ಅನುಭವದ ಬುತ್ತಿ
ಸತತವಾಗಿ ಏಳು ದಿನಗಳಿಂದ ಸರ್ವಂ ಸಂಘಮಯವಾದ ವಾತಾವರಣದಲ್ಲಿ ನಡೆದ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಶಾರೀರಿಕ , ಮಾನಸಿಕ ಮತ್ತು ಬೌದ್ಧಿಕ ಅದೇ ರೀತಿ ವ್ಯಕ್ತಿ , ಪರಿವಾರ , ಸಮಾಜ ಮತ್ತು ದೇಶದ ಕುರಿತಾದ ಅನುಭವದ ಬುತ್ತಿಯನ್ನು ಎಲ್ಲರಿಗೂ ಹಂಚುವ ಪ್ರಯತ್ನ , ಅನುಭವಿಸಿದವರು ಮೆಲಕು ಹಾಕಲಿ , ಅನುಭವ ಇಲ್ಲದವರು ಸಿಧ್ಧರಾಗಲಿ , ಆದರೆ ಸೇವೆ ಮಾತ್ರ ಯಾವುದಾದರೂ ಒಂದು ರೂಪದಲ್ಲಿ ನಿರಂತರವಾಗಿರಲಿ . ಸುವಿಚಾರಭರಿತ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ನಿರ್ಲಕ್ಷಿಸಿರುವುದು ಮತ್ತು ಅದಕ್ಕೆ ಕಾಲವನ್ನು ಹೊಣೆ ಮಾಡಿ ಸಮರ್ಥಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ , ಆದರೆ ನಿಜವಾಗಲೂ ಬದಲಾಗಿರುವುದು ಕಾಲವಲ್ಲ ನಮ್ಮ ಮನಸ್ಥ...