Posts

Showing posts from December, 2022

ಇತಿಹಾಸಕ್ಕೆಅಲಂಕಾರ – ನಮ್ಮ ಸುಭಾಷ ಚಂದ್ರ ಭೋಸ್ ಮತ್ತು ವಿ.ಡಿ. ಸಾವರ್ಕರ್.

  ಇತಿಹಾಸಕ್ಕೆಅಲಂಕಾರ – ನಮ್ಮ ಸುಭಾಷ ಚಂದ್ರ ಭೋಸ್ ಮತ್ತು ವಿ.ಡಿ. ಸಾವರ್ಕರ್. ಲೇಖಕ: ಶ್ರೀ ಹೇಮಂತ್‌ ಕುಮಾರ್‌ ಕಪ್ಪಾಳಿ , ಸಹ ಪ್ರಾಧ್ಯಾಪಕ, ಬಿ,ಐ.ಟಿ.ಎಂ ಕಾಲೇಜು,ಬಳ್ಳಾರಿ. ೧.ಪೀಠಿಕೆ: ಭಾರತವು ಪರಕೀಯರ ದಾಳಿ, ಕುತಂತ್ರ ಮತ್ತು ದೌರ್ಜನ್ಯಗಳನ್ನು ಸಹಿಸಿಕೊಂಡು, ಸಂಸ್ಕೃತಿ-ಧರ್ಮ-ಭಕ್ತಿ-ಕ್ಷಾತ್ರತೆಯ ಸಂಘರ್ಷದ ಇತಿಹಾಸದ ಆಜಾದಿಕಾ ಅಮೃತೋತ್ಸವದ ಆಚರಣೆಯ ಅಂತಿಮ ಘಟ್ಟವು, ಮುಂದಿನ ಪೀಳಿಗೆಗೆ ಈ ಮೂರು ಅಂಶಗಳನ್ನು ಮನದಟ್ಟು ಮಾಡಿಕೊಟ್ಟಿದೆ. ಸ್ವಾತಂತ್ರ ಹೋರಾಟದ ಹಾದಿಯು ಕೇವಲ ಅಹಿಂಸೆ, ಸತ್ಯಾಗ್ರಹ, ಚಳುವಳಿ ಮಾರ್ಗದಿಂದ ಅಲ್ಲದೇ, ಹಿಂಸೆ ಮತ್ತು ಕ್ರಾಂತಿಯಿಂದಲೂ ಕೂಡಿದೆ. ಅಙ್ನಾತವಾಗಿದ್ದ ತ್ಯಾಗ, ಬಲಿದಾನ ಮತ್ತು ಹೋರಾಟಗಾರರ ಸ್ಮರಣೆ. ಭಾರತವನ್ನು ವಿಶ್ವಶಕ್ತಿ- ವಿಶ್ವಗುರುವನ್ನಾಗಿಸುವುದು. ದೇಶದ ಇತಿಹಾಸದ ಬಗ್ಗೆ ಹೊಸ-ಹೊಸ ಆಯಾಮಗಳು ಮುಂಬರುತ್ತಿರುವುದನ್ನು ಕಾಣುತ್ತಿದ್ದೇವೆ ಹಾಗು ಇದೇ ವಾತಾವರಣ ಜಾಗತಿಕ ಮಟ್ಟದಲ್ಲೂಇರುವುದು ನಿಜವಾದ ಸಂಗತಿ.ಈ ಸಂದರ್ಭದಲ್ಲಿ ಇಬ್ಬರು ಮಹಾನ್‌ ವ್ಯಕ್ತಿಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ. ಆ ವ್ಯಕ್ತಿಗಳೆಂದರೇ, ೧) ಸುಭಾಷ ಚಂದ್ರ ಭೋಸ್, ೨) ವಿ.ಡಿ. ಸಾವರ್ಕರ್. ಸುಭಾಷ್‌ ಅವರನ್ನು ಶೈಕ್ಷಣಿಕ ಹಿನ್ನಲೆಯಿಂದ ಹಾಗು ಸಾವರ್ಕರ್‌ ಅವರನ್ನು ವ್ಯಕ್ತಿತ್ವ ವಿಚಾರ ಹಾಗು ಹಿಂದೂತ್ವದ ಹಿನ್ನಲೆಯಲ್ಲಿ ಬಿಂಬಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಕಾಣಬಹುದು. ೨.ಹಿನ್ನಲೆ: ೨