳನ್ನು
ಹಾರಿಸಿಬಿಡುತ್ತಾರೆ, ಅವರನ್ನು ಹಿಡಿಯಲು ಬಂದ ಅಧಿಕಾರಿಗೂ ಒಂದು ಗುಂಡು ಹಾರಿಸಿ ತಾವು ಒಂದು ಗುಂಡು ಹಾರಿಸಿಕೊ ಳ್ಳುತ್ತಾರೆ
ಅದೃಷ್ಟವಶಾತ್ ಗುಂಡು ಹಾರುವುದಿಲ್ಲ, ಅಲ್ಲಿಯೇ ಇದ್ದಪೊಲೀ ಸರು ಅವರನ್ನು ಬಂಧಿಸಲು ಮುಂದಾದಾಗ, ಅಲ್ಲಿದ್ದವೈ ದ್ಯರೊ ಬ್ಬರು
ದಿಂಗ್ರಾರವರ ನಾಡಿಮಿಡಿತ ಪರೀ ಕ್ಷಿಸಿ ದಂಗಾಗಿ ಹೋ ದರು ಏಕೆಂದರೆ ದಿಂಗ್ರಾರವರ ನಾಡಿಮಿಡಿತ,ದೃಷ್ಟಿ ಮತ್ತು ದೇ ಹ ಕೊ ಂಚವೂ
ವಿಚಲಿತವಾಗಿರಲಿಲ.್ಲ ಜೈ ಲಿಗೆ ಹೋ ದ ದಿಂಗ್ರಾರವರು ಕಾರ್ಯ ಸಾಧನೆಯ ಸಂಭ್ರಮದಲ್ಲಿ ತಮ್ಮ ಈ ಕೃತ್ಯಕ್ಕೆ ಮರಣದಂಡನೆ ನಿಶ್ಚಿತ ಎಂದು
ತಿಳಿದು ಕೂಡ ನಿರಾತಂಕವಾಗಿ ನಿದ್ದೆ ಮಾಡಿದ ಅವರು ತಾಯಿ ಭಾರತಮಾತೆಯ ಶ್ರೇಷ್ಠಸುಪುತ್ರರಲ್ಲಿ ಒಬ್ಬರು.
ಭಾರತವು ಪ್ರಸ್ತುತ ಯುವಕರ ದೇ ಶ ಏಕೆಂದರೆ ಶೇ ಕಡಾವಾರು ಜನಸಂಖ್ಯೆ ಯಲ್ಲಿ ಯುವಕರೇ ಜಾಸ್ತಿ ಹಾಗಾಗಿ ಯುವ ಜನತೆಯನ್ನು
ದೇ ಶಸೇ ವೆ, ಸ್ವದೇ ಶೀ ವಿಚಾರಗಳು, ಸಾಮಾಜಿಕ ಕಳಕಳಿ, ವ್ಯಕ್ತಿತ್ವ ಹಾಗು ವೈ ಚಾರಿಕತೆಯ ವಿಕಾಸದೊ ಂದಿಗೆ ದೇ ಶದ ಭೌದ್ದಿಕ
ಸಂಪತ್ತನ್ನಾಗಿಸುವ ಅವಶ್ಯಕತೆ ತುಂಬಾ ಇದೆ.
ಏಕೆಂದು ಕಾರಣಗಳನ್ನೂ ನೋ ಡಿದಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಂತರ್ಜಾ ಲವೆಂಬ ಮಾಯೆಯಿಂದ ಆನ್ಲೈನ್ ಗೇ ಮ್,
ವೆಬ್ ಸೀ ರೀ ಸ್ ಹಾಗು ಸ್ಟಾಂಡ್ಅಪ್ ಕಾಮೆಡಿಗಳಂತಹ ಕಾರ್ಯ ಕ್ರಮಗಳ ಮುಕಾಂತರ ಸಾಮಾಜಿಕವಾಗಿ ಚರ್ಚೆ ಗೆ ಆಕ್ಷೇಪಾರ್ಹ ವಾಗಿರುವ
ವಿಷಯಗಳನ್ನು ಮೂಲವಾಗಿರಿಸಿಕೊ ಂಡು ದೇ ಶ,ಭಾಷೆ,ಸಂಸ್ಕೃತಿ,ಚರಿತ್ರೆ ,ಚಾರಿತ್ರೆ ಮತ್ತು ಮೌಲ್ಯಗಳಿಂದ ಯುವ ಸಮೂಹವನ್ನು ಬಹುದೂರ
ಎಳೆಯುತ್ತಿದೆ.
ಬ್ರಿ ಟಿಷರಿಗೆ ರಾಜನಿಷ್ಠೆ ತೋ ರುತ್ತಿದ್ದತಂದೆಯ ಮಗನಾಗಿದ್ದು ಕೇ ವಲ ಮೋ ಜು ಮಸ್ತಿಗಾಗಿ ಲಂಡನ್ನಿಗೆ ಬಂದ ವ್ಯಕ್ತಿ ಅಭಿನವ ಭಾರತದ
ಸದಸ್ಯನಾಗಿ ೧೮೫೭ ರ ಸ್ವತಂತ್ರ ಸಂಗ್ರಾಮ, ಛತ್ರಪತಿ ಶಿವಾಜಿಯ ಜೀ ವನ ಚರಿತ್ರೆ ಮತ್ತು ಹಿಂದುಸ್ತಾನದ ಅಂದಿನ ಪರಿಸ್ಥಿತಿ ಕಂಡು ದೇ ಶಕ್ಕಾ ಗಿ
ಹುತಾತ್ಮನಾಗಲು ನಿರ್ಧ ರಿಸಿದ ವೀ ರ ಸೇ ನಾನಿಯಾದ ಅವರು ಇಂದಿನ ಯುವ ಪೀ ಳಿಗೆಗೆ ನಿಜವಾದ ಸ್ಪ ೋರ್ತಿ ಯಾಗಬೇ ಕು.
ಇತಿಹಾಸವನ್ನು ಯುವ ಜನತೆ ಅಧ್ಯಯನ ಮಾಡಿ ಸತ್ಯಾ ಸತ್ಯತೆಯ ಅನುಸಂಧಾನ ಮಾಡಿ ನವಭಾರತ ನಿರ್ಮಾ ಣಕ್ಕೆ ಬೇ ಕಾದ
ಭೌದ್ದಿಕ ಸಂಪತ್ತನ್ನು ಗಳಿಸುವ ಮೂಲಕ ಸ್ವಾ ಭಿಮಾನಿ ಹಾಗು ಸ್ವಾವಲಂಬಿ ಭಾರತದ ಸರ್ವಾ ಂಗೀ ಣ ಅಭಿವೃದ್ದಿಗಾಗಿ ಯುವಕರು
ಶ್ರಮಿಸಬೇ ಕಾಗಿದೆ ಮತ್ತು ನಾಡು ನುಡಿ ಸಂಸ್ಕೃತಿ ಹಾಗು ಜ್ಞಾ ನ ಸಂಪತ್ತಿನಲ್ ವಿಚಾರಗಳಲ್ಲಿ ಭಾರತೀ ಯರು ವಿಶ್ವಕ್ಕೆ ಮಾದರಿ ಎಂಬ
ಸಂದೇ ಶವನ್ನು ಘಂಟಾಘೋ ಷವಾಗಿ ನೀ ಡಬೇ ಕಾಗಿದೆ.
ಹೇಮಂತಕುಮಾರ್ ರೇ ಕಪ್ಪಾಳಿ
hemanth.kappali@gmail.com
Image taken from:

Comments

  1. ಉತ್ತಮವಾಗಿದೆ. ನಿಮ್ಮ ಅನ್ವೇಷಣೆ ಮುಂದುವರಿಯಲಿ

    ReplyDelete

Post a Comment