ಯೋಗದಿಂದ ಪ್ರತಿಯೊಬ್ಬರಿಗೂ ರಾಜ ಯೋಗ.


ಭಾರತೀಯ ಜ್ಞಾನ ಸಂಪತ್ತಿನ ಒಂದು ಆಯಾಮ ಶಾಸ್ತ್ರಗಳು,ಶಾಸ್ತ್ರಗಳಲ್ಲಿ ವೈದ್ಯ,ನಾಟ್ಯ,ವಾಸ್ತು ಮತ್ತು ಯೋಗ ಶಾಸ್ತ್ರವು ಒಂದು.
ಯೋಗ ಎಂದರೆ ಕೇವಲ ಆಸನಗಳಲ್ಲ, ಅದು ದೇಹಕ್ಕೆ,ಮನಸ್ಸಿಗೆ ಮತ್ತು ಬುದ್ಧಿಗೆ ಬೇಕಾದ ಅವಶ್ಯಕ ಕ್ರಿಯೆ ಎನ್ನಬಹುದು.
ಇತಿಹಾಸ ಕಾಲದಿಂದ ಇಲ್ಲಿಯವರೆಗೆ ಯೋಗದ ಮಹತ್ವವನ್ನು ಅರಿತು ಅಭ್ಯಾಸ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ವಯಸ್ಸಿನ ಮಾನದಂಡವನ್ನು ಲೆಕ್ಕಿಸದೆ ಸಾಧನೆಗಾಗಿ ಜೀವಿಸಿದ ವ್ಯಕ್ತಿಗಳ ಎಷ್ಟೋ ನಿದರ್ಶನಗಳಿವೆ.
ಮನಸ್ಸಿನ ಭಾವನೆಗಳನ್ನು ಮತ್ತು ಮೆದುಳಿನ ವಿಚಾರಗಳನ್ನು ಯಾವಾಗ ಹೇಗೆ ಹತೋಟಿಯಲ್ಲಿಡ ಬೇಕು ಎಂಬುದನ್ನು ತಿಳಿಸುವುದು ಯೋಗಶಾಸ್ತ್ರ.
ಇದರಿಂದ ಚಿತ್ತ ಮತ್ತು ವೃತ್ತಿ ಅಂದರೆ,ಮಾನವನಿಗೆ ಕಾಡುವ 9 ರೀತಿಯ ವಿಕ್ಷೇಪಗಳಾದ ಮತ್ತು ನಿಶಕ್ತಿ ಗಳನ್ನು ಜಯಸಿ ಸಾಧನೆಯ ಶಿಖರ ಏರುವ ಸರಳ ದಾರಿಯನ್ನು ನಮ್ಮ ಪೂರ್ವಜರು ನೀಡಿದ್ದಾರೆ.
ಆದರೆ ಬ್ರಿಟಿಷರು ಇವೆಲ್ಲವನ್ನು ಲೆಕ್ಕಿಸದೆ ಕೇವಲ ಹಣ,ಅಧಿಕಾರ ಮತ್ತು ಲೌಕಿಕ ಸಿರಿತನವನ್ನು ತುಂಬುವ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ನಮ್ಮನ್ನು ದಾರಿ ತಪ್ಪಿಸಿದ ಸತ್ಯ ಅರಿವಾಗಿದೆ ಮತ್ತು ಹೊಸ ಶಿಕ್ಷಣ ನೀತಿಯ ಮೂಲಕ ಪುನರುಜ್ಜೀವನ ಕಾರ್ಯ ಪ್ರಗತಿಯಲ್ಲಿದೆ.
ದೇಶದಲ್ಲಿ ವಿವಿಧ ಸಂಘಟನೆಗಳ ಮತ್ತು ಸರಕಾರದ ಯೋಜನೆಗಳ ಮೂಲಕ ಯೋಗ ಶಾಸ್ತ್ರದ ಅಭಿಯಾನಗಳು ಜನರನ್ನು ಯೋಗದ  ವಿಷಯದಲ್ಲಿ ಜಾಗೃತಿಯನ್ನು ಮೂಡಿಸಿವೆ.

ಋಷಿ ಪತಂಜಲಿಯು ಯೋಗ ಸೂತ್ರದ ಕರ್ತೃವಾಗಿದ್ದು,
ಅವರ ಜೀವ ಸಮಾಧಿಯನ್ನು ಬೃಹತ್ ಯೋಗ ಕೇಂದ್ರವನ್ನಾಗಿಸಿದ್ಧಾರೆ ಅದು ತಮಿಳುನಾಡಿನ ತಿರುಪತ್ತುರಿನ  ಬ್ರಹ್ಮಪುರೀಶ್ವರ ದೇವಸ್ಥಾನದಲ್ಲಿದೆ.
ಅವರ ಸೂತ್ರದದರಲ್ಲಿರು 8 ಅಂಗಗಳು ಈ ಕೆಳಗಿನಂತಿವೆ,
1)ಯಮ: ಜೀವನದಲ್ಲಿ ಪಾಲಿಸಬಹುದಾದ ಸಿದ್ಧಾಂತ ಗಳಾದ ಅಹಿಂಸೆ,ಸತ್ಯ,ಆಸ್ತಿಯ,ಬ್ರಹ್ಮಚರ್ಯ,ಅಪರೀಘಗಳಾಗಿವೆ.ಇವುಗಳನ್ನು ಪಾಲಿಸುವುದು ಮಾನವ ಕುಲದ ಧರ್ಮ. 
2)ನಿಯಮ: ನಾವು ವೈಯಕ್ತಿಕ ಜೀವನದಲ್ಲಿ ಪಾಲಿಸಬೇಕಾದ ಶಿಸ್ತುಗಳಾದ,
ಶೌಚ,ಸಂತೋಷ,ತಪ,ಸ್ವ ಅಧ್ಯಾಯ ಮತ್ತು ನಿಷ್ಠೆ.
ಇವುಗಳಿಂದ ಮನುಷ್ಯನ ಬಹಿರಂಗದ ಮತ್ತು ಅಂತರಂಗದ ಪ್ರಸನ್ನತೆ ಹೆಚ್ಚಾಗುತ್ತದೆ.
3)ಆಸನ: ದೇಹ ಮತ್ತು ಮೆದುಳಿನ ಸದೃಡತೆಗೆ ಅವಶ್ಯಕವಾದ ಭಂಗಗಳನ್ನು ಒಳಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಆಸನಗಳ ಪ್ರಾಮುಖ್ಯತೆ ಹೆಚ್ಚಾಗಿದ್ದು ವಿದೇಶಿ ಜನರು ಇದನ್ನು ಅಭ್ಯಾಸ ಮಾಡುವಂತೆ ಆಗಿದೆ.
4)ಪ್ರಾಣಯಾಮ: ಉಸಿರಾಟದಲ್ಲಿ ಯೋಗ ಕ್ರಿಯೆ ಅಂದರೆ, ಉಸಿರಾಟ ಕ್ರಿಯೆಗಳಾದ ಉಚ್ವಾಸ ಮತ್ತು ನಿಚ್ವಾಸದಲ್ಲಿ ಯೋಗದ ಬಳಕೆ.
ಇದು ಕುಳಿತುಕೊಂಡು ಮಾಡುವ ಯೋಗ ವಾಗಿದ್ದು ಸಾಧು ಸಂತರು,ಋಷಿ ಮುನಿಗಳು ವರ್ಷ ಗಳ ವರೆಗೆ ತಪಸ್ಸಿಗೆ ಕೊಡುವಾಗ ಬಳಸುವ ಸಾಧನಸೂತ್ರ ವಾಗಿದೆ.
5)ಪ್ರತ್ಯಹಾರ: ಜ್ಞಾನೇಂದ್ರಿಯಗಳನ್ನು ಹತೋಟಿಯಲ್ಲಿ ಇಡುವುದರ ಮೂಲಕ ಮೆದುಳಿನ ನಿರ್ವಹಣೆ ಮಾಡುವ ಕ್ರಿಯೆ ಇದಾಗಿದೆ.
ದೃಷ್ಟಿ,ವಾಸನೆ,ಸ್ಪರ್ಶ,ರುಚಿ ಮತ್ತು ಶ್ರವಣಗಳಿಂದ ಕೂಡ   ಧನಾತ್ಮಕ ವಿಚಾರಗಳನ್ನು ಪಾಲಿಸುವುದು ಪ್ರತ್ಯಹಾರ.
6)ಧರಣ: ಒಂದು ವಸ್ತುವಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸುವುದರ ಮೂಲಕ ಮಾಡುವ ಕ್ರಿಯೆ.
ನಿಮ್ಮ ಆಚಾರ ವಿಚಾರಗಳಿಗೆ ತಕ್ಕಂತೆ ಒಂದು ವಸ್ತುವನ್ನು ಧಾರಣ ಮಾಡಿಕೊಂಡು ಅದನ್ನು ನೋಡುತ್ತಾ ಮಾಡುವ ಯೋಗ ಕ್ರಿಯೆ ಆಗಿರುತ್ತದೆ.
7)ಧ್ಯಾನ:ಶ್ರವಣ,ಮನನ ಮತ್ತು ಪಠಣಗಳ ಏಕಾಗ್ರತೆ ಮತ್ತು ಉಸಿರಾಟದ ಮೇಲೆ ಗಮನ ಹರಿಸಬೇಕು ಹಾಗೂ ಅದರ ಮೂಲಕ ಬಾಹ್ಯ ಪ್ರಪಂಚವನ್ನು ಮರೆತು ಶಕ್ತಿಯನ್ನು ಕೇಂದ್ರೀಕರಿಸುವುದು.ಇದರಿಂದ ನಮ್ಮ ಎಷ್ಟೋ ಋಷಿಗಳ ತಪಸ್ಸಿಗೆ ಮೆಚ್ಚಿ ದೇವರು ವರ ನೀಡುವ ಕಥೆ ಕೇಳಿದ್ದೀರಿ ಅಂದರೆ ಸಾಧನೆಗೆ ಯೋಗದ ಅವಶ್ಯಕತೆಯನ್ನು ತಿಳಿಸುತ್ತದೆ.
8)ಸಮಾಧಿ:ಆತ್ಮ ಪರಮಾತ್ಮನಲ್ಲಿ ಒಂದಾಗುವ ಕ್ರಿಯೆ,ಮಾನವನ ಜನ್ಮದ ಕೊನೆಯ ಹಂತ. ಸ್ವಾಮೀಜಿಗಳು ಸಿದ್ಧ ಪುರುಷರು ಸಮಾಧಿ ಆಗಿರುವ ವಿಷಯ ನಮಗೆಲ್ಲ ಗೊತ್ತಿದೆ.
ಇಂತಹ ಒಂದು ಅತ್ಯವಶ್ಯಕ ಶಾಸ್ತ್ರವು ನಮ್ಮ ವಿದ್ಯಾರ್ಥಿಗಳ ಪಠ್ಯ ಪುಸ್ತಕದಲ್ಲಿ ಮಾಯವಾಗಿರುವ ಸಂಗತಿ ವಸಾಹತು ಶಾಹಿಗಳ ಮನಸ್ಥಿತಿಯ ಅನಾವರಣ.
ಇನ್ನಾದರೂ ಶಿಕ್ಷಣಕ್ಕೆ ಸಮನಾಂತರವಾಗಿ ಮರೆತು ಹೋದ ಮೂಲ ಭಾರತೀಯ ಜ್ಞಾನದ ಕಡೆಗೆ ನಾವೆಲ್ಲ ಗಮನಹರಿಸಬೇಕು ಎಂಬುದನ್ನು ಜಾಗೃತಗೊಳಿಸುವ ಸಣ್ಣ ಪ್ರಯತ್ನ ನನ್ನದು.
ಕೃಪೆ:www.google.com

Comments