ಹಳ್ಳಿ ಹುಡುಗ...ನಿ(ರಂಜ)ನ ಭಾಗ 1.

ಕೊನೆಗು ಬಂದೇ ಬಿಟ್ಟಿತು, ಶಾಮಿಯಾನ,ಕುರ್ಚಿ,ದೊಡ್ಡ ಪರದೆಯಿಂದ ಅಲಂಕೃತವಾದ, ರಾಜ್ಯದ ಎಲ್ಲ ಕಡೆಯಿಂದ ಬಂದ  ವಿದ್ಯಾರ್ಥಿ ಮತ್ತು ಪೋಷಕರ ಕನಸುಗಳನ್ನು ನನಸು ಮಾಡಲೆಂದೇ ನಿರ್ಮಿಸಿರುವ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿ.ಇ.ಟಿ ಕಛೇರಿಯ ಮುಂದೆ ನಿಲ್ಲುವ ದಿನ.
ಆತಂಕಗೊಂಡ ಮಕ್ಕಳು ಮತ್ತು ಪೋಷಕರು,ಗಡಿ ಬಿಡಿಯಲ್ಲಿನ ಆಯೋಜಕರು, ಇವರ ನಡುವೆ ಕಾಲೇಜುಗಳ ಹಾಗು ಶಿಕ್ಷಣ ಸಾಲ ನೀಡುವ ಬ್ಯಾಂಕಿನ ಜಾಹಿರಾತುಗಳನ್ನು ನೀಡುತ್ತಿರುವ ವ್ಯಕ್ತಿಗಳು.ಇವೆಲ್ಲವನ್ನು ನೋಡಿ ಮಂಕಾದ ನಮ್ಮ ಹಳ್ಳಿ ಹುಡುಗ.
ಕರ್ನಾಟಕದ ಒಂದು ಮೂಲೆಯಲ್ಲಿರುವ ಚಿಂಚನಕಟ್ಟೆ ಎಂಬ ಹಳ್ಳಿ, ಆಗ ತಾನೆ  ವಿಜ್ಞಾನ ವಿಷಯದಲ್ಲಿ ಕಂಠಪಾಠ ಮಾಡಿ  ಪಿಯುಸಿ ಪರೀಕ್ಷೆ ಮುಗಿಸಿದ ನಿರಂಜನ.
ಒಂದು ಕಡೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆ,ಜೀವ ಬದುಕಿದರೆ ಸಾಕು ಎಂದು ಚಿನ್ನದ ಸರವನ್ನು ಮಾರಿ ಚಿಕಿತ್ಸೆಗೆ ಹಣ ಹೊಂದಿಸಿದ ತಾಯಿ,ಇವೆಲ್ಲದರ ಪರಿವೆ ಇಲ್ಲದೆ ಆಟ ಪಾಠದಲ್ಲಿ ಮಗ್ನವಾಗಿರುವ ತಂಗಿ.ಹೀಗಿರುವಾಗ ಇದಾವುದನ್ನು  ಲೆಕ್ಕಿಸದೇ ವ್ಯಕ್ತಿಯ ಬೆಳವಣಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನಿಟ್ಟು ಆಸಕ್ತಿ ಮತ್ತು ಶ್ರದ್ಧೆಯಿಂದ ಶಕ್ತಿಗನುಸಾರವಾಗಿ ಓದಿ ಪ್ರಥಮ ದರ್ಜೆಯಲ್ಲಿ ಪಾಸಾದ ನಮ್ಮ ಹಳ್ಳಿ ಹುಡುಗ ನಿರಂಜನ.
ಭವಿಷ್ಯದ ಬಗ್ಗೆ ಯಾವುದೇ ರೀತಿಯ ಮಾನಸಿಕ,ಆರ್ಥಿಕ ಸಿದ್ಧತೆಗಳಲ್ಲಿದಿರುವುದರ ಕಾರಣ,
ಇವನ ಫಲಿತಾಂಶ ಕಂಡು ಸಲಹೆಗಾರರಾದವರು ಉಂಟು,ಮನೆಯ ಪರಿಸ್ಥಿತಿಯ ಕಂಡು ಸಲಹೆ ನೀಡಿದವರು ಉಂಟು
ಆದರೆ ದೈವಿಚ್ಛೆಯಿಂದ ಸಮಯಕ್ಕೆ ಸರಿಯಾಗಿ ಸಹಾಯ ಮಾಡಿದವರು ಉಂಟು.
 ಕಷ್ಟದಲ್ಲಿರುವವರಿಗೆ ಸಾಮಾಜಿಕ ಜೀವನ ಭಾರವೇ ಸರಿ ಎಂದು ಸಮಾಧಾನ ಮಾಡಿಕೂಂಡನು,ಸಮಾಜದ ನೈಜ ಚಿತ್ರಣ ಜೀವನದ ಇಳಿಯ ವಯಸ್ಸಿನಲ್ಲಿಯೇ ಹದವಾದ ಮನಸ್ಸಿನಲ್ಲಿ ಮೂಳಕೆ ಒಡೆಯಿತು. 
ಸಂಬಂಧಿಕರ ಮನೆಯಲ್ಲಿದ್ದು ಸಿ.ಇ.ಟಿ ಬರೆದು ಫಲಿತಾಂಶ ಬಂದೊಡನೆ  ಸ್ನೇಹಿತರ ಜೊತೆ ಚರ್ಚಿಸಿ ಇಂಜಿನಿಯರಿಂಗ್ ಮಾಡಲು ನಿರ್ಧರಿಸಿ ಎಲ್ಲ ದಾಖಲಾತಿಗಳೊಡನೆ ಬೆಂಗಳೂರಿಗೆ ಹೊರಡುವ ಇಂಟರ್ ಸಿಟಿ ರೈಲನ್ನು ಎರಿ, ತಂದೆಯವರೊಡನೆ ಹೊರಟೆಬಿಟ್ಟನು.
ರೈಲು ಪ್ರಯಾಣವು ಮೊದಲು,ಬೆಂಗಳೂರಿನ ಕಡೆ ಪ್ರಯಾಣವು ಮೊದಲು, ಮನಸ್ಸಿನಲ್ಲಿ ಎದ್ದ ಪ್ರಶ್ನೆಗಳೆಲ್ಲ ಹೊಸತು.ಮೊದಲಿನಿಂದಲು ತಂದೆಯೊಡನೆ ಮಾತುಗಳು ವಿರಳ ಹಾಗು ಅವರ ಆರೋಗ್ಯದ ದೃಷ್ಟಿಯಿಂದ ಅವರನ್ನು ಕೇಳುವಂತಿಲ್ಲ ಎಂದು ಸುತ್ತ ನೋಡಿದಾಗ ರೈಲು ವೇಗದಿಂದ ಮುನ್ನುಗ್ಗುತ್ತಿತ್ತು,ಅಷ್ಟೇ ವೇಗವಾಗಿ ಗಿಡಮರಗಳು ಹಿಂದೆ ಓಡುತ್ತಿದ್ದವು.ಮನಸ್ಸು ಮಾತ್ರ ಹಸಿವಿನಿಂದ ಕಂಗಾಲಾದ ಪಂಜರದೊಳಗಿನ ಹಕ್ಕಿಯಂತಾಗಿತ್ತು.
ಸತತ ಆರು ಗಂಟೆಗಳ ಪ್ರಯಾಣ,ನಡುವೆ ಮನಸ್ಸಿಗೆ ಹತ್ತಿರವಾದ ಹಾಡುಗಳ ಗುನು ಗುನು,ಕರಿದ ತಿಂಡಿಗಳ ಸ್ವಾದ,ನನಗಿಷ್ಟವಾದ ವಿಷಯಗಳ ವಿಚಾರ ಮತ್ತು ಕೊನೆಯಲ್ಲಿ ಸ್ವಲ್ಪ ನಿದ್ದೆ ಇಷ್ಟೆಲ್ಲ ಆದ ನಂತರ,ಕೆಂಪೇಗೌಡ ರೈಲ್ವೇ ನಿಲ್ದಾಣ ಬಂದಾಯಿತು,ಜೀವನದಲ್ಲಿ ಪ್ರಥಮಬಾರಿಗೆ ಸಂಬಂಧಿಕರ ಐಷಾರಾಮಿ ಕಾರಿನ ಬಾಗಿಲನ್ನು ತಗೆದು ಕೂತು ಹೊರಟಾಗ ಸುತ್ತಲು ರಾತ್ರಿ, ಬೀದಿ ದೀಪಗಳ ಬೆಳಕಲ್ಲಿ  ಬೆಂಗಳೂರು ಎಂಬ ಸಾಮ್ರಾಜ್ಯ,ಆಕಾಶದೆತ್ತರಕ್ಕೆ ಬೆಳೆದ ಕಟ್ಟಡಗಳ ಸಭಾಂಗಣ,ಅಲ್ಲಿ ವಾಹನಗಳ ದರ್ಬಾರು ಕೊನೆಯಲ್ಲಿ ಸೇವಕರಂತೆ ಓಡಾಡುತ್ತಿರುವ ಮನುಷ್ಯರು ಹೀಗೆ ತಾನು ನೋಡಿದ ಪೌರಾಣಿಕ ನಾಟಕದ ವೇದಿಕೆಗೆ  ಹೋಲಿಸುವುದರೂಳಗಾಗಿ ಕಾರು ಮನೆಯ ಕಾಂಪೌಂಡ್ ಒಳಗಡೆ ನಿಂತಿತ್ತು.
ಹುಟ್ಟಿನಿಂದ ತಾನು ನೋಡದ ಗೌರವಾನ್ವಿತ ತುಂಬಿದ ಕುಟುಂಬ,ಎಂದಿಗೂ ಮಾತನಾಡಿಸದ ವ್ಯಕ್ತಿಗಳ ಮನೆಯಲ್ಲಿ ವಾಸ್ತವ್ಯ ಹೊಸ ಅನುಭವ  ಮತ್ತು ಅವರ ಜೊತೆ ಸಂಭಾಷಣೆಯ ಸಂಕಷ್ಟ ಬೇಡವೆಂದು ಮೌನಕ್ಕೆ ಶರಣಾಗಿ ನಿದ್ದೆಗೆ ಜಾರಿ ಬಿಟ್ಟೆ.
ಮರುದಿನ ಬೆಳಿಗ್ಗೆ ಸೀಟು ಹಂಚಿಕೆಯ ಸ್ಥಳಕ್ಕೆ ಬಂದ ಹಳ್ಳಿ ಹುಡುಗನಿಗೂಂದು ಆಶ್ಚರ್ಯ ಕಾದಿತ್ತು ಎಂದು?ಅವನಿಗೆ ಸೀಟು ಸಿಗುತ್ತಾ?ಉಳಿದ ವಿದ್ಯಾರ್ಥಿಗಳಿಗೆ ನಿರಂಜನನಿಗೂ ಏನು ವ್ಯತ್ಯಾಸ?ಅವನ ಬಾಲ್ಯ ಹೇಗಿತ್ತು?
                         
                                     ಮುಂದುವರೆಯುವುದು.........

Comments

  1. Ur write up.. made me to revisit my cet days with my Father

    ReplyDelete
  2. ಶುರುವಾತು ಚೆನ್ನಾಗಿದೆ. ಮುಂದುವರೆಸಿ.

    ReplyDelete
  3. ಧನ್ಯವಾದಗಳು ತಾಯಿ ಜಿ

    ReplyDelete
  4. Seat sikto ilvo Niranjan'ge? Bega mundinbaaga barali hoduva... Nice one.. keep up the good work

    ReplyDelete

Post a Comment