ಇತಿಹಾಸಕ್ಕೆಅಲಂಕಾರ – ನಮ್ಮ ಸುಭಾಷ ಚಂದ್ರ ಭೋಸ್ ಮತ್ತು ವಿ.ಡಿ. ಸಾವರ್ಕರ್.

 ಇತಿಹಾಸಕ್ಕೆಅಲಂಕಾರ – ನಮ್ಮ ಸುಭಾಷ ಚಂದ್ರ ಭೋಸ್ ಮತ್ತು ವಿ.ಡಿ. ಸಾವರ್ಕರ್.

ಲೇಖಕ: ಶ್ರೀ ಹೇಮಂತ್‌ ಕುಮಾರ್‌ ಕಪ್ಪಾಳಿ, ಸಹ ಪ್ರಾಧ್ಯಾಪಕ, ಬಿ,ಐ.ಟಿ.ಎಂ ಕಾಲೇಜು,ಬಳ್ಳಾರಿ.


೧.ಪೀಠಿಕೆ:

ಭಾರತವು ಪರಕೀಯರ ದಾಳಿ, ಕುತಂತ್ರ ಮತ್ತು ದೌರ್ಜನ್ಯಗಳನ್ನು ಸಹಿಸಿಕೊಂಡು, ಸಂಸ್ಕೃತಿ-ಧರ್ಮ-ಭಕ್ತಿ-ಕ್ಷಾತ್ರತೆಯ ಸಂಘರ್ಷದ ಇತಿಹಾಸದ ಆಜಾದಿಕಾ ಅಮೃತೋತ್ಸವದ ಆಚರಣೆಯ ಅಂತಿಮ ಘಟ್ಟವು, ಮುಂದಿನ ಪೀಳಿಗೆಗೆ ಈ ಮೂರು ಅಂಶಗಳನ್ನು ಮನದಟ್ಟು ಮಾಡಿಕೊಟ್ಟಿದೆ.

  1. ಸ್ವಾತಂತ್ರ ಹೋರಾಟದ ಹಾದಿಯು ಕೇವಲ ಅಹಿಂಸೆ, ಸತ್ಯಾಗ್ರಹ, ಚಳುವಳಿ ಮಾರ್ಗದಿಂದ ಅಲ್ಲದೇ, ಹಿಂಸೆ ಮತ್ತು ಕ್ರಾಂತಿಯಿಂದಲೂ ಕೂಡಿದೆ.

  2. ಅಙ್ನಾತವಾಗಿದ್ದ ತ್ಯಾಗ, ಬಲಿದಾನ ಮತ್ತು ಹೋರಾಟಗಾರರ ಸ್ಮರಣೆ.

  3. ಭಾರತವನ್ನು ವಿಶ್ವಶಕ್ತಿ- ವಿಶ್ವಗುರುವನ್ನಾಗಿಸುವುದು.

ದೇಶದ ಇತಿಹಾಸದ ಬಗ್ಗೆ ಹೊಸ-ಹೊಸ ಆಯಾಮಗಳು ಮುಂಬರುತ್ತಿರುವುದನ್ನು ಕಾಣುತ್ತಿದ್ದೇವೆ ಹಾಗು ಇದೇ ವಾತಾವರಣ ಜಾಗತಿಕ ಮಟ್ಟದಲ್ಲೂಇರುವುದು ನಿಜವಾದ ಸಂಗತಿ.ಈ ಸಂದರ್ಭದಲ್ಲಿ ಇಬ್ಬರು ಮಹಾನ್‌ ವ್ಯಕ್ತಿಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ. ಆ ವ್ಯಕ್ತಿಗಳೆಂದರೇ, ೧) ಸುಭಾಷ ಚಂದ್ರ ಭೋಸ್, ೨) ವಿ.ಡಿ. ಸಾವರ್ಕರ್.

ಸುಭಾಷ್‌ ಅವರನ್ನು ಶೈಕ್ಷಣಿಕ ಹಿನ್ನಲೆಯಿಂದ ಹಾಗು ಸಾವರ್ಕರ್‌ ಅವರನ್ನು ವ್ಯಕ್ತಿತ್ವ ವಿಚಾರ ಹಾಗು ಹಿಂದೂತ್ವದ ಹಿನ್ನಲೆಯಲ್ಲಿ ಬಿಂಬಿಸುವ ಪ್ರಯತ್ನವನ್ನು ಈ ಲೇಖನದಲ್ಲಿ ಕಾಣಬಹುದು.


೨.ಹಿನ್ನಲೆ:

೨೧ನೇ ಶತಮಾನದ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸಿ (ಕೃತಕಬುದ್ದಿವಂತಿಕೆ) ಯ ಕಾಲದಲ್ಲಿ ನಾವಿದ್ದೇವೆ, ಆದರೆ ದೇಶದ ಇತಿಹಾಸದ ಬಗ್ಗೆ ಹೊಸ-ಹೊಸ ಆಯಾಮಗಳು ಮುಂಬರುತ್ತಿರುವುದನ್ನು ಕಾಣುತ್ತಿದ್ದೇವೆ ಹಾಗು ಇದೇ ವಾತಾವರಣ ಜಾಗತಿಕ ಮಟ್ಟದಲ್ಲೂಇರುವುದು ನಿಜವಾದ ಸಂಗತಿ.

ಭಾರತವು ಪರಕೀಯರ ಕುತಂತ್ರದ ದಾಳಿಯನ್ನು ಧರ್ಮದ ಆಧಾರದ ಮೇಲೆ ಭಕ್ತಿ - ಯುಕ್ತಿ-ಶಕ್ತಿಯ ಜೊತೆಗೆ ಸಂಸ್ಕೃತಿಕ ನೆರಳಿನಲ್ಲಿ ಹೋರಾಟ ಮಾಡಿದ ಏಕೈಕ ಅಖಂಡ ಹಿಂದೂ ರಾಷ್ಟ್ರ. ಸಂಘರ್ಷದ ಇತಿಹಾಸದ ಸ್ಪೂರ್ತಿಯಿಂದ ಸದೃಢ, ಸಶಕ್ತ, ಸಮನ್ವಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅನೇಕರು ಪ್ರಯತ್ನ ಮಾಡಿದ್ದಾರೆ. ಅವರಲ್ಲಿ ಯಶಸ್ವಿಯಾಗಿರುವುದಕ್ಕಿಂತ ಶಿಕ್ಷೆ ಅನುಭವಿಸಿರುವವರೇ ಹೆಚ್ಚು. ಅವರ ದಾರಿಯಲ್ಲಿಯೇ ಇಂದಿನ ಪ್ರತಿಯೊಬ್ಬ ಯುವಕ ಯುವತಿಯರು ವೈಚಾರಿಕವಾಗಿ ಕರ್ತವ್ಯವನ್ನು ನಿರ್ವಹಿಸುವ ಅವಶ್ಯಕತೆ ಇದೆ ಮತ್ತು ಅದಕ್ಕೆ ಪೂರಕ ವಾತಾವರಣವು ಎಲ್ಲ ಕ್ಷೇತ್ರಗಳಲ್ಲೂ ಸೃಷ್ಟಿಯಾಗಿರುವುದನ್ನು ನಾವು ದೇಶದಲ್ಲಿ ಕಾಣಬಹುದಾಗಿದೆ.


೨೧ನೇ ಶತಮಾನದ ಆರಂಭದಲ್ಲಿ ಕೃತಕ ಬುದ್ಧಿವಂತಿಕೆ, ಡಿಜಿಟಲ್ ಯುಗದಲ್ಲಿರುವ ಯುವಕನಾಗಿ ಭೌಗೋಳಿಕವಾಗಿ,ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಭಾರತದ ಸುದೀರ್ಘವಾದ ಇತಿಹಾಸವನ್ನು ದೇಶದ ಮಹತ್ತರವಾದ ಜನಾಂದೋಲನವಾಗಿ ನೋಡಬೇಕೇ  ಹೊರತು ಕೆಲವೇ ಕೆಲವು ವ್ಯಕ್ತಿಗಳಿಗೆ ಮತ್ತು ಪಕ್ಷಗಳಿಗೆ ಸೀಮಿತಗೂಳಿಸುವುದು ಸಮಂಜಸವೇ? ಇದು ವಿಚಾರ ಮಾಡುವ ಸಂಗತಿ ತಾನೇ?

ಸ್ವಾತಂತ್ರ ಹೋರಾಟದ ವಿಷಯ ಮುನ್ನೆಲೆಗೆ ಬಂದಾಗಲೆಲ್ಲ ಕೆಲವು ವ್ಯಕ್ತಿಗಳ ಹೆಸರುಗಳನ್ನು ನಮ್ಮ ಬಾಲ್ಯಾವಸ್ಥೆಯಲ್ಲಿ ಹೇಳಿಕೊಟ್ಟಿರುವುದು ೧) ಗಾಂಧೀಜಿ ) ಜವಾಹರಲಾಲ್ ನೆಹರು ) ಲಾಲ್ ಬಹಾದ್ದೂರ್ ಶಾಸ್ತ್ರೀ, ಅದೇ ರೀತಿ ಹೋರಾಟ ಮಾಡಿದ ಸಂಘಟನೆಗಳ ದೃಷ್ಟಿಯಿಂದ ನೋಡಿದಾಗ ಭಾರತದ ರಾಷ್ಟೀಯ ಕಾಂಗ್ರೆಸ್, ಇವುಗಳ ಮಧ್ಯ ಹಿನ್ನಲೆಗೆ ಸರಿದುದು  ಸಾವರ್ಕರ್, ಖುದಿರಾಮ್ ಬೋಸ್ ಮತ್ತು ಸುಭಾಷರವರಂತಹ ಅಸಂಖ್ಯಾತ ಹೆಸರುಗಳು. ವೈಚಾರಿಕತೆಯ ದೃಷ್ಟಿಯಿಂದ ಭಾರತೀಯ ಇತಿಹಾಸದ ಔಪಚಾರಿಕ ಶಿಕ್ಷಣದಿಂದ ಇವರನ್ನು ದೂರ ಇಡುವುದರ ಉದ್ದೇಶವೇನು? ಈ ಹಿನ್ನೆಲೆಯ ಹುಡುಕುವಿಕೆಯ  ಪ್ರಯತ್ನ ನಡೆಯಬೇಕಿದೆ. ಬ್ರಿಟಿಷರು ನಮ್ಮ ಶಿಕ್ಷಣ,ಕುಟುಂಬ,ಸಮಾಜ ವ್ಯವಸ್ಥೆಯಲ್ಲಿದ್ದ ವೈಜ್ಞಾನಿಕ ಮತ್ತು ಧನಾತ್ಮಕ ವಿಷಯಗಳನ್ನು ಒಡೆದಾಳುವ-ವಸಹಾತು ನೀತಿಯಿಂದ ದೂರ ಮಾಡಿದಂತೆ ಸಾವರ್ಕರ್ ಅವರನ್ನು ಜೈಲು ಶಿಕ್ಷೆಯ ಹೆಸರಿನಲ್ಲಿ ವಿದೇಶಿ ನೆಲದಲ್ಲಿಯೇ ಬಂಧನ ಮಾಡಿ ಸಮಾಜದಿಂದ ದೂರವಿಡುವ ಪ್ರಯತ್ನ ನಡೆಸಿದ್ದರು.

೩. ಸುಭಾಷ ಚಂದ್ರ ಭೋಸ್

ಶ್ರೀ ಸುಭಾಷ್ ಜಿ ಅವರ ಜೀವನವನ್ನು ನೋಡಿದಾಗ ಅನೇಕ ಸ್ಪೂರ್ತಿದಾಯಕ ಸನ್ನಿವೇಶಗಳುoಟು, ಅದೇ ರೀತಿ ಕೆಲವೊಂದು ಊಹಾಪೋಹಗಳು ಉಂಟು, ಆದರೆ ನಾನು  ಪ್ರಸ್ತಾಪಿಸುತ್ತಿರುವ ವಿಷಯವು, ಸರಿಸುಮಾರು ೧೦೦ ವರ್ಷಗಳಾಗುತ್ತಾ ಬಂದರೂ ಅವರ ವಿಚಾರ, ವ್ಯಕ್ತಿತ್ವ ಮತ್ತು ಸಾಧನೆ ಗಳನ್ನು ಸಮಾಜ ಮರೆಯುತ್ತಿಲ್ಲ ಎಂದರೆ ಆ ವ್ಯಕ್ತಿಯ ವ್ಯಕ್ತಿತ್ವ ಈಗಿನ  ಸಮಾಜಕ್ಕೆ ಅವಶ್ಯವಲ್ಲವೇ?

ಅವರ  ಶೈಕ್ಷಣಿಕ ಜೀವನ ಅಂದರೆ ೮ ರಿಂದ ೨೨ ವಯಸ್ಸಿನವರೆಗಿನ ಅನುಭವವನ್ನು  ನಮ್ಮ ಯುವಜನತೆಗೆ ಮುಟ್ಟಿಸುವ ಉದ್ದೇಶ ಒಳ್ಳೆಯದಲ್ಲವೇ? . ಸಮಾಜಕ್ಕೆ ಮತ್ತೊಬ್ಬ ಸುಭಾಷ್ ಜಿ  ಅವರನ್ನು ರೂಪಿಸುವ ಉದ್ದೇಶ ಖಂಡಿತ ನನ್ನದಲ್ಲ ಆದರೆ ಅವರ ಗುಣ,ಸ್ವಭಾವ,ಉದ್ದೇಶ ಮತ್ತು ಗುರಿ ಇಂದಿಗೂ ಅತ್ಯವಶ್ಯಕ ಎಂಬುದನ್ನು ನಾವು ತಗೆದು ಹಾಕುವಂತಿಲ್ಲ.

ಸುಭಾಷ್ ಜಿ ತಮ್ಮ ಶಿಕ್ಷಣವನ್ನು ಪ್ರೊಟೆಸ್ಟೆಂಟ್ ಯುರೋಪಿಯನ್ ಶಾಲೆಯಿಂದ ೧೯೦೭ ರಲ್ಲಿ ಆರಂಭಿಸಿದರು ಆದ್ರೆ ಬ್ರಿಟಿಷರ ಶಿಕ್ಷಣ ಪದ್ದತಿಯ ಪರಿಸರ ಇವರ ಮನಸ್ಸಿಗೆ ಹಿಡಿಸದ ಕಾರಣ ಭಾರತೀಯ ಶಿಕ್ಷಣ ಪದ್ದತಿಯನ್ನು ಅನುಸರಿಸುತ್ತಿದ್ದ  Revenshaw collegiate school ಸೇರುತ್ತಾರೆ.ಅಲ್ಲಿ ಮುಖ್ಯೋಪಾಧ್ಯಾಯರಾಗಿ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿದ್ದ ಭೇನಿ ಮಾಧವನ್ ದಾಸ್ ಅವರ ಸಂಪರ್ಕಕ್ಕೆ ಬಂದರು. ಮಾತನಾಡದೆ ಎಷ್ಟೂ ಭಾವನೆಗಳನ್ನು ನಿವೇದಿಸುವ ಬಗ್ಗೆ ಯೋಗದ ಮೂಲಕ ಸಾಧ್ಯ ಎಂಬುದನ್ನು ಕಂಡುಕೊಂಡರು ಅದೇ ರೀತಿಯಾಗಿ ಜೀವನದಲ್ಲಿ ಮೌಲ್ಯ,ನೈತಿಕತೆ,ಪರಿಸರ ಪ್ರೇಮ ಮತ್ತು ಸಂರಕ್ಷಣೆ ಇಂತಹ ಗುಣಗಳನ್ನು, ಅದೇರೀತಿ  ಸ್ವಾಮಿ ವಿವೇಕಾನಂದರ ಪ್ರೇರಣೆಯಿಂದ ಸ್ವದೇಶ, ಸು ಸಂಸ್ಕೃತಿಯಂತಹ ಭಾವನೆಗಳನ್ನು ಮೈಗೂಡಿಸುಕೊಂಡರು.ಇವೆಲ್ಲದರ ಜೊತೆ 1913 ರಲ್ಲಿ ದ್ವಿತೀಯ ಸ್ಥಾನದೊಂದಿಗೆ ಮೆಟ್ರಿಕ್ಯುಲೇಷನ್ ಮುಗಿಸಿದರು ಈಗಿನ ಒಬ್ಬ ಹೈಸ್ಕೂಲ್ ಹುಡುಗನ ಮನಸ್ಥಿತಿ ನೋಡಿದರೆ ಅದೆಷ್ಟು ವ್ಯತ್ಯಾಸ ಅಲ್ವೇ?

ಪ್ರತಿದಿನ ಮನೆಯಲ್ಲಿ ಹಾಸಿಗೆ ಇದ್ದರು ನೆಲದ ಮೇಲೆ ಮಲಗುವ ಅಭ್ಯಾಸ, ಟ್ರಾಮಿನಲ್ಲಿಹೋಗಲು ನೀಡಿದ್ದ ಹಣವನ್ನು ಉಳಿಸಿಕೊಂಡು ಭಿಕ್ಷುಕರಿಗೆ ನೀಡುವುದು, ಇದೆಲ್ಲದರ ಜೊತೆ ತಮಗೆ ಲಭಿಸಿದ್ದ ಐಷಾರಾಮಿ ಜೀವನವನ್ನು ಅನುಭವಿಸುವುದನ್ನು ಅಪರಾಧ ಎಂದು ತಿಳಿದು ಅದನ್ನು ಕಡಿಮೆ ಮಾಡುವ ಮಾರ್ಗ ಕಂಡುಕೊಳ್ಳುತ್ತಿದ್ದರು.

ಭಾರತೀಯ ನಾಗರೀಕ ಸೇವೆಯನ್ನು ಮುಗಿಸಿ, ರಾಷ್ಟೀಯ ಕಾಂಗ್ರೆಸ್ನಲ್ಲಿ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದ ಮಹರ್ಷಿ ಅರಬಿಂದೋ ರವರ ಆರ್ಯ ಪತ್ರಿಕೆಯಿಂದ ಆಧ್ಯಾತ್ಮಿಕ ಹಾಗು ತತ್ವ ಶಾಸ್ತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಪರಿಣಾಮ 1916 ರಲ್ಲಿ ಪ್ರೆಸಿಡೆನ್ಸ ಕಾಲೇಜ್ನಲ್ಲಿ ಕಲಾವಿಭಾಗ ದಲ್ಲಿ ಪದವಿ ಪಡೆಯಲು ಸೇರಿಕೊಂಡರು ಆದರೆ ಅಲ್ಲಿನ ಇಂಗ್ಲಿಷ್ ಪ್ರೊಫೆಸರ್ ಇ. ಎಲ್.ಒಲ್ಟೋ ಅವರು  ಸುಭಾಷ್ ಜಿಯವರು ರಾಷ್ಟೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪ ಹೊರಿಸಿ ಕಾಲೇಜಿನಿಂದ ಹೊರ ಹಾಕಿದರು .ಈ ಘಟನೆಯ ನಂತರ ಅವರು ೧೯೧೮ರಲ್ಲಿ Scottish church colllege ನಲ್ಲಿ ತತ್ವಶಾಸ್ತ್ರದ ಪದವಿ ಮುಗಿಸಿದ ನಂತರ ಪ್ರಾಯೋಗಿಕ ಮನೋವಿಜ್ಞಾನ ವಿಷಯದಲ್ಲಿ ಎಂ ಎ ಪದವಿ ಪ್ರಾರಂಭಿಸಿದರೂ,ತಂದೆ ತಾಯಿಯ ಒತ್ತಾಯದ ಮೇರೆಗೆ ಭಾರತೀಯ ನಾಗರೀಕ ಸೇವೆಯ ತರಬೇತಿಗೆ ಕೇಂಬ್ರಿಜ್ ವಿಶ್ವ ವಿದ್ಯಾಲಯಕ್ಕೆ ತೆರೆಳಿದರು ಆದರೆ ಸರಕಾರಿ ಸೇವೆಗೆ ಮಾತ್ರ ಸೇರುವುದಿಲ್ಲ ಎಂಬ ವಯಕ್ತಿಕ ನಿರ್ಧಾರದಂತೆ ಅವರು ನಡೆದುಕೊಂಡದ್ದು ಎಂತಹ ವ್ಯಕ್ತಿತ್ವವಲ್ಲವೇ? ಈಗಿನ ಮಕ್ಕಳದು ವಿದ್ಯಾಭ್ಯಾಸ ಮಾಡುವಾಗಲೇ ಕೆಲಸ ಬೇಕೆಂಬ ಹಂಬಲ, ಸುಭಾಷ್ ಜಿ ಅವರದು ಪರಿಚಾರಕನಾಗದೇ  ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿಬೇಕೆಂಬ ಹಂಬಲ ಇದು ಕೆಲವೇ ವರ್ಷಗಳಲ್ಲಾದ ಬದಲಾವಣೆ

ಪ್ರಾರಂಭದಲ್ಲಿ ಕೇಂಬ್ರಿಜ್ ವಿಶ್ವ ವಿದ್ಯಾಲಯದ ವಾತಾವರಣ,ಸಮಾಜದಲ್ಲಿ ಅವರಿಗೆ ದೊರೆತ ಪ್ರಾಶಸ್ತ್ಯ ಹಾಗು ಪೂರ್ವದಲ್ಲಿ ಕಾಲೇಜನಿಂದ ಹೊರಹಾಕಿದ ಕಹಿ ನೆನೆಪಿನಿಂದಾಗಿ ಪರಕೀಯರ  ಪದ್ಧತಿಗಳಿಗೆ ಆಕರ್ಷಣೆಗೆ ಒಳಪಟ್ಟಿದಂತೂ ನಿಜ ಆದರೆ ಭಾರತೀಯ ವಿದ್ಯಾರ್ಥಿಗಳಿಗೆ ನ್ಯಾಯಬದ್ಧವಾಗಿ ದೊರೆಯಬೇಕಿದ್ದ ಮನ್ನಣೆ ಸಿಗದೇ ಇದ್ದಾಗ ಬ್ರಿಟಿಷರ ಜನಾಂಗೀಯ ಭಾವನೆಯನ್ನು ಅನಾವರಣಗೊಂಡಿತು ಇದೆಲ್ಲದರ ಅನುಭವವನ್ನು ಸುಭಾಷ್ ಜಿ ಯವರು ತಮ್ಮ ಆಪ್ತ ಗೆಳೆಯನಿಗೆ ಬರೆದ ಪತ್ರದಲ್ಲಿ ಈ ಕೆಳಗಿನಂತೆ ಉಲ್ಲೇಖಿಸಿದ್ದಾರೆ,

“ಬಿಳಿಯರ ಕೈಯಲ್ಲಿ ಪರಿಚಾರಿಕ ಮಾಡಿಸಿಕೊಳ್ಳುವ ಅವರಿಂದ ನನ್ನ ಶೂ ಅನ್ನು ಪಾಲಿಶ್ ಮಾಡಿಸಿಕೊಳ್ಳುವ ಯೋಗ ಒದಗಿರಿವುದು ಸಂತಸದ ವಿಷಯ”, ಸ್ವಾಭಿಮಾನಿ ಭಾರತೀಯನ ಮನಸ್ಥಿತಿಗೆ ನನ್ನದೊಂದು ಸಲಾಂ.

೧೯20 ರಲ್ಲಿ ಭಾರತೀಯ ನಾಗರೀಕ ಸೇವೆಯನ್ನು ಕೇವಲ 8 ತಿಂಗಳ ಅವಧಿಯಲ್ಲಿ ಇಡೀ ತಂಡಕ್ಕೆ ನಾಲ್ಕನೇ ಸ್ಥಾನದಿಂದ ಉತ್ತೀರ್ಣದ ಕೀರ್ತಿ ಸುಭಾಷ್ ಜಿ ಅವರದು, ಅದೇ ರೀತಿ ಅವರ ಮನದಲ್ಲಿ ಆ ಸಂಧರ್ಭದಲ್ಲಿ ಇದ್ದ ಪ್ರಶ್ನೆ ಮಾತ್ರ “ಸರಕಾರಿ ಸೇವೆ ಸೇರದೆ ದೇಶ ಸೇವೆಗೆ ಸ್ವತಂತ್ರನಾಗಿ ಉಳಿಯಬೇಕು ಎಂಬುದನ್ನು ಕುಟುಂಬದವರಿಗೆ ಹೇಗೆ ತಿಳಿಸಬೇಕು” ಎಂಬುದು.

ದೇಶದ ಬಗ್ಗೆ ಅವರಿಗಿದ್ದ ಅಭಿಪ್ರಾಯವನ್ನು ತನ್ನ ಪೋಷಕರಿಗೆ ಬರೆದ ಪಾತ್ರದ ತುಣುಕು ಗಳಿಂದ ನಮಗೆ ಮನದಟ್ಟಾಗುತ್ತದೆ

“ಐ.ಸಿ.ಎಸ್ ಅಪೇಕ್ಷಿಸುವ ಸೇವಾಧೀನತೆಯ ಷರತ್ತುಗಳು ಒಬ್ಬ ವ್ಯಕ್ತಿಯ ಉದಾತ್ತ ಜೀವನಧ್ಯೇಯ ಸಾಧನೆಗೆ ಪೋಷಕವಾಗುತ್ತದೆ ಎಂದು ನಾನು ನಂಬಲಾರೆ,ಈ ಪ್ರವೃತ್ತಿ ನನ್ನಂಥವರಿಗೆ ಹಿಡಿಸದು, ಸಿವಿಲ್ ಸರ್ವಿಸ್ ನ ಚೌಕಟ್ಟು ರಾಷ್ಟೀಯ ಮತ್ತು ಆಧ್ಯಾತ್ಮಿಕ ಆಶೋತ್ತರಗಳಿದ್ದವರಿಗೆ ಸರಿ ಹೊಂದಲಾರದು.”(22/12/1920)

“ನನ್ನ ಕಲ್ಪನೆಯಲ್ಲಿ ತ್ಯಾಗ ಮಾಡಬಯಸುವವರು ಜೀವನದ ಆರಂಭದ ಹಂತದಿಂದಲೇ ಆ ಹಾದಿಯಲ್ಲಿ ಹೋರಾಡುವುದು ಮೇಲು . ಸರಳ ಜೀವನ ಉಚ್ಚ ವಿಚಾರ  ಇವು ಮಹತ್ವವಾದವು ನನ್ನ ದೃಷ್ಟಿಯಲ್ಲಿ ಅರವಿಂದ್ ಘೋಷರ ಮಾರ್ಗವೇ ಹೆಚ್ಚು ಪ್ರೇರಣಾದಾಯಕ.”(16/02/1921)

1921 ರ ಜೂನ್ ಅಂತ್ಯದಲ್ಲಿ ತ್ಯಾಗಪತ್ರವನ್ನು ಸಲ್ಲಿಸಿ ಇಂಗ್ಲೆಂಡ್ ಗೆ ವಿದಾಯ ಹೇಳಿದರು,ಇತ್ತ ಕಾಂಗ್ರಸ್ಸಿನಲ್ಲಿ ಒಬ್ಬ ನಾಗರೀಕ ಸೇವೆ ಮುಗಿಸಿದ ವ್ಯಕ್ತಿ ಸರಕಾರಿ ಕೆಲಸವನ್ನು ತಿರಸ್ಕರಿಸಿ ರಾಜಕೀಯವನ್ನು ಸೇರಲು ಬರುತ್ತಿರುವ ವಿಷಯವು ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿ, ಅವರೆಲ್ಲರು ಅವರ ಆಗಮನಕ್ಕೆ ಕಾಯ್ದುಕೂರುವಂತೆ ಮಾಡಿತ್ತು .

ಈ ಎಲ್ಲ ಅಂಶಗಳನ್ನು ಮೇಲೆ ತಿಳಿಸಿದ ಶ್ರೀ ಸುಭಾಷ್ ಚಂದ್ರ ಬೋಸ್ ಅವರ ಪ್ರೇರಣೆಯಿಂದ  ದೇಶದ ಮುಂದಿನ ಪೀಳಿಗೆಯನ್ನು ಮಾನಸಿಕವಾಗಿ,ಬೌದ್ಧಿಕವಾಗಿ ಆರೋಗ್ಯವಂತರನ್ನಾಗಿ ಮಾಡುತ್ತಾ, ದೇಶಭಕ್ತರನ್ನು ರೂಪಿಸುವುದು ಪ್ರತಿಯೊಬ್ಬ ಭಾರತೀಯನ  ಜವಾಬ್ದಾರಿ ಆಗಬೇಕು ಎಂಬ ಆಶಯ ಆಚರಣೆಗೆ ಬರಬೇಕು.

೪.ವಿ.ಡಿ. ಸಾವರ್ಕರ್

ಆಸಿಂಧು ಸಿಂಧು ಪರ್ಯಂಥುಯಸ್ಯಭಾರ ತಭೂಮಿಕಾ|

ಪಿತೃಃ ಭೂಪುಣ್ಯ ಭೂಚೈವತವೈ ಹಿಂದುರಿತಿಸ್ಮೃತಾಃ॥

ಅರ್ಥ: (ಸಿಂಧೂ ನದಿ (ಉತ್ತರದಲ್ಲಿ) ಮತ್ತುಸಿಂಧೂ (ಸಿಂಧೂಸಾಗರ – ದಕ್ಷಿಣದಲ್ಲಿ ಹಿಂದೂ ಮಹಾಸಾಗರ) ನಡುವೆ ಹರಡಿರುವ ಈ ಭಾರತ ಭೂಮಿಯನ್ನು ತಮ್ಮ ಪಿತೃಭೂಮಿ ಮತ್ತು ಪುಣ್ಯಭೂಮಿ ಎಂದು ಪರಿಗಣಿಸುವವರನ್ನು ಹಿಂದೂಗಳು ಎಂದು ಕರೆಯುತ್ತಾರೆ). ಹಿಂದೂಗಳು ಯಾರು? ಹಿಂದೂಸ್ಥಾನ ಯಾವುದು? ಎಂಬುದು ಸಾಮಾನ್ಯನಿಗೂ ಅರ್ಧವಾಗುವಂತೆ ಹೇಳಿರುವವರು  ವಿನಾಯಕ ದಾಮೋದರ್‌ ಸಾವರ್ಕರ್.

. ಹಿಂದುತ್ವದ ಬಗ್ಗೆಯಿದ್ದ ಪರಿಪಕ್ವತೆ,ಸ್ವಾಭಿಮಾನಕ್ಕೆ ಕನ್ನಡಿಯಾದ ವ್ಯಕ್ತಿತ್ವ, ರಾಷ್ಟ್ರೀಯತೆಯ ಮೇಲಿದ್ದ ಭಕ್ತಿ,ಸಂಘಟನೆ ನಡೆಸುವ ಚಾಣಾಕ್ಷತೆ, ಶತ್ರುಗಳನ್ನು ಸೋಲಿಸುವ ಮತ್ತು ರಾಜಕೀಯ ಕ್ಷೇತ್ರದ ಸದ್ಭಳಕೆ ಮಾಡುವ ಅಂಶಗಳ ಕುರಿತಾಗಿ ಅವರ ವಿಚಾರಗಳನ್ನು, ಇಂದಿನ ಭಾರತದ ಯುವಕರು ಅಧ್ಯಯನ ಮಾಡುವ ಸಂಕಲ್ಪವಾಗಬೇಕಾಗಿದೆ.

ಸ್ವರಾಜ್ಯ,ಸ್ವಧರ್ಮ ಮತ್ತು ಸಂಘಟನೆಯ ವಿಚಾರಗಳಲ್ಲಿ ತಮ್ಮ ಬರಹ,ಲೇಖನ ಮತ್ತು ಕಾರ್ಯಗಳ ಮೂಲಕ ಬ್ರಿಟಿಷರಿಗೆ ನಡುಕ ಹುಟ್ಟಿಸಿ, ವಿದೇಶಿ ನೆಲದಲ್ಲಿ ಬಂಧನಕ್ಕೊಳಗಾಗಿ,ತನ್ನ ಜೀವಿತಾವಧಿಯ ಅರ್ಧಶತಕವನ್ನು ಜೈಲಿನಲ್ಲಿ ಕಳೆದ ನಂತರವೂ ಸ್ಪೂರ್ತಿಯ ಚಿಲುಮೆಯಾದವರು  ವಿನಾಯಕ ದಾಮೋಧರ ಸಾವರ್ಕರ್.

ಅವರ ಆಲೋಚನೆಗಳು ಇತಿಹಾಸಕ್ಕೆ ಅಲಂಕಾರ, ವರ್ತಮಾನಕ್ಕೆ ಅನಿವಾರ್ಯ ಭವಿಷ್ಯದ ಸಶಕ್ತ ಸಮಾಜಕ್ಕೆ ಭದ್ರಬುನಾದಿಯಾಗುವುದು ಎಂಬ ವಿಚಾರಕ್ಕೆ ಬೆಳಕು ಚೆಲ್ಲುವ ಪ್ರಯತ್ನವನ್ನುಈ ಲೇಖನವು ಮಾಡಲಿದೆ.

ಸ್ವತಂತ್ರ ಬಂದ ಸಂದರ್ಭದಲ್ಲಿ ದೇಶವನ್ನು ಮುನ್ನೆಡುಸುವ ದೃಷ್ಟಿಯಿಂದ ಕಾರ್ಯಪ್ರವೃತ್ತರಾಗುವುದು ಬಿಟ್ಟು ಹಿಂದೂಮುಸ್ಲಿಂ ಎಂದು ದೇಶ ವಿಭಜನೆಮಾಡಿದ್ದು ಎಷ್ಟು ಸರಿ?, ಈ ನಿರ್ಧಾರದಲ್ಲಿರುವವರ ಉದ್ದೇಶ ಮತ್ತು ಪರಿಣಾಮ ಗೊತ್ತಾಗುವ ಕಾಲ ಸನ್ನಿಹಿತವಾಗಿದೆ. ಈ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಕ್ಕೆ ಮೌನ ಆಭರಣ ಧರಿಸಿದ್ದು ಯಾಕೆ?

ಇನ್ನು ದೇಶದ ವಿಚಾರ ಬಂದಾಗ ನೆಹರುರವರು ತಗೆದುಕೊಂಡ ನಿರ್ಧಾರಗಳು ಶತ್ರು ದೇಶಗಳ ಪರವಾಗಿ ನಿಂತಿದ್ದರಿಂದ ಸ್ವಾತಂತ್ರದ ಹೋರಾಟದಲ್ಲಿ ನಡೆದ ತ್ಯಾಗ ಬಲಿದಾನಗಳ ಬಗ್ಗೆ ಅವರಿಗೆ ಮಾಹಿತಿಯ ಕೊರತೆ ಇತ್ತೇ ಎನ್ನುವ ಅನುಮಾನ ಬರುತ್ತದೆ? ರಾಜಕೀಯವಾಗಿದ್ದ ಅವರ ನಡೆಗಳು ಸ್ವಾತಂತ್ರ ಹೊಂದಿದ್ದ ಭಾರತ ಮಾತೆಯನ್ನು ಸಶಕ್ತಗೂಳಿಸುವುದರಲ್ಲಿ ಅವರ ವಿಫಲತೆ ಎದ್ದು ಕಾಣುತ್ತದೆ.

ಗಾಂಧೀಜಿಯ ಅನುಯಾಯಿಯಾಗಿದ್ದ ಶಾಸ್ತ್ರೀಜಿಯವರು ಪ್ರಧಾನಿಯಾದಾಗ ದೇಶದ ವಿಚಾರ ಬಂದಾಗ ಪಾಕಿಸ್ತಾನದ ವಿರುದ್ಧ ಸೈನ್ಯವನ್ನು ಯುದ್ಧಕ್ಕೆ ಕಳುಹಿಸಿದ ಅವರ ನಿರ್ಧಾರ ದೇಶದ ಬಗ್ಗೆಅವಿರಿಗಿದ್ದ ವಿಚಾರವನ್ನು ಸಮಾಜಕ್ಕೆ ಸ್ಪಷ್ಟವಾಗಿ ಸಂದೇಶ ನೀಡಿತು.

ದೇಶ ಮತ್ತು ಧರ್ಮದ ವಿಚಾರದಲ್ಲಿ ಅರಿವು ಮೂಡಿಸುವ ಲೇಖನಗಳು ಮತ್ತು ಪ್ರಕಾಶನಗಳು ಸಾಗರದಷ್ಟಿದ್ದು, ಶಿಕ್ಷಣದಿಂದ ದೂರವಿದ್ದರೂ ಸಹ ಎಲ್ಲ ದಿಕ್ಕಿನಿಂದಲೂ ಸತ್ಯಕ್ಕೆ ಹತ್ತಿರವಾಗಿವೆ.

ವ್ಯಕ್ತಿಯ ವಿಚಾರ ಮತ್ತು ಜೀವನದ ಸಂದೇಶಗಳ ಕುರುಹುಗಳು, ಆತ್ಮಚರಿತ್ರೆ ಮತ್ತು ಜೀವನ ಚರಿತ್ರೆಗಳನ್ನು ಆಧಾರವಾಗಿಟ್ಟುಕೊಂಡು ಸಾವರ್ಕರ್ರವರ ಚಿಂತನೆಗಳನ್ನುಇಲ್ಲಿ ವಿಶ್ಲೇಷಿಸಲಾಗಿದೆ.

ವಿನಾಯಕ ದಾಮೋಧರ ಸಾವರ್ಕರ್ ರವರ ವಿಚಾರಗಳನ್ನು ನೋಡಿದಾಗ,

  • ಹಿಂದೂತ್ವ ಎಂದರೆ ನಂಬಿಕೆ ಎನ್ನುವುದಕ್ಕಿಂತ, ಧರ್ಮ ಎನ್ನುವುದು ಸೂಕ್ತ, ವ್ಯಾಪಾರದ ಧರ್ಮ ಲಾಭವಾದರೆ, ಯುದ್ಧದ ಧರ್ಮ ತಂತ್ರಗಾರಿಕೆ, ಅದೇ ರೀತಿ ಜೀವನ ನಡೆಸುವುದಕ್ಕೆ ಇರುವ ಧರ್ಮ ಹಿಂದೂತ್ವ.

  • ಬ್ರಾಹ್ಮಣ ಮತ್ತು ಮುಸ್ಲಿಂ ವಿರೋಧಿ ಅಲೆಯು ದೇಶದ ರಾಜಕೀಯ ವಾತಾವರಣಕ್ಕೆ ಸೂಕ್ತವಲ್ಲ ಎಂದು ರಾಜಕೀಯವಾಗಿ ದೇಶವನ್ನು ಒಗ್ಗೂಡಿಸುವ  ದೂರದೃಷ್ಟಿ.

  • ದೇಶವನ್ನು ಸಶಸ್ತ್ರ ಸೈನ್ಯದ ಮೂಲಕ ರಕ್ಷಣೆ ಮಾಡಬೇಕು ಎಂಬ ಯೋಚನೆಯನ್ನು ಬ್ರಿಟಿಷರ ದಬ್ಬಾಳಿಕೆ ಇರುವಾಗಲೇ ಯೋಚನೆ ಮಾಡುವದಲ್ಲದೆ ಅದಕ್ಕೆ ಬೇಕಾಗಿರುವ ಯೋಜನೆ ಸಿದ್ಧ ಮಾಡಲು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಯತ್ನ ಮಾಡಿರುವುದು.

  • ೧೮೫೭ರ ಸಿಪಾಯಿ ದಂಗೆಯನ್ನು ಪ್ರಥಮ ಸ್ವಾತಂತ್ರ ಸಂಗ್ರಾಮ ಎಂದು ವಿಶ್ಲೇಸಿದರು.

  • ಸ್ವರಾಜ್ಯ ಮತ್ತು ಸ್ವಧರ್ಮ ಅವರ ಜೀವನದ ಉದ್ದೇಶವಾಗಿತ್ತು.


ಕರ್ಜನ್ ವ್ಯಾಲಿಯ ಹತ್ಯೆ-ಸಾವರ್ಕರ್ ಬಂಧನ-ನಂತರ ಪರಾರಿ-ಫ್ರೆಂಚ್ ನೆಲದಲ್ಲಿ  ಪುನಃ ಬಂಧನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂಡಮಾನ್ ಜೈಲಿನ ಕರಿ ನೀರಿನ ಶಿಕ್ಷೆ, ನಂತರ ರತ್ನಗಿರಿಯ ಜೈಲುವಾಸ, ನಂತರ ಗೃಹಬಂಧನ ಇವುಗಳ ಅಧ್ಯಯನ ಪ್ರತಿಯೊಬ್ಬ ಭಾರತೀಯರಲ್ಲೂ ಸ್ಪೂರ್ತಿ ಹುಟ್ಟಿಸುವಂತಹ ಸಂಗತಿಗಳು.

ಮಿತ್ರ ಮಂಡಳಿ ಹಾಗು ಅಭಿನವ ಭಾರತ ಸಂಘಟನೆಗಳ ಮೂಲಕ ಅಧ್ಯಯನದ ಜೊತೆಗೆ ಪತ್ರಿಕೆಗಳಲ್ಲಿ ಸಾಮಾಜಿಕ ಕಳಕಳಿ, ದೇಶಾಭಿಮಾನ, ಸ್ವಾಭಿಮಾನ ಮತ್ತು ಸ್ವದೇಶಿ ಲೇಖನ ಬರೆಯುವುದರ ಜೊತೆಗೆ ಸಶಸ್ತ್ರ ಸೈನ್ಯದ ಮೂಲಕ ದೇಶದ ಯುವಕರನ್ನು ಪರಕೀಯರ ವಿರುದ್ಧದ ಹೋರಾಟಕ್ಕಾಗಿ ಪ್ರಯತ್ನ ಒಂದು ಕಡೆಯಾದರೆ, ಇನ್ನೊಂದು ಕಡೆ ಕ್ವಿಟ್ ಇಂಡಿಯಾ ಚಳುವಳಿಯನ್ನು ಗಾಂಧೀಜಿ ಹಾಗು ನೆಹರುರವರು ಪ್ರಾರಂಭಿಸಿದ್ದರು.


ಇಷ್ಟೆಲ್ಲಾ ದೇಶಮುಖಿ ವಿಚಾರಗಳು ಕರಗತವಾಗಲು ಕಾರಣವಾದ ಅವರ ಜೀವನದ ಕೆಲವೊಂದು ಸನ್ನಿವೇಶಗಳು, ಹವ್ಯಾಸಗಳು ಈ ರೀತಿಯಾಗಿವೆ.


ಭಕ್ತಿ:    ದೇವಿ ಆರಾಧನೆ, ಶ್ಲೋಕ ಮತ್ತು ಮಂತ್ರ ಪಠಣವು ಸರ್ವೇಸಾಮಾನ್ಯವಾಗಿತ್ತು. ಎಷ್ಟೋ ಸಲ ಪೂಜಾ ಗೃಹಕ್ಕೆ ಹೋಗಿ ದೇವಿಯ ಎದುರು ಕುಳಿತುಕೊಂಡು ದೇವಿಯ ಅಸ್ತ್ರಗಳಾದ ಶಂಖ, ಚಕ್ರ, ಗದೆ, ಪದ್ಮ, ಖಡ್ಗ ಮತ್ತು ಶೂಲವನ್ನು ನೋಡುತ್ತಾ, ರಾಕ್ಷಸರನ್ನು ಕೊಲ್ಲಲು ನಾನು ಸಹಾಯ ಮಾಡುತ್ತೇನೆ ನನಗೆ ನಿನ್ನ ಅಸ್ತ್ರಗಳನ್ನು ಕೊಟ್ಟು ಬಿಡು ಎಂದು ಕೇಳುತ್ತಾರೆ.

ಇತಿಹಾಸ: ಪ್ರಪಂಚದ ಸಂಕ್ಷಿಪ್ತಇತಿಹಾಸದ ಒಂದು ಭಾಗ ಎಂಬ ಪುಸ್ತಕವವನ್ನು ತಗೆದು ನೋಡಿದಾಗ ಅರಬಿಸ್ಥಾನದ ಚರಿತ್ರೆ ಎಂಬ ಪಾಠವನ್ನು ನೋಡಿದ ತಕ್ಷಣ ತಲೆಯಲ್ಲಿ ಬಂದಿದ್ದು ಅದಕ್ಕಿಂತ ಮುಂಚೆ ಭಾರತ ಹೇಗಿತ್ತು ಎಂಬ ಪ್ರಶ್ನೆ.

ಅಧ್ಯಯನ: ಮುಂಬೈ ಪುಣೆಯಲ್ಲಿ ಮುಸ್ಲಿಂರಿಂದ ಹಿಂದೂಗಳ ಪ್ರಾಣ-ಮಾನಹಾನಿಯ ಕುರಿತಾಗಿ ಕೇಸರಿ ಪತ್ರಿಕೆಯಲ್ಲಿ ಓದಿ, ಗೆಳೆಯರಿಗೆಲ್ಲಾ ಓದು ಹೇಳಿ, ಇದಕ್ಕೆ ಪ್ರತಿಕಾರ ತೀರಿಸುವ ಯೋಜನೆಯಾಗಿ ಶಿವಾಜಿಯ ವೃಕಯುದ್ಧದ ತಂತ್ರವನ್ನು ಎಲ್ಲಾ ಸ್ನೇಹಿತರು ಸೇರಿ ಸಂಜೆ ಊರ ಹೊರಗಡೆ ಇರುವ ಮಸೀದಿಯ ಮೇಲೆ ಆಕ್ರಮಣ ನಡೆಸುವ ರೀತಿಯಲ್ಲಿ ಆಟ ಆಡುವ ಯೋಚನೆ. ಸಂಸ್ಕೃತದ ದೇವಿ-ಭಾಗವತ ಪಾರಾಯಣ ಮಾಡುತ್ತಿದ್ದರು ಅದರ ಅರ್ಥವನ್ನು ಮರಾಠಿ ಭಾಷಾಂತರದಲ್ಲಿ ಮೂಡಿ ಬಂದ ದೇವೀ ವಿಜಯ ಲೇಖನಕ್ಕಾಗಿ, ಕಾಸು ಕೂಡಿಟ್ಟು ವಿ.ಪಿ ಮೂಲಕ ತರಿಸಿ ಅಧ್ಯಯನ ಮಾಡಿದ್ದು.

ಲೇಖನ: ಓದಿದ ಪುಸ್ತಕ-ಪತ್ರಿಕೆಯ ಲೇಖನಗಳ ಟಿಪ್ಪಣಿಗಳನ್ನು ಸಂಗ್ರಹಿಸಿ, ವಿದ್ಯಾರ್ಥಿ ಜೀವನದಲ್ಲಿ ಬರೆದ “ಸರ್ವಸಾರಸಂಗ್ರಹ” ಅದೆಷ್ಟೋ ಸಂಪುಟಗಳಾಗಿ ಬೆಳೆದು ಸರ್ಕಾರದ ಝಡತಿಗೆ ಆಹುತಿಯಾಗಿ ಹೋದವು. ನಾಸಿಕ ವೈಭವ ಪತ್ರಿಕೆಯಲ್ಲಿ ಮೂಡಿ ಬಂದ ಹಿಂದೂ ಸಂಸ್ಕೃತಿಯ ಶ್ರೇಷ್ಠತೆ ಎಂಬ ಲೇಖನ.

ಪರಕೀಯ ರಾಜಾ, ಪರಕೀಯ ಶಿಕ್ಷಣ; ಧನವೂ ಪರಕೀಯ ಸ್ವತ್ತಾಗಿದೆ, ಹೇ ದಯಾಮಯ ಗಣಪತಿ! ಶತ್ರುಗಳನ್ನು ಹೊರದೂಡಲು ಈಗ ನೀನೇ ಗತಿ! ನಾಸಿಕದಲ್ಲಿಅದ್ಭುತವಾಗಿ ನಡೆದ ಗಣೇಶೋತ್ಸವದ ಕುರಿತಾಗಿ ಅವರು ಬರೆದ ಕಾವ್ಯದ ಭಾವಾರ್ಥ

ಪ್ಲೇಗ್‌: ಪ್ಲೇಗ್‌ ನಿರ್ವಹಣೆಯಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಪ್ರತೀಕಾರವಾಗಿ ಬ್ರಿಟಿಷ್‌ ಆಧಿಕಾರಿಗಳನ್ನು ಸೇಡು ತೀರಿಸುಕೊಳ್ಳುವ ಉದ್ದೇಶದಿಂದ ಕೊಂದಿರುವ ಆರೋಪದ ಮೇರೆಗೆ ನೇಣು ಶಿಕ್ಷೆಗೆ ಒಳಗಾದ ಚಾಪೇಕಾರ ಸಾವಿನ ಸುದ್ದಿಇವರನ್ನು ತೀವ್ರವಾಗಿ ಖಿನ್ನತೆಗೆ ಒಳಪಡಿಸಿತ್ತು ಆ ಸಂದರ್ಭದಲ್ಲಿ ಪ್ರಶ್ನಾರ್ಥಕವಾಗಿ ಮೂಡಿಬಂದ ಕವನದ ಭಾವಾರ್ಥ,

ಸ್ವದೇಶ ಬಾಂಧವರ ಮೇಲೆ ನಡೆಯುತ್ತಿದ್ದ ಹಿಂಸಾಚಾರ ಕೇಳಿ, ಕೋಪದಿಂದ ರಕ್ತ ಕುದಿದು, ದೇಶಕ್ಕಾಗಿ ಪ್ರಾಣ ನೀಡುವ ತರುಣರನ್ನು ಧನ್ಯರೆಂದು ಹೇಳಬಾರದೇಕೆ?

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಕುರಿತಾಗಿ ಬರೆದ ಕವನದ ಭಾವಾರ್ಥ ಈ ರೀತಿಯಾಗಿದೆ,

ಲೆಕ್ಕವಿಲ್ಲದಷ್ಟು ಜನ ಹುಟ್ಟುತ್ತಾರೆ; ಲೆಕ್ಕಕ್ಕಿಲ್ಲದೆ ಸತ್ತು ಹೋಗುತ್ತಾರೆ, ಆದರೆ ಯಾರು ದೇಶಕ್ಕಾಗಿ ಸಾಯುತ್ತಾರೋ ಅಂಥವರನ್ನು ವಿದ್ವಾಂಸರು, ಮಹಾಪುರುಷರ ಸಾಲಿಗೆ ಸೇರಿಸುತ್ತಾರೆ.


ಈ ಕಾರಣಗಳಿಂದಾಗಿ ಅವರು ಉತ್ತಮ ಸಂಘಟನಾ ಚತುರರಾಗಿ ಅಭಿನವ ಭಾರತವನ್ನು ದೇಶ-ವಿದೇಶಗಳಲ್ಲಿ ಕಾರ್ಯಕರ್ತರನ್ನು ಹುಟ್ಟುಹಾಕುವಂತೆ ಮಾಡಿತು ಜೊತೆಗೆ ಬ್ರಿಟಿಷರ ಮನಸ್ಸಿನಲ್ಲಿ ಭಯದ ಬೀಜ ಬಿತ್ತಿತು. ಧರ್ಮ,ರಾಜಕೀಯ,ಭಕ್ತಿ,ಸಾಮರಸ್ಯ,ಸೇನೆ,ಸಂಘಟನೆ ಈ ಎಲ್ಲ ವಿಷಯಗಳಲ್ಲಿ ಒಬ್ಬ ಸಮರ್ಥ ನಾಯಕನಾಗು ಎಲ್ಲ ಲಕ್ಷಣಗಳನ್ನು ಮತ್ತು ಸಾಮರ್ಥ್ಯವನ್ನು ಹೊಂದಿದ್ದರು ಬ್ರಿಟಿಷರ ದಬ್ಬಾಳಿಕೆ ಮತ್ತು ಅರಾಜಕತೆಯ ಆಳ್ವಿಕೆಯಿಂದ ಅವರು ಜೈಲಿನಲ್ಲಿ ಕಾಲ ಕಳೆಯಬೇಕಾಗಿ ಬಂದಿತು.


೫.ಕೊನೆಯ ನುಡಿ

ಸ್ವಾತಂತ್ರ ಬಂದು ೭೫ ವರ್ಷಗಳಾದವು, ಸಮಾಜ, ದೇಶ ಅನೇಕ ರೀತಿಯಲ್ಲಿ ಯಶಸ್ಸು ಖಂಡಿದೆ, ಸೋಲನ್ನು ಖಂಡಿದೆ ಯಶಸ್ಸಿನ ಹಾದಿಯನ್ನು ಕೈ ಬಿಡದೆ, ಸೋಲಿನ ಪಾಠದಿಂದ ಎಚ್ಚರಗೊಂಡು ಮುಂದಿನ ೭೫ ವರ್ಷಗಳಲ್ಲಿ ಸಾಮರಸ್ಯ ಸಮಾಜವನ್ನು, ವಿಶ್ವಶಕ್ತಿ ಭಾರತವನ್ನು ಮಾಡಲು ಪ್ರತೊಯೊಬ್ಬ ಸಾಮನ್ಯ ವ್ಯಕ್ತಿಗೊ ಸ್ಪೊರ್ತಿದಾಯಕವಾಗುವ ಪು಼ಷ್ಪಗಳಂತಹ ವ್ಯಕ್ತಿತ್ವ, ಆದರ್ಶ ಮತ್ತು ವಿಚಾರಗಳನ್ನು  ಅಙ್ನಾತ ಇತಿಹಾಸದ ತೋಟದಿಂದ ಹೊರತಗೆದು ತಾಯಿ ಭಾರತಮಾತೆಯ ಕೊರಳಗೆ ಸುಂದರವಾದ-ಸುವಿಚಾರಗಳ ಸುವಾಸನೆ ಇರುವ ಮಾಲೆಯನ್ನು ಹಾಕುವ ಅವಕಾಶ ಇಂದಿನ ಯುವಕರಿಗೆ ಒದಗಿ ಬಂದಿದೆ. ಈ ಆಂದೋಲನದಲ್ಲಿ ನಾವೆಲ್ಲರೊ ಕೈ ಜೋಡಿಸೋಣ- ಭಾಗಿಯಾಗೋಣ.





ಗ್ರಂಥಸೊಚಿ ಮತ್ತು ಉಲ್ಲೇಖ:‌

೧)ಕೋಲ್ಮಿಂಚು: ಎಸ್‌ ಆರ್‌ ರಾಮಸ್ವಾಮಿ

೨)ಆತ್ಮಾಹುತಿ: ಶಿವರಾಮು.

೩)Savarkar’s India: Hndu Rashtra.

೪)Indian war of independence-Part1-The Volcano-Swadharma & Swarajya


Comments