"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ "ಭಾಗ-೧

   
x

ಅನಕ್ಷರಸ್ಥತಂದೆ ತಾಯಿಯೂ ಕೂಡ ಮಕ್ಕಳ ವಿದ್ಯಾಭ್ಯಾಸದ ಕನಸನ್ನುಕಾಣುವುದರಜೊತೆಗೆ,ಅದರ ಜವಾಬ್ದಾರಿಯನ್ನು ಅರಿತುಕೊಂಡು ಶಿಕ್ಷಣ ಕೊಡಿಸಲು ಪಡುವ ಆರ್ಥಿಕ,ಮಾನಸಿಕ  ಸಂಕಷ್ಟವನ್ನು ನಾವು ನೋಡಿದ್ದೇವೆ,ಕೇಳಿದ್ದೇವೆ ಮತ್ತು ಅನುಭವಿಸಿದ್ದೇವೆ. ಆದರೆ  ವ್ಯಕ್ತಿಯ ವ್ಯಕ್ತಿತ್ವ ಮತ್ತು ಜೀವನ ರಚಿಸಲು ಶಿಕ್ಷಣ ಅವಶ್ಯಕ ಎಂಬ  ಅರಿವು ಬಂದದ್ದು ಮಾತ್ರ ಅವನ ಪೂರ್ವಿಕರ ಮತ್ತು  ತನ್ನ ಜೀವನದ ಅನುಭವಗಳಿಂದ,ಹಾಗಿದ್ದಲ್ಲಿ ವ್ಯಕ್ತಿಯ ವಕ್ತಿತ್ವದ ರಚನೆಗೆ ಅವಶ್ಯಕವಾಗಿರುವುದು ಶಿಕ್ಷಣ ಆದರೆ  ವ್ಯಕ್ತಿಯಲ್ಲಿ  ಚಿಂತನೆ ಮೂಡುವಂತೆ ಮಾಡಿದ್ದು ಮಾತ್ರ ಅವನಲ್ಲಿದ್ದ ಅನುಭವ ಮತ್ತು ಅರಿವು.

ಇದೆ ರೀತಿಯಲ್ಲಿ ಒಂದು ದೇಶದ ಮಕ್ಕಳ ಭವಿಷ್ಯವನ್ನು ರೂಪಿಸುವುದು  ಗುರುವಿನಿಂದ ಮಾತ್ರ ಸಾಧ್ಯ ಅದು ಅವನ ಜವಾಬ್ದಾರಿ ಕೂಡಾ ಆಗಿರುತ್ತದೆ.ಗುರುಶಿಷ್ಯ ಹೋಗಿ ಶಿಕ್ಷಕವಿದ್ಯಾರ್ಥಿ ಆದದ್ದು ನಮಗೆಲ್ಲಾ ತಿಳಿದ ವಿಷಯ.                           

 

ಒಂದು ಪದದ ಮೂಲ ಅರ್ಥವನ್ನು, ಅದನ್ನು ಬಳಸುವ ಭಾಷೆ,ಸಂಸ್ಕೃತಿ ಮತ್ತು ಭೌಗೋಳಿಕ ಅಂಶಗಳನ್ನು ಆಧರಿಸಿರುತ್ತದೆ, ಹೀಗಿರುವಾಗ ಧರ್ಮವನ್ನು ರೆಲಿಜಿಯೋನ್ ಎಂದು, ಗುರು ಎಂಬುದನ್ನು ಟೀಚರ್ ಎಂದು ಭಾಷಾಂತರಿಸುವುದು ಮತ್ತು ಅದನ್ನು ಅದೇ ಹಾದಿಯಲ್ಲಿ ಬಳಕೆ ಮಾಡುವುದು ಭಾಷೆ ಮತ್ತು ಭಾಷಾಜ್ಞಾನಕ್ಕೆ ಮಾಡುವ ಮೋಸವಲ್ಲವೇ?                                                ಭಾರತೀಯ ಮೂಲದ  ಎಲ್ಲ ಭಾಷೆಗಳಲ್ಲಿಯೂ ಗುರು ಎನ್ನುವ ಪದಕ್ಕೆ    ಒಂದೇ ಅರ್ಥ.ಆದರೆ ಆಂಗ್ಲ ಭಾಷೆಯ ಆಟವೇ ಬೇರೆ,ಗುರು ಎಂಬ ಪದಕ್ಕೆ ಶಿಕ್ಷಕ  ಎಂಬ ಅರ್ಥವಿದೆ. 

ವಿದ್ಯಾವಂತರಾದರು ಪರೀಕ್ಷೆಯಲ್ಲಿ ಫೇಲ್ ಆದಾಗ ನೇಣಿಗೆ ಶರಣಾಗಿರುವುದು,ಹಣಕ್ಕಾಗಿ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವುದು,ಕೋಪ,ಅಸೂಯೆ ಮತ್ತು ದುರಾಲೋಚನೆಗಳ ಫಲವಾಗಿ ಅಪರಾಧಿಗಳಾಗಿರುವುದು,ದುರ್ವ್ಯಸನಿಗಳಾಗಿರುವುದು,ಮಾನಸಿಕ ಖಿನ್ನತೆಗೆ ಒಳಗಾಗಿರುವುದನ್ನುಕಾಣುತ್ತಿದ್ದೇವೆ.ಕುಟುಂಬ,ಸಮಾಜ,ನಾಗರಿಕತೆ ,ದೇಶ,ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಎಳ್ಳಷ್ಟೂ ಅಭಿಮಾನ ಮತ್ತು ಗೌರವ ಇಲ್ಲದವರಿದ್ದಾರೆ.ಸ್ವಾರ್ಥ,ದುರಾಸೆ ಮತ್ತು ಕಾಮಗಳಿಂದಾಗಿ ಭ್ರಷ್ಟಾಚಾರ,ಸಮಾಜದ್ರೋಹ,ಮತಾಂತರ  ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡವರಿದ್ದಾರೆ, ಇದೆಲ್ಲಾ ಕೇವಲ ಹಣ ಗಳಿಸುವುದಕ್ಕಾಗಿಯೇ ರೀತಿಯ ವ್ಯಕ್ತಿಗಳಿಂದ ಸಮಾಜಕ್ಕೆ ಮತ್ತು ದೇಶಕ್ಕೆ  ಬಯಸುವುದಾದರೂ ಏನನ್ನು?

       ಮುಂದುವರೆಯುವುದು.......

Comments