"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ " ಭಾಗ ೨

 ಶೈಕ್ಷಣಿಕ ವ್ಯ್ವವಸ್ಥೆಯನ್ನು ಗಮನಿಸಿದಾಗ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯ  ಬೆಳವಣಿಗೆಯ ಫಲಿತಾಂಶ ಮಾತ್ರ ನಮ್ಮ ಜನಸಂಖ್ಯೆಯ  ನಿರೀಕ್ಷಿತ ಮಟ್ಟವನ್ನು ಕಳೆದ  ತಲೆಮಾರುಗಳಿಂದ ನೋಡಲೇ ಇಲ್ಲ ಆದರೆ ಪ್ರಾಮಾಣಿಕ ಪ್ರಯತ್ನಗಳು ಆಗಿಲ್ಲ ಎಂಬ ಅರ್ಥದಲ್ಲಿ ಅಲ್ಲ. ಇಲ್ಲಿ ಉಲ್ಲೇಖಿಸಲಿರುವ ಶಿಕ್ಷಕ ಪದ, ವಿದ್ಯಾರ್ಥಿಯ ಪೂರ್ಣ ಶೈಕ್ಷಣಿಕ ಜೀವನದಲ್ಲಿ ಪಾತ್ರವಹಿಸಿದ ಎಲ್ಲರಿಗೂ ಸಂಬಂಧಿಸಿದ್ದಾಗಿದೆ.

ಪ್ರಸ್ತುತ ವ್ಯವಸ್ಥೆಯಲ್ಲಿಶಿಕ್ಷಣ ಎಂದಾಗ, ವಿದ್ಯಾರ್ಥಿ ಮತ್ತು ಶಿಕ್ಷಕರ ಜೊತೆಗೆ ಒಂದು ವ್ಯವಸ್ಥೆಯ  ಅಥವಾ ಚೌಕಟ್ಟಿನ ಪರಿಕಲ್ಪನೆ ಇದೆ  ಹಾಗು  ಚೌಕಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲದೆ ಹಲವರು ಭಾಗಿಯಾಗಿದ್ದು, ಅವರೆಲ್ಲರನ್ನು ನಿಭಾಯಿಸಿಕೊಂಡು, ಪಠ್ಯಕ್ರಮದಲ್ಲಿ ವಿಷಯವನ್ನು ಹೇಳಿಕೊಡುವ ವಾತಾವರಣ ನಿರ್ಮಾಣವಾಗಿದೆ.ಬದಲಾವಣೆಗೆ ಹೊಂದಿಕೊಳ್ಳುವ  ದೃಢತೆ ಮತ್ತು ಸಂಕಲ್ಪ ಮಾಡುವ ಮನಸ್ಥಿತಿ ಬರಬೇಕಾಗಿದೆ. ಬದಲಾವಣೆಯನ್ನು ಸ್ವೀಕರಿಸುವ ಮನಸ್ಸಿಗೆ  ವಿರೋಧ ಒಡ್ಡುವ ಅಂಶಗಳ ಮೂಲವನ್ನು ಹುಡುಕಿದಾಗ ಸಿಗುವ ಬೇರುಗಳು, ಮನುಷ್ಯನ ಮೆದುಳಿನ ಒಳಗಿರುವ ನರಮಂಡಲದ ರಚನೆಗಿಂತ ಕ್ಲಿಷ್ಟಕರವಾಗಿವೆ.ಒಂದು ಹಂತದಲ್ಲಿ,ಶಿಕ್ಷಕನ ಸ್ವತಂತ್ರವನ್ನು ಪ್ರಶ್ನೆ ಮಾಡುವಂತಹ ವಾತಾವರಣದಲ್ಲಿ ಗುಣಮಟ್ಟದ  ಶಿಕ್ಷಣವನ್ನು ವಿದ್ಯಾರ್ಥಿಗೆ ನೀಡಬಹುದಾ?ರಚನಾತ್ಮಕ ಚಿಂತನೆಗಳನ್ನು,ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಹೇಳಬಹುದಾ?

ನಮ್ಮ ನೆಲದ ಸಂಸ್ಕೃತಿ ಮತ್ತು  ಪುರಾಣಗಳಲ್ಲಿ ಹೇಳಿದಂತೆ, ವ್ಯಕ್ತಿಯನ್ನು ಎಲ್ಲ ಬಂಧನಗಳಿಂದ ಮುಕ್ತ ಗೂಳಿಸುವಂತಹ ಶಿಕ್ಷಣದ ಅವಶ್ಯಕತೆಯು, ವ್ಯಕ್ತಿಗೆ ಹಾಗು ಸಮಾಜಕ್ಕೆ ಇದೆ. ವ್ಯಕ್ತಿಯ ವ್ಯಕ್ತಿತ್ವದ ಬದಲಾವಣೆ ಆಗಿ, ಸುವಿಚಾರ,ಸುಸಂಸ್ಕೃತಿ ಮತ್ತು ಸ್ವದೇಶಿ ಭಾವನೆಯುಳ್ಳ ವಿದ್ಯಾವಂತನಾದಲ್ಲಿ ಸಮಾಜದಲ್ಲಿ ಅಂತಹವರಿಂದ ಬದಲಾವಣೆ ಬಯಸಹುದು.

ವ್ಯಕ್ತಿಯ,ಕುಟುಂಬದ,ಸಮಾಜದ ಹಾಗು ದೇಶದ  ಅಭಿವೃದ್ಧಿ  ಎನ್ನುವುದನ್ನು ನೋಡಿದಾಗ, ಮತ್ತದೇ ಪ್ರಶ್ನೆ  ವ್ಯಕ್ತಿಯ ಅಭಿವೃದ್ಧಿ ಎಂದರೆ, ಲೌಕಿಕವಾದ ಆಸ್ತಿ, ಅಂತಸ್ತು,ಮನೆ,ವಡವೆಗಳಲ್ಲ,ವ್ಯಕ್ತಿಯ ಅಭಿವೃದ್ಧಿ ಎಂದರೆ ಆತ್ಮ ಸಂತೃಪ್ತಿ ಮತ್ತು ಮಾನವ ಜನ್ಮದ ಅತ್ಯಂತ ಎತ್ತರದ ಅಭಿವೃದ್ಧಿ ಎಂದರೆ  ಮೋಕ್ಷ ಸಂಪಾದನೆ. ಸಮಾಜದ ಅಭಿವೃದ್ಧಿ ಎಂದರೆ ಹಿಂಸೆ,ಅಸೂಯೆ,ಕಳ್ಳತನ,ಹಸಿವು,ಅಪರಾಧಗಳಿಲ್ಲದ ಸೌಹಾರ್ದ ಮತ್ತು ಸಮಾನತೆಯಿಂದ,ಅನ್ಯೋನ್ಯವಾಗಿ ಬಾಳುವುದು.ಇನ್ನು ದೇಶದ ಅಭಿವೃದ್ಧಿ ಎಂದರೆ ವಿಶ್ವಕ್ಕೆ ಜ್ಞಾನ ,ಶಾಂತಿ,ಧರ್ಮ ಮತ್ತು ರಕ್ಷಣೆ ನೀಡುವ ಎತ್ತರಕ್ಕೆ ಬೆಳೆದಾಗ.

  ವ್ಯಕ್ತಿಯ ಪರಿವರ್ತನೆಗೆ ಪೂರಕವಾಗುವಂತಹ, ಶಿಕ್ಷಕರಿಗೆ ಸ್ವಾಯತ್ತತೆ ನೀಡುವಂತಹ ಮತ್ತು ವಿದ್ಯಾರ್ಥಿಗಳಿಗೆ ಮುಕ್ತವಾದ ಕಲಿಕಾ ವಾತಾವರಣ ಸೃಷ್ಟಿ ಮಾಡುವಂತಹ ಪ್ರಯತ್ನ ನಮ್ಮೆಲ್ಲರ ಹಕ್ಕು ಮತ್ತು ಜವಾಬ್ದಾರಿ ಆಗಬೇಕಾಗಿದೆ.ನಾವೆಲ್ಲರೂ ವಿದ್ಯಾರ್ಥಿಗಳಲ್ಲಿ ಚೈತನ್ಯ ಮತ್ತು ಸದಾಚಾರಗಳನ್ನು ಒಗ್ಗೂಡಿಸಿ ಸಮಾಜದ ಏಳಿಗೆಗಾಗಿ ದುಡಿಯುವ ಒಂದು ಶಕ್ತಿಯನ್ನಾಗಿ ನಿರ್ಮಾಣಮಾಡಿ,  ಅವರನ್ನು  ಜೀವನ ಎಂಬ ಯುದ್ಧದಲ್ಲಿ ಗೆಲ್ಲಲು ಬೇಕಾದ ಆತ್ಮಸ್ಥೈರ್ಯ,ಶಕ್ತಿ,ಯುಕ್ತಿಯನ್ನು ತುಂಬಬೇಕು  ಶಕ್ತಿಯಿಂದ ದೇಶವನ್ನು ವಿಶ್ವ ಶಕ್ತಿ ಮತ್ತು ವಿಶ್ವ ಗುರುವನ್ನಾಗಿ ಮಾಡಬೇಕು, ಸತ್ಕಾರ್ಯಕ್ಕಾಗಿ ಶಿಕ್ಷಣ-ಕಲಿಕೆ ಆಗುವ ಮತ್ತು ಶಿಕ್ಷಕ-ಗುರು ಆಗುವ ಅವಕಾಶ ಬಂದೊದಗಿದೆ ಬಂದಿದೆ ಎಂದು ಅಂಬೋಣ.

Comments