ವೈಚಾರಿಕತೆಯ ಸವಾರಿ

ವ್ಯವಸ್ಥೆಯೇ ಅವ್ಯವಸ್ಥೆಯ ಆಗರ,
 ಸಾಗುತಿದೆ ತಿಳಿಯದೇ ಜನ ಜಂಗುಳಿಯ ಸಾಗರ,
ಅರಾಜಕತೆ,ಅಸಮಾನತೆ,ಅನ್ಯಾಯ,ಅಧರ್ಮ ಮತ್ತು ಅನಾಚಾರಗಳಿಗಿದೆ ಇಲ್ಲಿ ಬಗೆ ಬಗೆಯ ಆಕರ,
ನೋಡುವವರ ದೃಷ್ಟಿಕೋನದಲ್ಲಿದೆ ಎಲ್ಲದರ ಆಧಾರ,
ಸಾಬೀತು ಪಡಿಸಲು ಹೊರಟರೆ ಎಲ್ಲವೂ ನಿರಾಧಾರ,
ಹೋರಾಟ ಒಂದೇ ನಿರಂತರ,ನಿರಂತರ.
ಇಲ್ಲಿದೆ ಎಲ್ಲದಕ್ಕೂ ಬೇರೂಂದು ಆಯಾಮ,ಅರ್ಥ,
ಪ್ರಧಾನ ಮಂತ್ರಿ - ಪ್ರಧಾನ ಸೇವಕ
ಸಂವಿಧಾನ - ಸಮಾಜ
ಶಾಸಕಾಂಗ- ಕಾರ್ಯಾಂಗ - ನ್ಯಾಯಾಂಗ
ಜನನಾಯಕ - ಜನಸೇವಕ
ಸಮಾಜ ಸೇವಕ - ಸಮಾಜ ಘಾತ
ಸರ್ಕಾರಿ - ಖಾಸಗಿ
ಅಧಿಕಾರ - ಸೇವೆ - ವ್ಯಾಪಾರ 
ಬಲ ಪಂಥ - ಎಡ ಪಂಥ
ಏಕೀಕರಣ - ವಿಭಾಗೀಕರಣ
ಧರ್ಮ - ಅಧರ್ಮ- ಮತ
ಹಿಂದೂ - ಅಹಿಂದೂ 
ಗಾಂಧಿ - ಗೋಡ್ಸೆ
ಕ್ರಮ - ಅಕ್ರಮ 
ವಿಭಕ್ತ- ಅವಿಭಕ್ತ 
ರಾಜಕೀಯ - ಅರಾಜಕೀಯ 
ಶಿಕ್ಷಣ - ದೂರ ಶಿಕ್ಷಣ - ಅಶಿಕ್ಷಣ 
ವಿದ್ಯೆ - ಅವಿದ್ಯೆ 
ಶೃತಿ - ಸ್ಮೃತಿ
ಪರಿಪಾಲಿಸುವ ಅರಿವೂ ಮಾತ್ರ ಅವರವರ ಭಾವತಹ ಭಕ್ತಿಗೆ ಬಿಟ್ಟದ್ದು,
ಇಂದು ಯುವ ಭಾರತ,ಮಕ್ಕಳೊಂದು,ಎರಡು ಮಾತ್ರ ಸಾಕೆಂದಾಗ,ಭವಿಷ್ಯದ ಭಾರತ?
ಬದಲಾವಣೆ,ಬೆಳವಣಿಗೆ ಸರಿ, ಆದರೆ ಅವುಗಳಿಗೆ ಕಾರ್ಯ ಯೋಜನೆ ತರಲು ಬೇಕಾದ ಅಧಿಕಾರ, ಅಧಿಕಾರ ಹಿಡಿಯುವ ಮಾರ್ಗ?
ಸಿದ್ಧಾಂತಗಳು,ತತ್ವ,ವೇದ,ಉಪನಿಷತ್,ಶಾಸ್ಸ,ಪುರಾಣ,ವಚನ,ವಿಜ್ಞಾನಗಳು ಸರಿ ಎಂದು ಒಪ್ಪಿಕೊಳ್ಳುವುದರೂಳಗಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಹಿನ್ನೆಲೆಯಿಂದ ಪರಿಷ್ಕರಣೆಯ ಕೂರತೆಯಲ್ಲಿರುವ ಸಂವಿಧಾನದ ಪರಿಪಾಲನೆ ನಾಗರಿಕನ ಕರ್ತವ್ಯ ಎಂಬ ಕರೆಗಂಟೆ ಹೊಡೆಯುವುದೇ ಹೆಚ್ಚು.
ಇವೆಲ್ಲದರ ನಡುವೆಯು  ದೇಶಪ್ರೇಮದಿಂದ  ಹದವಾದ ಭಾರತ ಮಾತೆಯ ಮಕ್ಕಳ ಮನಸ್ಸಿನಲಿ ಚಿಗುರೂಡೆದು,
ಸ್ವಾಭಿಮಾನದ ನೀರುಂಡು ಬೆಳೆಯುತ್ತಿರುವ ವಸನಾತನ ಧರ್ಮಾಧಾರಿತ ಅಖಂಡ(ಅವಿಭಜಿತ) ಭಾರತ ಎಂಬ ವೃಕ್ಷವು ಬೆಳೆಯುವುದೆಂತೋ? ಫಲ ನೀಡುವುದೆಂತೋ? ಇನ್ನೆಷ್ಟು ಕಾಲಗಳು ಕಾಲವಾಗಬೇಕೋ? ಹೇಳುವರಾರು,ತಿಳಿಸಿ ಹೇಳುವರಾರು?
ಮತ್ತದೇ ನಂಬಿಕೆಯ,ಭರವಸೆಯ ಜ್ಯೋತಿಯ ಬೆಳಕಿನಲಿ ಸಾಗುತಿದೆ ವೈಚಾರಿಕತೆಯ ಸವಾರಿ,ವೈಚಾರಿಕತೆಯ ಸವಾರಿ.

Comments

Post a Comment