ಅನುಭವದ ಬುತ್ತಿ

                             ಸತತವಾಗಿ ಏಳು ದಿನಗಳಿಂದ ಸರ್ವಂ ಸಂಘಮಯವಾದ ವಾತಾವರಣದಲ್ಲಿ ನಡೆದ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ   ಶಾರೀರಿಕ,ಮಾನಸಿಕ ಮತ್ತು ಬೌದ್ಧಿಕ ಅದೇ ರೀತಿ ವ್ಯಕ್ತಿ,ಪರಿವಾರ,ಸಮಾಜ ಮತ್ತು ದೇಶದ ಕುರಿತಾದ ಅನುಭವದ ಬುತ್ತಿಯನ್ನು ಎಲ್ಲರಿಗೂ ಹಂಚುವ ಪ್ರಯತ್ನ,ಅನುಭವಿಸಿದವರು ಮೆಲಕು ಹಾಕಲಿ,ಅನುಭವ ಇಲ್ಲದವರು ಸಿಧ್ಧರಾಗಲಿ,ಆದರೆ ಸೇವೆ ಮಾತ್ರ ಯಾವುದಾದರೂ ಒಂದು ರೂಪದಲ್ಲಿ ನಿರಂತರವಾಗಿರಲಿ.

 ಸುವಿಚಾರಭರಿತ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ನಿರ್ಲಕ್ಷಿಸಿರುವುದು ಮತ್ತು ಅದಕ್ಕೆ ಕಾಲವನ್ನು ಹೊಣೆ ಮಾಡಿ ಸಮರ್ಥಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ,ಆದರೆ ನಿಜವಾಗಲೂ ಬದಲಾಗಿರುವುದು ಕಾಲವಲ್ಲ ನಮ್ಮ ಮನಸ್ಥಿತಿಯ ಮೇಲೆ ಪಾಶ್ಚಾತ್ಯರ ಕುತಂತ್ರ  ಅನುಶಾಸನಗಳು.ದೇಶದ ಶಿಕ್ಷಣ ವ್ಯವಸ್ಥೆಯ ಹರಿಕಾರನು ಇತಿಹಾಸ,ಪರಂಪರೆ,ಸಂಸ್ಕೃತಿ ಮತ್ತು ಭೂಗೋಳಿಕ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿರಬೇಕು ಇಲ್ಲವಾದಲ್ಲಿ ಇವುಗಳ ಬಗ್ಗೆ ಗೌರವ ಉಳ್ಳವನಾಗಿರಬೇಕು. ವಿಷಯದಲ್ಲಿಸ್ವತಂತ್ರ ಪೂರ್ವದಿಂದಲೂ ದೇಶವನ್ನು ಹಾಳು ಮಾಡಲು ಬಂದ ಪರಕೀಯರ ಶಿಕ್ಷಣ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದ   ಭಾರತದ ಸಂಗತಿ  ದುರದೃಷ್ಟಕರವೇ ಸರಿ,

 ಭಾರತದ ಮೇಲೆ ನಡೆದ ಆಕ್ರಮಣಗಳೆಷ್ಟೋ ದರೋಡೆಗಳೆಷ್ಟೋ ಅನ್ಯಾಯಹಿಂಸೆ ಮತ್ತು ಅತ್ಯಾಚಾರಗಳೆಷ್ಟೋ ಆದರು ಅಂದಿನಿಂದ ಇಂದಿನವರೆಗೂ ಭಾರತೀಯರ ಸಾಧನೆಗಳು ಶತ ಶತಮಾನಗಳಿಂದ  ನಿರಂತರವಾಗಿ ನಡೆಯುತ್ತಲೇ ಇದೆ,ಇದಕ್ಕೆ ಕಾರಣ ಸ್ವಾವಲಂಭಿ,ಸ್ವಾಭಿಮಾನಿ  ಪೂರ್ವಜರು ಪಾಲಿಸಿದ ಸನಾತನ ಧರ್ಮಾಧಾರಿತ ಜೀವೆನ ಶೈಲಿ ಮತ್ತು ಅದರ ಅನುವಂಶೀಯ ಅಂಶಗಳು.

೧೯೨೫ರಲ್ಲಿ ಪ್ರಾರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನಿರಂತರವಾಗಿಅಂದಿನಿಂದ ಇಂದಿನವರೆಗೂ ಯುವ ಜನಾಂಗವನ್ನು ವರ್ಗ,ಶಿಬಿರಗಳ ಮೂಲಕ ಸನಾತನ ಧರ್ಮ,ಸಂಸ್ಕೃತಿ,ನೈಜ ಇತಿಹಾಸ,ಮಾತೃಭೂಮಿ ಮತ್ತು ಸ್ವದೇಶೀ ಕುರಿತಾಗಿ ವಿಚಾರಗಳನ್ನು ಸ್ಪಷ್ಟಪಡಿಸುತ್ತ ವ್ಯಕ್ತಿಗಳ ವ್ಯಕ್ತಿತ್ವವನ್ನು ರೂಪಿಸಿವುದರ  ಜೊತೆಗೆ ರಾಷ್ಟ್ರೀಯ ಭಾವನೆಯನ್ನು ಸದೃಢ ಗೂಳಿಸುವುದರ ಜೊತೆಗೆ ಶಿಸ್ತು,ಸಮಯ ಪರಿಪಾಲನೆ ಹಾಗು ಸದಾಚಾರಗಳನ್ನು ಮೈಗೂಡಿಸುತ್ತಿದೆ ಅಂದು, ಇಂದು ಮತ್ತು ಮುಂದು.  

ವಯಸ್ಸಿನ ಮತ್ತು ವಿದ್ಯಾರ್ಹತೆಯ ಮಾನದಂಡವಿಲ್ಲದೆ ಏಕರೂಪ ವ್ಯಕ್ತಿ  ನಿರ್ಮಾಣದ ಕಾರ್ಯವನ್ನು ಎರಡು ವಿಧಗಳಲ್ಲಿ ಮಾಡಲಾಗುತ್ತದೆ.ಮೊದಲನೆಯದು ಶಾರೀರಕವಾಗಿ ಯೋಗ, ನಿಯುದ್ಧ, ದಂಡ ಪ್ರಹಾರ ಮತ್ತು ಆಟ. ಎರಡನೆಯದು ಬೌದ್ಧಿಕವಾಗಿ ಶ್ಲೋಕ,ಕಥೆ,ಗೀತೆ ಮತ್ತು ಭಾಷಣ ಮಾಡಲಾಗುತ್ತದೆ.ಇವುಗಳಲ್ಲಿ ಮೌಲ್ಯ ತುಂಬಿರುವ ಕಥೆಗಳು,ದೇಶಭಕ್ತಿಯ ಸಾಹಿತ್ಯವಿರುವ ಗೀತೆಗಳು ಸಂಸ್ಕೃತದ ಶ್ಲೋಕಗಳು,ಇತಿಹಾಸ ಪರಂಪರೆಯ ಸಾಧನೆ ಹಿಂದೂ ಜೇವನ ಶೈಲಿ ಮತ್ತು ಸಂಘಟನಾತ್ಮಕ ವಿಷಯಗಳನ್ನು ಸಂಘದ ವಿವಿಧ ಜವಾಬ್ದಾರಿಯುಳ್ಳ ಹಿರಿಯರು ಮಂಡಿಸಿದರು

ಪ್ರಾಚೀನ ಕಾಲದ ಗುರುಕುಲ ಪಧ್ಧತಿಯಂತೆ ಶಿಕ್ಷಕ ಮತ್ತು ಶಿಕ್ಷಾರ್ಥಿಗಳು ಉತ್ಥಾನದಿಂದ ಪವಡಿಸುವವರೆಗೂ ಜೊತೆಯಲ್ಲೇ ಇದ್ದು,ಶಿಕ್ಷಾರ್ಥಿಗಳ ಸ್ವಭಾವ, ಆಲೋಚನೆ, ಭಾವನೆ,ಆರೋಗ್ಯ ಮತ್ತು ಕುಟುಂಬದ ಎಲ್ಲ ವಿಚಾರಗಳನ್ನು ತಿಳಿದಿಕೊಂಡು ನಂತರ ಅವರಿಗೆ ತಕ್ಕ ಹಾಗೆ ವಿಷಯಗಳನ್ನು ಕಲಿಸಿಕೊಡುತ್ತಿದ್ದರು.ಅವರ ಶ್ರದ್ಧೆ,ಸಮಯ ಪಾಲನೆ,ನಿಷ್ಠೆ ,ಸಹೋದರತೆ ಮತ್ತು ವ್ಯಕ್ತಿತ್ವವನ್ನು ಎಷ್ಟು ಹೊಗಳಿದರು ಸಾಲದು,ವ್ಯಕ್ತಿಯ ನಡುವೆ ಬಂಧನ ಮೂಡಿಸಿ ಕಾರ್ಯಗಳನ್ನು ಯಶಸ್ವಿಗೊಳಿಸುವ ಮಂತ್ರ ಅವರದ್ದು.

ಮುಕ್ತವಾದ ವಾತಾವರಣ,ವಿಚಾರಗಳ ಮಂಥನಕ್ಕೆ ಬೇಕಾದಷ್ಟು ಸ್ವತಂತ್ರ,ಸರಳ ಜೀವನ ಶೈಲಿ,ಆಟ,ಊಟ ಮತ್ತು ಪಾಠ, ಎಲ್ಲದರ ಮಧ್ಯೆ ವಯಕ್ತಿಕ ಜೀವನದ ಎಲ್ಲ ಭವಬಂಧನಗಳಿಂದ ಮುಕ್ತವಾಗಿ ಜಂಗಮವಾಣಿಯಿಂದ ದೂರವಾಗಿ ಎಲ್ಲ ಶಿಕ್ಷಾರ್ಥಿಗಳು ತನು,ಮನದಿಂದ  ವರ್ಗದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಪ್ರತಿಯೊಬ್ಬರನ್ನು ಮುಕ್ತವಾಗಿಸುವ ಹಿಂದೂ ಸಮಾಜದ ಸನಾತನ ಧರ್ಮಾಧಾರಿತ ಮೌಲ್ಯಗಳ ಮತ್ತು ಅನುಶಾಸನಗಳ ಮಹತ್ವವನ್ನು,ಅದೇ ರೀತಿ ರಾಷ್ಟ್ರಾಭಿಮಾನದ ಜೂತೆಗೆ ಸಮಾಜಕ್ಕೆ ಅವಶ್ಯಕತೆ ಇರುವ ಸೇವಾ ಕಾರ್ಯದ ಅವಶ್ಯಕತೆಯನ್ನುಸಧೃಡಗೂಳಿಸಿ,ಕಾರ್ಯೋನ್ಮುಖರಾಗುವಂತೆ ಸ್ಪೂರ್ತಿಯ ಚಿಲುಮೆಯನ್ನು ಹರಿಸಲಾಯಿತು.

ಇನ್ನು ಶಿಕ್ಷಾರ್ಥಿಗಳನ್ನು ವರ್ಗಕ್ಕೆ ಪೋಷಕರು ಸ್ವಯಂಪ್ರೇರಿತರಾಗಿ ಕಳುಹಿಸಿದ್ದು ಉಂಟು,ಊರಿನ ಹಿರಿಯರು ತಮ್ಮ ಸಂಪರ್ಕದಲ್ಲಿದ್ದ ಯುವಕರನ್ನು ಸಮಾಜ ಸೇವಕರನ್ನಾಗಿ ಮಾಡಲು ಸೇರಿಸಿದ್ದು ಉಂಟು,ಅದೇ ರೀತಿ ದೂರದ ಮುಂಬೈನಿಂದ ಹಾಗು ತಂದೆಯನ್ನು ಕಳೆದುಕೊಂಡು ತಿಂಗಳು ಕೂಡ ಆಗದವರು ಬಂದದ್ದು ವಿಶೇಷವಾಗಿತ್ತು.ಅನಾರೋಗ್ಯದಿಂದ ಇದ್ದ ತಂದೆ ತಾಯಿಗಳನ್ನು ಮತ್ತು ಗರ್ಭಿಣಿ ಹೆಂಡತಿಯನ್ನು ಬಿಟ್ಟು ಬಂದಂತಹ ಶಿಕ್ಷಕರು ತಾಯಿ ಭಾರತ ಮಾತೆಯ ಸೇವೆಗಾಗಿ ಕಂಕಣ ಕಟ್ಟಿ ನಿಂತ ದೇಶಭಕ್ತರಂತೆ ಕಂಡದ್ದು ಸತ್ಯ.ಭೀಷ್ಮ ಪಿತಾಮಹರಂತಹ ಹಿರಿಯರು ವಿವಿಧ ವಿಷಯಗಳನ್ನು ಆಳವಾದ ಅಧ್ಯಯನ ಮಾಡಿ ತಮ್ಮ ಭಾಷಣ ಚತುರತೆಯಿಂದ ಉತ್ಸಾಹ ಭರಿತ ರಾಷ್ಟ್ರೀಯತೆ ಮತ್ತು ಸೇವಾ ಭಾವದ ಬೀಜ ಬಿತ್ತಿದರು.ಇನ್ನು ಊರಿನ ಪ್ರಮುಖರೆಲ್ಲಾಸೇರಿ ಸಂಘಟಿತರಾಗಿ ತಮ್ಮ ಮನೆಗೆ ಬಂದ ಅಥಿತಿಗಳಂತೆ ಸಕಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೋಡಿಕೊಂಡರು,ಊರಿನ ತಾಯಂದಿರೆಲ್ಲಾ ಅಡುಗೆ ಮಾಡಿಕೊಡು. ಬಂದು ಭೋಜನ ಬಡಿಸಿದ ಸನ್ನಿವೇಶ ಅವಿಸ್ಮರಣೀಯ. ಸೂರ್ಯೋದಯ ಮತ್ತು ಸೂರ್ಯಾಸ್ತದಲ್ಲಿ ಸಂಘಸ್ಥಾನದ  ಭಾಗಧ್ವಜಕ್ಕೆ ನಮಸ್ಕರಿಸಿ ಶಾರೀರಿಕ ಚಟುವಟಿಕೆಯನ್ನು ಮಾಡಿವುದೇ ಒಂದು ಸಂಕ್ರಾಂತಿ ಮತ್ತು `ವಿಜಯದಶಮಿಯಂತೆ ಭಾಸವಾಗುತ್ತಿತ್ತು.

ಸ್ಥಾಪನೆಯಾಗಿ ಶತಕಗಳ ಹೂಸ್ತಿಲಲ್ಲಿ ಇರುವ ಸಂಘವು ತನಗೆ ಒದಗಿ ಬಂದ ಅಡೆತಡೆಗಳನ್ನೆಲ್ಲ,ಅವಹೇಳನಗಳನ್ನೆಲ್ಲ ಮೀರಿ ಗಟ್ಟಿಯಾಗಿ ಗೌರವಯುತವಾಗಿ ನಿಲ್ಲಲು ಕಾರಣವನ್ನು ನೋಡಿದಾಗ ಕಂಡಿದ್ದು,ಸರ್ವಕಾಲಕ್ಕೂ ಸಮಂಜಸವಾಗಿರುವ ಸಿದ್ದಾಂತ ,ಸ್ವರೂಪ ಮತ್ತು ಚಟುವಟಿಕೆಗಳು.  

ಇವನ್ನೆಲ್ಲಾಅನುಭವಿಸಿದ ನಂತರ ಕೊನೆಯಲ್ಲಿ ಉಳಿದ ಭಾವನೆ ಎಂದರೆ, "ಸೂರ್ಯ ಚಂದ್ರ ರಿರುವದೆಷ್ಟು ಸತ್ಯವೋ, ಸಂಘವು ಸರ್ವವ್ಯಾಪಿ ಮತ್ತು ಸರ್ವ ಸ್ಪರ್ಶಿಯಾಗುವುದು ಅಷ್ಟೇ ಸತ್ಯ" ಎನ್ನುವುದು.

 

 

ಹೇಮಂತಕುಮಾರ್ ಆರ್ ಕಪ್ಪಾಳಿ                     ಬಳ್ಳಾರಿ .  

 

Comments