ಹಳ್ಳಿ ಹುಡುಗ.......ನಿ(ರಂಜ)ನ ಭಾಗ 2.

ಮಕ್ಕಳಿಗಿಂತ ಹೆಚ್ಚು ತಲೆ ಕೆಡಸಿಕೊಂಡಿರುವ ಪೋಷಕರು ಒಂದು ಕಡೆ,ಪೋಷಕರ ಸಮಯವಿಲ್ಲದೆ ತಮ್ಮ ಭವಿಷ್ಯ, ತಮ್ಮ ನಿರ್ಧಾರ ಎಂದು ಕೂತಿರುವ ಹುಡುಗರ ದಂಡು ಒಂದು ಕಡೆ, ಇವರಿಬ್ಬರ ಮಧ್ಯೆ ನಮ್ಮ ನಿರಂಜನ,ಇವನ ತಂದೆ ಇವನು ಕೇಳುವುದಕ್ಕೆ ಮೊದಲೇ ನನಗೇನೂ ಗೊತ್ತಿಲ್ಲ ಎಂದು ಬಾಯಲ್ಲಿ ಅಡಿಕೆ, ಎಲೆ, ಸುಣ್ಣ ಹಾಕಿಕೊಂಡು ನಿಂತು ಬಿಟ್ಟರು.
ಸೀಟು ಹಂಚಿಕೆ ಮೂರು ರೀತಿಯಲ್ಲಿ ಆಗುತ್ತದೆ, ಒಂದು ಸರಕಾರಿ ಸೀಟು,ಸರ್ಕಾರಿ ನೆರವಿನಿಂದ ಇರುವ ಸೀಟು,ಖಾಸಗಿ ಸೀಟು.ಸರ್ಕಾರಿ ಮತ್ತು ಸರ್ಕಾರಿ ನೆರವಿನಿಂದ ನಡೆಯುವ ಕಾಲೇಜುಗಳ ಸಂಖ್ಯೆ ಕಡಿಮೆ.ಇನ್ನು ಖಾಸಗಿ ಕಾಲೇಜಿನ 100 ಸೀಟುಗಳ ಪೈಕಿ 60 ಸೀಟು ಸರ್ಕಾರದ ಮೂಲಕ,  ಎರಡು ರೀತಿಯಲ್ಲಿ ಹಂಚಿಕೆ ಆಗುತ್ತದೆ, ಮೊದಲ 25 ಸೀಟು 28000ಕ್ಕೂ, ಉಳಿದ 35 ಸೀಟುಗಳು 56000 ಕ್ಕೆ ಮಾರಾಟ ಆಗುತ್ತವೆ,ಯಾಕೆ ಹಾಗೆ? ಗೊತ್ತಿಲ್ಲ ರೀ ಸರಕಾರದ ನಿಯಮ ಅಷ್ಟೇ.
ಆರ್ಥಿಕ ಪರಿಸ್ಥಿತಿಯ ಪರಿಣಾಮ 28000 ಸೀಟು ಸಿಕ್ಕರೆ ಓದುವುದಾಗಿ ಬಂದಿದ್ದ, ಆದರೆ ಅವರ ತಂದೆ ಅವನಿಗೆ ತಿಳಿಸದೆ 56000 ಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು,ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಸೀಟು ತೆಗೆದುಕೊಳ್ಳಲು ಹೋದನು,  ಮೆಕಾನಿಕಲ್ ಇಂಜಿನಿಯರಿಂಗ್ ಮಾಡಲು ನಿರ್ಧರಿಸಿದ್ದ ನಿರಂಜನನಿಗೆ ವಿಧಿ ರಾಜ್ಯದ ತಮಿಳುನಾಡು ಗಡಿಭಾಗದ ರಾಯಘಡದಲ್ಲಿ ಇರುವ 25 ವರ್ಷ ಹಳೆಯದಾದ ಕಾಲೇಜಿನಲ್ಲಿ ಸೀಟು ದೊರಕುವಂತೆ ಮಾಡಿತು.
ಇನ್ನು ಬೆಂಗಳೂರಿಗೆ ಬಂದ ಕಾರ್ಯ ಮುಗಿಯಿತು ಎಂದು ಬಸ್ ಹತ್ತಿ ಚಿಂಚನ ಕಟ್ಟೆ ಕಡೆ ಪ್ರಯಾಣ ಬೆಳೆಸಿದರು.  ದಾರಿಯುದ್ದಕ್ಕೂ ಮುಂದಿನ ಜೀವನದ ಆಲೋಚನೆಗಳು ಬೆಳೆದವು, ಮತ್ತದೇ ಪ್ರಶ್ನೆಗಳ ಸರಣಿಗೆ  ಸಮಾಧಾನ,ನಂಬಿಕೆ ಮತ್ತು ಭರವಸೆಯ ಉತ್ತರ ಅಷ್ಟೇ.
ತಂದೆಗೆ ಕಷ್ಟವಾಗಬಾರದು ಎಂದು ಶೈಕ್ಷಣಿಕ ಸಾಲ ಪಡೆಯಲು ಸಿದ್ಧನಾದ.ಬ್ಯಾಂಕಿನ ಮ್ಯಾನೇಜರ್ ಜೊತೆ ಈ ಕುರಿತು,ಚರ್ಚೆ ಮಾಡಿದಾಗ ತಿಳಿದ ಸಂಗತಿ ಎಂದರೆ ಶ್ಯೂರಿಟಿಗಾಗಿ ಸರ್ಕಾರಿ ಉದ್ಯೋಗಿಯ ಸಹಿ ಬೇಕು ಎಂದು, ತಮ್ಮ ಕುಟುಂಬದಲ್ಲಾಗಲಿ, ತಂದೆಯ ಸ್ನೇಹಿತರಾಗಲಿ ಸಹಾಯ ಮಾಡಬಲ್ಲ ಸರ್ಕಾರಿ ಉದ್ಯೋಗ ಮಾಡುವವರು ಯಾರು ಇಲ್ಲ ಎಂದು ತಿಳಿದು ಮಾನಸಿಕವಾಗಿ ಕುಗ್ಗಿ ಹೋದನು.ಆನಂತರ ತಿಳಿಯಿತು ತಮ್ಮದೇ ಊರಿನ ಬ್ಯಾಂಕಿನ ಉದ್ಯೋಗಿ ಮ್ಯಾನೇಜರ್ ಗೆ ಅವರ ಕೈಯಲ್ಲಿ ಸಾಲ ಮರುಪಾವತಿ ಮಾಡುವ ಶಕ್ತಿ ಇಲ್ಲ ಎಂದು ಹೇಳಿಕೂಟ್ಟಿದ್ದನಂತೆ.ಸಮಾಜದ ಇನ್ನೂಂದು ಮುಖದ ಅನಾವರಣ ಅವನ ಕುಟುಂಬದ  ಅಸಹಾಯಕತೆ ಮತ್ತು ಭವಿಷ್ಯದ ಬಗ್ಗೆ ಬೇಸರ ಮೂಡಿಸಿತು.ಶೈಕ್ಷಣಿಕ ಸಾಲದ ಆಸೆಯನ್ನು ಬಿಟ್ಟ,ಆದರೆ ಅದೊಂದು ದಿನ ಮನೆಯ ಹತ್ತಿರವಿದ್ದ, ನಿರಂಜನ ಮತ್ತು ಅವರ ಕುಟುಂಬದ ಪರಿಸ್ಥಿತಿಯನ್ನು ತಿಳಿದ ಸಾಹುಕಾರ ವೆಂಕಟೇಶಪ್ಪ ನವರು ಫೋನ್ ಮಾಡಿ ಅವರ ಮನೆಗೆ ಕರೆದು ವಿಚಾರಿಸಿದಾಗ,  ಅವರಿಗೂ ವಿಷಯ ತಿಳಿಯಿತು.ಕೂಡಲೇ ಮ್ಯಾನೇಜರ್ ಗೆ ಫೋನ್ ಮಾಡಿ ಸಾಲ ಮಂಜೂರು ಮಾಡಬೇಕು, ಬೇಕಾದ ಶ್ಯೂರಿಟಿ ನಾನು ನೀಡುತ್ತೇನೆ, ಅವರು ಹೇಳಿದೂಡನೆ ಎಲ್ಲ ವ್ಯವಸ್ಥೆ ಆಗಿ ಹೋಯಿತು, ನಾಲ್ಕು ವರ್ಷದ ಕಾಲೇಜಿನ ಶುಲ್ಕವನ್ನು ಮಂಜೂರಾತಿ ಮಾಡಲಾಯಿತು.ಸಾಹುಕಾರ ವೆಂಕಟೇಶಪ್ಪ ನವರ ಮೇಲಿನ ಗೌರವ ಮತ್ತು ಋಣ ನಮ್ಮ ನಿರಂಜನನ ಮೇಲೆ ಬಿತ್ತು, ಮನೆಯವರೆಲ್ಲ ಬೇಗ ಓದಿ ಕೆಲಸಕ್ಕೆ ಸೇರಿ ಸಾಲ ಮರುಪಾವತಿ ನಿನ್ನ ಜವಾಬ್ದಾರಿ ಎಂದು ಮನವರಿಕೆ ಮಾಡಿದರೋ ಅಥವಾ ಅವರ ಜವಾಬ್ದಾರಿಯಿಂದ ಜಾರಿ ಕೊಳ್ಳುವ ಪ್ರಯತ್ನವಾಗಿತ್ತೋ ಎಂದು ಅರ್ಥವಾಗದ ವಯಸ್ಸು ಮನಸ್ಸು ನಮ್ಮ ನಿರಂಜನನದಾಗಿತ್ತು.
ಆರೋಗ್ಯದ ದೃಷ್ಟಿಯಿಂದ,  ನಿರಂಜನನಿಗೆ ವಂಶ ಪಾರಂಪರ್ಯವಾಗಿ ಬಂದ ಅಸ್ತಮಾ, ವರ್ಷದ ನಾಲ್ಕು ತಿಂಗಳು ಔಷಧಿ ತೆಗೆದುಕೊಳ್ಳಲಾಗುತ್ತಿದ್ದನು,ಆದರೆ ರಾಯಘಡದ ವಾತಾವರಣ ಇವನ ಆರೋಗ್ಯಕ್ಕೆ ಉತ್ತಮ ವಾಗಿರುತ್ತದೆ ಎಂಬ ವೈದ್ಯರ ಸಲಹೆ,  ಕುಟುಂಬ ಸದಸ್ಯರಿಗೆ ಒಳ್ಳೆಯ ವಿಷಯ ಎನಿಸಿತು ಅದರಂತೆ, ಇರುವ ನಾಲ್ಕು ಜೊತೆಯ ಬಟ್ಟೆ ಇಟ್ಟುಕೊಂಡು, ನಾನು  ವಲಸೆ ಹೋಗುವುದು ಕೇವಲ ವಿದ್ಯಾಭ್ಯಾಸಕ್ಕೆ ಅಲ್ಲ, ನನ್ನ ಮುಂದಿನ ಜೇವನವನ್ನು ರೂಪಿಸಿಕೂಳ್ಳುವುದಕ್ಕಾಗಿ ಎಂದು ನಿರ್ಧಾರ  ಮಾಡಿ ರಾಯಭಾಗದ ಕಡೆಗೆ ಅವರ ತಂದೆಯೊಂದಿಗೆ ಪ್ರಯಾಣ ಬೆಳೆಸಿದ.
ಇನ್ನು ರಾಯಘಡದ ಹೊಸ ಅನುಭವ ಮತ್ತು 
ಜೀವನ ಕಲಿಸಿದ ಹೊಸ ಹೊಸ ಆಯಾಮಗಳು ಇವನಿಗೆ ಸ್ಪೂರ್ತಿದಾಯಕವೇನು ಆಗಿರಲಿಲ್ಲ, ಎಲ್ಲ ಬಿಟ್ಟು ವಾಪಸ್ಸು ಹೋಗುವ ಯೋಚನೆಯು ಬಂದಿರಲಿಲ್ಲ ಎನ್ನುವಂತಿಲ್ಲ.
ಇವೆಲ್ಲವನ್ನು ಎದುರಿಸಿದ ನಿರಂಜನನ ಕಥೆ,
                                          ಮುಂದುವರೆಯುವುದು.

Comments

  1. Story written so well, very interesting, well thought out and well articulated. Looking for next episode. :)

    ReplyDelete

Post a Comment