Posts

Showing posts from July, 2021

ಅಲ್ಲಿಂದ ಇಲ್ಲಿಯವರೆಗೂ ಗುರುವಿನ ಗುರುವು ಸನಾತನ ಧರ್ಮವೇ

Image
ಶ್ರೀ ಗುರುಭ್ಯೋ ನಮ:   ಪ್ರಪಂಚದಾದ್ಯಂತ ಎಲ್ಲ ಮತಗಳ ಸ್ಥಾಪಕರನ್ನು,ಮತ ಪ್ರಚಾರಕರನ್ನು ಗೌರವ ನೀಡುವ ವಾಡಿಕೆ ಇದೆ,ಆದರೆ ಸನಾತನ ಧರ್ಮದಲ್ಲಿ ವಿಶೇಷವಾಗಿ ಆಧ್ಯಾತ್ಮಿಕ,ಧಾರ್ಮಿಕ ಮತ್ತು ಶೈಕ್ಷಣಿಕ ಗುರುಗಳನ್ನು ಒಟ್ಟಾರೆಯಾಗಿ ಪೂಜಿಸಲು ಮತ್ತು ಅವರ ಉಪದೇಶವನ್ನು ಸ್ಮರಿಸಿಕೂಳ್ಳುವ ಸತ್ಕಾರ್ಯಕ್ಕಾಗಿ, ಶುದ್ಧ ಆಷಾಡದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ.ಪ್ರಪಂಚದಾದ್ಯಂತ ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಇದೂಂದು ಹಬ್ಬವೇ ಸರಿ.   ಇಲ್ಲಿ ಗುರು ಎಂದರೆ ಅಜ್ಞಾನದಿಂದ ಜ್ಞಾನದ ಕಡೆ,ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವುದು ಎಂದರ್ಥ. ಲೌಕಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜೀವನಕ್ಕೆ ಬೇಕಾದ ಅರಿವನ್ನು ಮೂಡಿಸಲು ಗುರು ಬೇಕೇ ಬೇಕು. ಸಾಹಿತ್ಯ ಸಂಪತ್ತನ್ನು ಗಮನಿಸಿದಾಗ ಗುರುವಿನ ಬಗ್ಗೆ ಉಲ್ಲೇಖಿಸಿದ ಕೆಲವೊದು ಉದಾಹರಣೆಗಳನ್ನು ಮತ್ತು ಅದರಲ್ಲಿರುವ ಸೂಕ್ಷ್ಮ ವಿಚಾರದ ಆಳ ತಿಳಿಯುತ್ತದೆ. 1)ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು--ಗಾದೆ ಮಾತು. 2)ಗುರು ಬ್ರಹ್ಮ,ಗುರು ವಿಷ್ಣು,ಗುರು ದೇವೋ ಮಹೇಶ್ವರ. ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮ:-ಆದಿ ಶಂಕರಾಚಾರ್ಯರು. 3) ಗುರುವಿನ ಗುಲಾಮನಾಗದೇ ದೂರೆಯದಣ್ಣ ಮುಕುತಿ-ಪುರಂದರ ದಾಸರು.ಹಾಗೆಯೇ, 4)ವಚನಕಾರರು ಸಾವಿರಾರು ವಚನಗಳನ್ನು ತಮ್ಮ ಗುರುಗಳ ಅಂಕಿತನಾಮಕ್ಕೆ ಅರ್ಪಿಸಿರುವುದು. 5)ರಾಜರು ಆಸ್ಥಾನ ಗುರುಗಳ  ಆಶೀರ್ವಾದ

ಹಳ್ಳಿ ಹುಡುಗ.......ನಿ(ರಂಜ)ನ ಭಾಗ 2.

Image
ಮಕ್ಕಳಿಗಿಂತ ಹೆಚ್ಚು ತಲೆ ಕೆಡಸಿಕೊಂಡಿರುವ ಪೋಷಕರು ಒಂದು ಕಡೆ,ಪೋಷಕರ ಸಮಯವಿಲ್ಲದೆ ತಮ್ಮ ಭವಿಷ್ಯ, ತಮ್ಮ ನಿರ್ಧಾರ ಎಂದು ಕೂತಿರುವ ಹುಡುಗರ ದಂಡು ಒಂದು ಕಡೆ, ಇವರಿಬ್ಬರ ಮಧ್ಯೆ ನಮ್ಮ ನಿರಂಜನ,ಇವನ ತಂದೆ ಇವನು ಕೇಳುವುದಕ್ಕೆ ಮೊದಲೇ ನನಗೇನೂ ಗೊತ್ತಿಲ್ಲ ಎಂದು ಬಾಯಲ್ಲಿ ಅಡಿಕೆ, ಎಲೆ, ಸುಣ್ಣ ಹಾಕಿಕೊಂಡು ನಿಂತು ಬಿಟ್ಟರು. ಸೀಟು ಹಂಚಿಕೆ ಮೂರು ರೀತಿಯಲ್ಲಿ ಆಗುತ್ತದೆ, ಒಂದು ಸರಕಾರಿ ಸೀಟು,ಸರ್ಕಾರಿ ನೆರವಿನಿಂದ ಇರುವ ಸೀಟು,ಖಾಸಗಿ ಸೀಟು.ಸರ್ಕಾರಿ ಮತ್ತು ಸರ್ಕಾರಿ ನೆರವಿನಿಂದ ನಡೆಯುವ ಕಾಲೇಜುಗಳ ಸಂಖ್ಯೆ ಕಡಿಮೆ.ಇನ್ನು ಖಾಸಗಿ ಕಾಲೇಜಿನ 100 ಸೀಟುಗಳ ಪೈಕಿ 60 ಸೀಟು ಸರ್ಕಾರದ ಮೂಲಕ,  ಎರಡು ರೀತಿಯಲ್ಲಿ ಹಂಚಿಕೆ ಆಗುತ್ತದೆ, ಮೊದಲ 25 ಸೀಟು 28000ಕ್ಕೂ, ಉಳಿದ 35 ಸೀಟುಗಳು 56000 ಕ್ಕೆ ಮಾರಾಟ ಆಗುತ್ತವೆ,ಯಾಕೆ ಹಾಗೆ? ಗೊತ್ತಿಲ್ಲ ರೀ ಸರಕಾರದ ನಿಯಮ ಅಷ್ಟೇ. ಆರ್ಥಿಕ ಪರಿಸ್ಥಿತಿಯ ಪರಿಣಾಮ 28000 ಸೀಟು ಸಿಕ್ಕರೆ ಓದುವುದಾಗಿ ಬಂದಿದ್ದ, ಆದರೆ ಅವರ ತಂದೆ ಅವನಿಗೆ ತಿಳಿಸದೆ 56000 ಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು,ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಸೀಟು ತೆಗೆದುಕೊಳ್ಳಲು ಹೋದನು,  ಮೆಕಾನಿಕಲ್ ಇಂಜಿನಿಯರಿಂಗ್ ಮಾಡಲು ನಿರ್ಧರಿಸಿದ್ದ ನಿರಂಜನನಿಗೆ ವಿಧಿ ರಾಜ್ಯದ ತಮಿಳುನಾಡು ಗಡಿಭಾಗದ ರಾಯಘಡದಲ್ಲಿ ಇರುವ 25 ವರ್ಷ ಹಳೆಯದಾದ ಕಾಲೇಜಿನಲ್ಲಿ ಸೀಟು ದೊರಕುವಂತೆ ಮಾಡಿತು. ಇನ್ನು ಬೆಂಗಳೂರಿಗೆ ಬಂದ ಕಾರ್ಯ ಮು