ಅಲ್ಲಿಂದ ಇಲ್ಲಿಯವರೆಗೂ ಗುರುವಿನ ಗುರುವು ಸನಾತನ ಧರ್ಮವೇ
ಶ್ರೀ ಗುರುಭ್ಯೋ ನಮ:
ಪ್ರಪಂಚದಾದ್ಯಂತ ಎಲ್ಲ ಮತಗಳ ಸ್ಥಾಪಕರನ್ನು,ಮತ ಪ್ರಚಾರಕರನ್ನು ಗೌರವ ನೀಡುವ ವಾಡಿಕೆ ಇದೆ,ಆದರೆ ಸನಾತನ ಧರ್ಮದಲ್ಲಿ ವಿಶೇಷವಾಗಿ ಆಧ್ಯಾತ್ಮಿಕ,ಧಾರ್ಮಿಕ ಮತ್ತು ಶೈಕ್ಷಣಿಕ ಗುರುಗಳನ್ನು ಒಟ್ಟಾರೆಯಾಗಿ ಪೂಜಿಸಲು ಮತ್ತು ಅವರ ಉಪದೇಶವನ್ನು ಸ್ಮರಿಸಿಕೂಳ್ಳುವ ಸತ್ಕಾರ್ಯಕ್ಕಾಗಿ, ಶುದ್ಧ ಆಷಾಡದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ.ಪ್ರಪಂಚದಾದ್ಯಂತ ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಇದೂಂದು ಹಬ್ಬವೇ ಸರಿ.
ಪ್ರಪಂಚದಾದ್ಯಂತ ಎಲ್ಲ ಮತಗಳ ಸ್ಥಾಪಕರನ್ನು,ಮತ ಪ್ರಚಾರಕರನ್ನು ಗೌರವ ನೀಡುವ ವಾಡಿಕೆ ಇದೆ,ಆದರೆ ಸನಾತನ ಧರ್ಮದಲ್ಲಿ ವಿಶೇಷವಾಗಿ ಆಧ್ಯಾತ್ಮಿಕ,ಧಾರ್ಮಿಕ ಮತ್ತು ಶೈಕ್ಷಣಿಕ ಗುರುಗಳನ್ನು ಒಟ್ಟಾರೆಯಾಗಿ ಪೂಜಿಸಲು ಮತ್ತು ಅವರ ಉಪದೇಶವನ್ನು ಸ್ಮರಿಸಿಕೂಳ್ಳುವ ಸತ್ಕಾರ್ಯಕ್ಕಾಗಿ, ಶುದ್ಧ ಆಷಾಡದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ.ಪ್ರಪಂಚದಾದ್ಯಂತ ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಇದೂಂದು ಹಬ್ಬವೇ ಸರಿ.
ಇಲ್ಲಿ ಗುರು ಎಂದರೆ ಅಜ್ಞಾನದಿಂದ ಜ್ಞಾನದ ಕಡೆ,ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವುದು ಎಂದರ್ಥ. ಲೌಕಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜೀವನಕ್ಕೆ ಬೇಕಾದ ಅರಿವನ್ನು ಮೂಡಿಸಲು ಗುರು ಬೇಕೇ ಬೇಕು.
ಸಾಹಿತ್ಯ ಸಂಪತ್ತನ್ನು ಗಮನಿಸಿದಾಗ ಗುರುವಿನ ಬಗ್ಗೆ ಉಲ್ಲೇಖಿಸಿದ ಕೆಲವೊದು ಉದಾಹರಣೆಗಳನ್ನು ಮತ್ತು ಅದರಲ್ಲಿರುವ ಸೂಕ್ಷ್ಮ ವಿಚಾರದ ಆಳ ತಿಳಿಯುತ್ತದೆ.
1)ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು--ಗಾದೆ ಮಾತು.
2)ಗುರು ಬ್ರಹ್ಮ,ಗುರು ವಿಷ್ಣು,ಗುರು ದೇವೋ ಮಹೇಶ್ವರ.
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮ:-ಆದಿ ಶಂಕರಾಚಾರ್ಯರು.
3) ಗುರುವಿನ ಗುಲಾಮನಾಗದೇ ದೂರೆಯದಣ್ಣ ಮುಕುತಿ-ಪುರಂದರ ದಾಸರು.ಹಾಗೆಯೇ,
4)ವಚನಕಾರರು ಸಾವಿರಾರು ವಚನಗಳನ್ನು ತಮ್ಮ ಗುರುಗಳ ಅಂಕಿತನಾಮಕ್ಕೆ ಅರ್ಪಿಸಿರುವುದು.
5)ರಾಜರು ಆಸ್ಥಾನ ಗುರುಗಳ ಆಶೀರ್ವಾದಿಂದ ರಾಜ್ಯಭಾರ ಮಾಡಿರುವ ಸಂಪ್ರದಾಯ.
6) ಗುರುಕುಲಗಳಲ್ಲಿ ಗುರುವಿನ ಮಹತ್ವ
ಎಲ್ಲರಿಗು ತಿಳಿದಿರುವ ವಿಷಯಗಳು.
7)ರಾಮಾಯಣ ಮಹಾಕಾವ್ಯ ಬರೆದ ವಾಲ್ಮೀಕಿ ಮಹರ್ಷಿ ಗಳು ಪ್ರಪಂಚಕ್ಕೆಲ್ಲಾ ಗುರುಗಳು.
ಶುದ್ಧ ಆಷಾಡದ ಹುಣ್ಣಿಮೆಯ ಗುರು ಪೂರ್ಣಿಮೆಯ ಹಿನ್ನೆಲೆಯನ್ನು ನೋಡಿದಾಗ ಮೂರು ಸಂಗತಿಗಳು ತಿಳಿದು ಬರುತ್ತವೆ.
1) ವೇದಗಳ ಪೂರ್ವ ಕಾಲದಲ್ಲಿ ಆದಿಗುರುವಾದ ಶಿವನು, ಸಪ್ತ ಋಷಿಗಳಾದ ಅಗಸ್ತ್ಯ,ಭಾರಧ್ವಜ,ಗೌತಮ ಮಹರ್ಷಿ,ಮತ್ತು ವಿಶ್ವಾಮಿತ್ರ(ಜೈಮಿನಿ ಭಾರತದಲ್ಲಿನ ಸಪ್ತರ್ಷಿಗಳು)ರಿಗೆ ಬೋಧನೆ ಮಾಡಿದ್ದು ಪವಿತ್ರವಾದ ಈ ದಿನದಂದು.
2)ವೈದಿಕ ಕಾಲದ ವೇದ ಶ್ಲೋಕಗಳನ್ನು ಅವುಗಳ ಸ್ವರೂಪ,ಆಚರಣಿ ಮತ್ತು ಬೋಧನೆ ಆಧಾರದ ಮೇಲೆ ಋಗ್ವೇದ,ಯಜುರ್ವೇದ,ಸಾಮವೇದ ಮತ್ತು ಅಥರ್ವವೇದ ಎಂದು ವಿಂಗಡಿಸಿದ್ದ ವ್ಯಾಸ ಮಹರ್ಷಿಯ ಜನ್ಮ ದಿನವು ಇದೆ ದಿನ.
4)ಗೌತಮ ಬುದ್ಧನು ಸಾರನಾಥದಲ್ಲಿ ತನ್ನ ಸಹಚರರಿಗೆ ಧರ್ಮೋಪದೇಶವನ್ನು ಇದೇ ದಿನದಂದು ಪ್ರಾರಂಭಿಸಿದ್ದನು.
5)ಧರ್ಮ ಮತ್ತು ಪಾಠ ಭೋಧಿಸಿದ ಗುರುಗಳನ್ನು ಸ್ಮರಿಸುವ ಹಿನ್ನಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಇದೇ ದಿನದಂದು ಆಚರಿಸುತ್ತಿರುವುದನ್ನು ಕಾಣುತ್ತೇವೆ.
ಒಬ್ಬ ವ್ಯಕ್ತಿ,ಒಂದು ಸಿದ್ಧಾಂತ ಅಥವಾ ಒಂದು ಸಂಘಟನೆಯು ಗುರುವಾಗಿರಬಹುದು ಅಂದರೆ ಅರ್ಥ ಇಷ್ಟೇ, ಗುರು ಯಾವ ರೂಪದಲ್ಲಾದರು ಇರಬಹುದು ಆದರೆ ಗುರುವಿನ ಗುರು ಒಂದೇ ಆಗಿರಬೇಕು.ಅದು ಸನಾತನ/ಹಿಂದೂ/ಮಾನವ ಧರ್ಮ.
ಶಿಕ್ಷಣ ಕ್ಷೇತ್ರದ ಚಿಂತಕನಾಗಿ ಹೇಳುವುದಾದರೆ ಭಾರತೀಯ ಜ್ಞಾನದ ಆಧಾರದ ಮೇಲೆ ನಿರ್ಮಾಣವಾದ ಶಿಕ್ಷಣದ ವ್ಯವಸ್ಥೆಯಿಂದ ವ್ಯಕ್ತಿ,ಸಮಾಜ ಮತ್ತು ದೇಶದ ಪರಿವರ್ತನೆ ಸಾಧ್ಯ, ಪರಿವರ್ತನೆಯ ಮೂಲ ಅಭಿವೃದ್ಧಿಯೇ ಆಗಿರುತ್ತದೆ.
ಇನ್ನು ಭಾರತೀಯ ಜ್ಞಾನದಲ್ಲಿ ಇರುವುದು ಎನು?ಸನಾತನ ಧರ್ಮ ಎಂದರೇನು?ಅದರ ಪರೀಧಿ ಎಷ್ಟರ ಮಟ್ಟಿಗೆ ಆವರಿಸಿದೆ ಎನ್ನುವುದನ್ನು ನೋಡಿದಾಗ,
ವೇದಗಳಲ್ಲಿ ಧರ್ಮ ಮತ್ತು ಕರ್ಮದ,
ಉಪನಿಷತ್ತಿನಲ್ಲಿ ಸಂಸಾರ ಮತ್ತು ಮೋಕ್ಷದ,
ಭಗವದ್ಗೀತೆಯಲ್ಲಿ ಪ್ರವೃತ್ತಿ ಮತ್ತು ನಿವೃತ್ತಿಯ
ಅದೇ ರೀತಿ ಶಾಸ್ತ್ರಗಳಲ್ಲಿ ನೀತಿ,ನ್ಯಾಯ,ತರ್ಕ ಮತ್ತು ಪ್ರಮಾಣದ,
ದಾಸ ಸಾಹಿತ್ಯಗಳಲ್ಲಿ ಭಕ್ತಿರಸ,
ವಚನ ಸಾಹಿತ್ಯದಲ್ಲಿ ಕಾಯಕದ ಮಹತ್ವ ಉಲ್ಲೇಖವಾಗಿರುತ್ತದೆ.
ತದನಂತರ ರಾಜಮನೆತನದ ಕೊಡುಗೆಗಳು,
ಸ್ವಾತಂತ್ರ ಹೋರಾಟದ ಹಾದಿ,ದೇಶ ವಿಭಜನೆಯ ದುರಂತ, ರಾಷ್ಟ್ರೀಯ ಭಾವ ಮೂಡಿಸುವ ರಾಷೋಥ್ಥಾನದ ಸಾಹಿತ್ಯ ಇನ್ನೆಷ್ಟು ಭಂಡಾರ ಬೇಕು ವ್ಯಕ್ತಿ ಮತ್ತು ಸಮಾಜದ ಪರಿವರ್ತನೆಗೆ ಆದರೆ ಓದುವ ಹಂಬಲ ಮತ್ತು ದೃಢತೆ ಮಾತ್ರ ಯುವಕರಲ್ಲಿ ಹಾಗು ನಮ್ಮಲ್ಲಿ ಜಾಗೃತಗೊಳ್ಳಬೇಕಷ್ಟೇ.
ನದಿಗಳು ಎಲ್ಲೋ ಹುಟ್ಟಿ,ಎಲ್ಲೋ ಹರಿದು ಸಾಗರ ಸೇರುವಂತೆ,ನಮ್ಮೆಲ್ಲರ ವಿಚಾರಗಳು ಮತ್ತು ಸೇವಾಕಾರ್ಯಗಳು ಕೊನೆಗೆ ರಾಷ್ಟ್ರದ ಅಭಿವೃದ್ಧಿ ಎಂಬ ಸಾಗರವನ್ನು ಸೇರಲೇಬೇಕು ಎಂದು ಆಶಿಸುತ್ತಾ ಭಾರತವನ್ನು ವಿಶ್ವ ಗುರುವನ್ನಾಗಿಸುವ ಕನಸನ್ನು ನನಸನ್ನಾಗಿ ಮಾಡಲು ಕೈ ಜೋಡಿಸುವ
ಶರಣು ಶರಣಾರ್ಥಿ.
ಆತ್ಮೀಯ ಹೇಮಂತ್...
ReplyDeleteನಮಸ್ತೆ.
ಲೇಖನ ಚೆನ್ನಾಗಿದೆ ಮೂಡಿ ಬಂದಿದೆ .
ಬರೆಯುವ ಪ್ರವೃತ್ತಿ ಪ್ರಯತ್ನ ಪರಿಶ್ರಮ ಹೀಗೆ ಮುಂದುವರಿಯಲಿ...
ಬರವಣಿಗೆ, ಬೆಳೆದು ಬೆಳೆಯುತ್ತಾ, ಜ್ಞಾನ ಸಾಂದ್ರಿತವಾಗಲಿ...
ಮೊಗ್ಗಾಗಿ ಮೂಡಿ, ಹೂವಾಗಿ ಅರಳಿ, ಕಾಯಿಯಾಗಿ ಕಸುವು ತುಂಬಿ, ಹಣ್ಣಾಗಲಿ...!
ಆಶಯವು... 'ಸಫಲ'ವಾಗಲಿಯಂತೆ...!!
ಅಂತಿಮವು ! ಆಂಥರ್ಯವು !!
ನೀ ತಿಳಿಸಿದಂತೆ 'ಧರ್ಮ'ವು, ಅದಾಗಿರಲಿಯಂತೆ ಸದಾ...!
ಶುಭ ಹಾರೈಕೆಗಳು...
ಓಂ...
🙏☘️🌼
ನಿಮ್ಮ ಸಲಹೆ ಮತ್ತು ಮಾರ್ಗದರ್ಶನಕ್ಕೆ ನನ್ನದೊಂದು ನಮನ.
ReplyDeleteಧನ್ಯವಾದಗಳು ಸರ್
ಲೇಖನ ಉತ್ತಮವಾಗಿದೆ. ಒಳಗಿನ ವಿಷಯಗಳು ಇನ್ನೂ ವಿಸ್ತಾರಗೊಳ್ಳಲಿ. ಬರವಣಿಗೆ ಶುದ್ಧಗೊಳ್ಳಲಿ
ReplyDeleteಧನ್ಯವಾದಗಳು ಜಿ,ಸಲಹೆಯನ್ನು ಸ್ವೀಕರಿಸಿದ್ದೇನೆ.
Delete