ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃl
ಸದಾ ಹಚ್ಚ ಹಸಿರಿನಿಂದ, ನಿತ್ಯ ಹರಿದ್ವರ್ಣದಂತೆ ಕಾಣುವ ವನದೇವಿ.ಅಲ್ಲಲ್ಲಿ ಹಾಲಿನಂತೆ ಹರಿಯುತ್ತಿರುವ ಜಲಧಾರೆಗಳು.ತಮ್ಮ ದಾರಿಯನ್ನು ಹುಡುಕಿಕೊಂಡು ಮೈತುಂಬಿ ಹರಿಯುತ್ತಿರುವ ಜೇವನದಿಗಳು.ಸುಕೋಮಲವಾಗಿ ಅರಳಿರುವ ಬಣ್ಣ ಬಣ್ಣದ ಪುಷ್ಪಗಳು, ಮೈತುಂಬಿ ನಿಂತ ಫಲ ವೃಕ್ಷಗಳು. ಪ್ರಕೃತಿಗೆ ತಾವೇ ಒಡೆಯರೆಂಬಂತೆ ಸ್ವಚ್ಛಂದವಾಗಿ ಹಾರಾಡುತ್ತಿರುವ ಪಕ್ಷಿ ಸಂಕುಲ.ಇವೆಲ್ಲದರ ಜೊತೆಗೆ ಯಾವ ಹಂಗಿಲ್ಲದೆ ಬದುಕುತ್ತಿರುವ ಪ್ರಾಣಿಗಳು, ಇದು ಸಮೃದ್ಧಿಯಾದ "ವಸುಧಾ" ರಾಜ್ಯದ ಚಿತ್ರಣ. ಇನ್ನು ಇಲ್ಲಿನ ಜನರೋ ಪ್ರಕೃತಿ ಮಿತ್ರರು ಹಾಗು ಸತ್ಯ,ಧರ್ಮ, ನಿಷ್ಠೆ, ನೀತಿ ಮತ್ತು ನ್ಯಾಯಗಳನ್ನು ಪರಿಪಾಲಿಸುತ್ತ ನಮ್ಮದಿಯ ಜೀವನ ನಡೆಸುವುವರು. ಇಲ್ಲಿ ವಾಸಿಸುತ್ತಿರುವ "ಹರ್ಷಗೀತ" ಎಂಬ ಕುಟುಂಬದಲ್ಲಿನ ಬಾಲಕನ ಹೆಸರು "ಜಂಬುನಾಥ". ಅವನ ತಂದೆ-ತಾಯಿ,ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ - ದೊಡ್ಡಮ್ಮ, ಅಕ್ಕ, ತಂಗಿ,ಅಣ್ಣ,ತಮ್ಮ ಒಟ್ಟಾರೆಯಾಗಿ ಹನ್ನೊಂದು ಜನ ನೆಮ್ಮದಿಯ ಸಹಬಾಳ್ವೆ ನಡೆಸುತ್ತಿದ್ದರು, ಅವರ ಜೊತೆ ತಲ ತಲಮಾರುಗಳಿಂದ ಕೆಲಸ ಮಾಡುತ್ತಿದ್ದ "ರಹೀಮನ" ಕುಟುಂಬ ಅವನ ಮಗ "ಉಮರ್" ಮತ್ತು ಮಡದಿ "ರುಬಿಯಾ". ಹರ್ಷಗೀತ ಕುಟುಂಬದ ಪಕ್ಕದಲ್ಲಿ ವಾಸವಾಗಿದ್ದ "ಕೃಪಾಕರ್" ಜಂಬುನಾಥನ ಸ್ನೇಹಿತ ಅವನ ಮನೆಯಲ್ಲಿ ಅವನ ತಂದೆ ತಾಯಿ ಮತ್ತು ಅವನು ಅಷ್ಟೇ. ಅವರ ಮತ್ತು ಹರ್ಷಗ...