ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃl

ಸದಾ ಹಚ್ಚ ಹಸಿರಿನಿಂದ, ನಿತ್ಯ ಹರಿದ್ವರ್ಣದಂತೆ ಕಾಣುವ ವನದೇವಿ.ಅಲ್ಲಲ್ಲಿ ಹಾಲಿನಂತೆ ಹರಿಯುತ್ತಿರುವ ಜಲಧಾರೆಗಳು.ತಮ್ಮ ದಾರಿಯನ್ನು ಹುಡುಕಿಕೊಂಡು ಮೈತುಂಬಿ ಹರಿಯುತ್ತಿರುವ ಜೇವನದಿಗಳು.ಸುಕೋಮಲವಾಗಿ ಅರಳಿರುವ ಬಣ್ಣ ಬಣ್ಣದ  ಪುಷ್ಪಗಳು, ಮೈತುಂಬಿ ನಿಂತ ಫಲ ವೃಕ್ಷಗಳು. ಪ್ರಕೃತಿಗೆ ತಾವೇ ಒಡೆಯರೆಂಬಂತೆ ಸ್ವಚ್ಛಂದವಾಗಿ ಹಾರಾಡುತ್ತಿರುವ ಪಕ್ಷಿ ಸಂಕುಲ.ಇವೆಲ್ಲದರ ಜೊತೆಗೆ ಯಾವ ಹಂಗಿಲ್ಲದೆ ಬದುಕುತ್ತಿರುವ ಪ್ರಾಣಿಗಳು, ಇದು ಸಮೃದ್ಧಿಯಾದ "ವಸುಧಾ" ರಾಜ್ಯದ ಚಿತ್ರಣ. 
ಇನ್ನು ಇಲ್ಲಿನ ಜನರೋ ಪ್ರಕೃತಿ ಮಿತ್ರರು ಹಾಗು ಸತ್ಯ,ಧರ್ಮ, ನಿಷ್ಠೆ, ನೀತಿ ಮತ್ತು ನ್ಯಾಯಗಳನ್ನು ಪರಿಪಾಲಿಸುತ್ತ ನಮ್ಮದಿಯ ಜೀವನ ನಡೆಸುವುವರು.   
ಇಲ್ಲಿ ವಾಸಿಸುತ್ತಿರುವ "ಹರ್ಷಗೀತ" ಎಂಬ ಕುಟುಂಬದಲ್ಲಿನ ಬಾಲಕನ ಹೆಸರು "ಜಂಬುನಾಥ". ಅವನ ತಂದೆ-ತಾಯಿ,ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ - ದೊಡ್ಡಮ್ಮ, ಅಕ್ಕ, ತಂಗಿ,ಅಣ್ಣ,ತಮ್ಮ ಒಟ್ಟಾರೆಯಾಗಿ ಹನ್ನೊಂದು ಜನ ನೆಮ್ಮದಿಯ ಸಹಬಾಳ್ವೆ ನಡೆಸುತ್ತಿದ್ದರು, ಅವರ ಜೊತೆ ತಲ ತಲಮಾರುಗಳಿಂದ ಕೆಲಸ ಮಾಡುತ್ತಿದ್ದ "ರಹೀಮನ" ಕುಟುಂಬ ಅವನ ಮಗ "ಉಮರ್" ಮತ್ತು ಮಡದಿ "ರುಬಿಯಾ". ಹರ್ಷಗೀತ ಕುಟುಂಬದ ಪಕ್ಕದಲ್ಲಿ ವಾಸವಾಗಿದ್ದ "ಕೃಪಾಕರ್" ಜಂಬುನಾಥನ ಸ್ನೇಹಿತ ಅವನ ಮನೆಯಲ್ಲಿ ಅವನ ತಂದೆ ತಾಯಿ ಮತ್ತು ಅವನು ಅಷ್ಟೇ. ಅವರ ಮತ್ತು ಹರ್ಷಗೀತ ಕುಟುಂಬದ ಆಚಾರ ವಿಚಾರಗಳಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು.
 ಜಂಬೂನಾಥನ  ಅಜ್ಜಿ ಸದಾ ಚಟುವಟಿಕೆಯಿಂದ ಮನೆಯಲ್ಲಿನ ಅಡುಗೆ, ಪೂಜಾ ವಿಧಿವಿಧಾನಗಳನ್ನು, ಅವರ ಅಜ್ಜ ಹೊರಗಡೆಯ ದೈನಂದಿನ ವ್ಯವಹಾರ, ಹೊಲಗದ್ದೆಗಳ ಕೆಲಸ ಎಲ್ಲವನ್ನು ಅವರೇ ನೋಡಿಕೊಳ್ಳುತ್ತಿದ್ದರು. ಮಕ್ಕಳನ್ನು  ಮತ್ತು ಮೊಮ್ಮಕ್ಕಳನ್ನು ಬಹಳ ಪ್ರೀತಿಯಿಂದ ಬೆಳಸಿದ್ದರು. ಇದ್ದಕ್ಕಿದ್ದ ಹಾಗೆ ರಾಜ್ಯದಲ್ಲಿ ಹರಡಿದ ಸಾಂಕ್ರಾಮಿಕ ರೋಗದ ಚಿಕಿತ್ಸೆ ಫಲಕಾರಿಯಾಗದೆ ಅವರು ಧೈವಾಧೀನರಾದರು. ಅವರ ಅನುಪಸ್ಥಿತಿಯಲ್ಲಿ ಕುಟುಂಬದ ವಾತಾವರಣ ಹದಗೆಡುತ್ತಾ ಬಂದಿತು,  ಬೇರೆ ಬೇರೆ ರೀತಿಯ ಆಲೋಚನೆಗಳು ಸಂಸಾರದ ನೆಮ್ಮದಿಯನ್ನು ಹಾಳು ಮಾಡಲಾರಂಭಿಸಿತು,
ಆಗ ಇರುವ ಆಸ್ತಿಯನ್ನು ಸಮಪಾಲು ಮಾಡಿ ಹಂಚಿಕೊಂಡು ಬೇರೆ ಬೇರೆಯಾಗಿ ಹೋದರೆ ನಮ್ಮ ಕುಟುಂಬದ ಜೂತೆಗೆ ಶಾಂತಿಯಿಂದ ನಾವಿರಬಹುದು ಎಂದೂ, ಮಕ್ಕಳಿಗೂ ಒಳ್ಳೆಯ ಭವಿಷ್ಯ ನೀಡಬಹುದು ಎಂದು ಆಲೋಚಿಸಿದರು.
ಕೊನೆಗೊಂದು ದಿನ ಕೃಪಾಕರ್ ತಂದೆ ತಾಯಿಯವರು ಕೂಡಾ ಪ್ರಪಂಚದಲ್ಲಿ ಈಗೆಲ್ಲ  ಗಂಡ ಹೆಂಡತಿ ಮಕ್ಕಳು ಇರುವುದೇ ಸಂಪ್ರದಾಯ ಎಂದು ಸಲಹೆ ನೀಡಿದ ನಂತರವಂತೂ ಆಸ್ತಿಯ ಭಾಗ ಮಾಡಲು ನಿರ್ಧಾರ ಮಾಡಿಯೇಬಿಟ್ಟರು. ಆಗ ಹೊಲ ಗದ್ದೆಗಳ ಎಲ್ಲ ಕೆಲಸಗಳನ್ನು ತಿಳಿದಿದ್ದ ರಹೀಮನು ನನ್ನ ಜೀವನವನ್ನೆಲ್ಲಾ ನಿಮ್ಮ ಕುಟುಂಬಕ್ಕೆ ಧಾರೆ ಎರದಿದ್ದೇನೆ, ನಿಮ್ಮಲ್ಲಿ ನಾನು ಒಬ್ಬನಾಗಿ ಬೆಳೆದಿದ್ದೇನೆ ಆದ್ದರಿಂದ ನನಗೂ ಒಂದು ಪಾಲು ಬೇಕೆಂದು ನಿವೇದನೆ  ಇಡುವ  ಬದಲು  ಆಗ್ರಹಿಸುವ  ಧ್ವನಿಯಲ್ಲೇ  ಕೇಳಿದನು.
ಇಷ್ಟೆಲ್ಲಾ ಆದನಂತರ ಮನೆಯಲ್ಲಿರುವ ಜನಗಳ ಮನಸ್ಸಿನಲ್ಲಿ ಸಂಬಂಧಗಳಿಗೆ,ಧರ್ಮ,ಕರ್ಮ ಮತ್ತು ಸಂಪ್ರದಾಯಗಳಿಗೆ ಯಾವುದೇ ರೀತಿಯ ಗೌರವವಲ್ಲ  ಆಲೋಚನೆಯು ಬರಲೇ ಇಲ್ಲ. ಕೊನೆಗೊಂದು ದಿನ ಇರುವ ಆಸ್ತಿಯನ್ನು , ಮನೆಯನ್ನು ಸಮನಾಗಿ ನಾಲ್ಕು ಭಾಗವನ್ನಾಗಿ ಮಾಡಿ ಸೀಮಾರೇಖೆಗಳನ್ನು ಸುಭಧ್ರಗೂಳಿಸಿ, ಒಂದು ಭಾಗವನ್ನು ರಹೀಮನ ಸ್ವಂತಕ್ಕೆ ಮತ್ತು ಉಳಿದ ಮೂರು ಭಾಗಗಳನ್ನು ವರ್ಷಕ್ಕೆ ಇಂತಿಷ್ಟು ಗೇಣಿ ನೀಡಬೇಕೆಂಬ ಒಕ್ಕಣಿಯ ಮೇರೆಗೆ ಅವನ ಸುಪರ್ಧಿಗೆ ನೀಡಲಾಯಿತು. ಒಂದೇ ಆಗಿದ್ದ ಹರ್ಷಗೀತ ಕುಟುಂಬವೀಗ ಮೂರು ಮನೆಗಳಾಗಿ ಹರಿದು ಹಂಚಿ ಹೋಯಿತು, ಆದರೆ ಹೊಲ ಗದ್ದೆಗಳು ಮಾತ್ರ ರಹೀಮ ಒಬ್ಬನಲ್ಲೇ ಉಳಿದವು.
ಹಿರಿಯರ ಮಾರ್ಗದರ್ಶನದಲ್ಲಿದ್ದ ಕುಟುಂಬದ ಸದಸ್ಯರಿಗೆ ಇದ್ದಕ್ಕಿದ್ದ ಹಾಗೆ ಅದೇನೋ ಒಂದು ಅನುಭವ ಅದನ್ನು ಸ್ವತಂತ್ರ ಎಂದು ಕೊಳ್ಳಬೇಕೆ? ಅಥವಾ ಸ್ವೇಚ್ಚೆ ಎಂದು ಕೊಳ್ಳಬೇಕೆ? ತಿಳಿಯದಂತಾಯಿತು, ಆದರೆ ತಮ್ಮ ಜೀವನದ ಆದಾಯದ ಮೂಲವನ್ನು ಬೇರೆಯವರಿಗೆ ಅರ್ಪಿಸಿದ್ದು ಮಾತ್ರ ಸ್ಪಷ್ಟವಾಗಿ ಕಾಣುತ್ತಿತ್ತು. ಕಾಲಕ್ರಮೇಣ ರಹೀಮನು ತನ್ನ ಸ್ವಂತ ಜಮೀನಿನ ಕೆಲಸವನ್ನು ಜಾಗೃತೆಯಿಂದಲೂ ಮನೆಯವರ ಆಸ್ತಿಯನ್ನು ಬೇಕಾ ಬಿಟ್ಟಿಯಂತೆ ನೋಡಿಕೊಳ್ಳಲಾರಂಭಿಸಿದನು ಇದರಿಂದಾಗಿ ಪ್ರತಿಯೊಬ್ಬರಿಗೂ ಬರುವ ಆದಾಯ ಕಡಿಮೆ  ಆಯಿತು, ಲೌಕಿಕ ಆಸೆಗಳು  ಹೆಚ್ಚಾಗುವ, ಖರ್ಚುಗಳೂ ಜಾಸ್ತಿ ಆದವು. ಕೊನೆಗೆ ಮನೆಯ ಯಜಮಾನರು ಬೇರೆಯವರ ಆಧೀನದಲ್ಲಿ ತಿಂಗಳ ಸಂಬಳಕ್ಕಾಗಿ ದುಡಿಯುವ ಪರಿಸ್ಥಿತಿ ಬಂದುಬಿಟ್ಟಿತು.
ವಸುಧಾ ರಾಜ್ಯಕ್ಕೆ ಬೇರೆ ದೇಶದಿಂದ ಮಾರುವೇಷದಲ್ಲಿ ಬಂದಿದ್ದ ವ್ಯಕ್ತಿಯ ಹೆಸರು ಖಲೀಜಾ, ಅವನ ಮನಸ್ಥಿತಿ ಎಷ್ಟು ವಿಚಿತ್ರ ಎಂದರೆ ಯಾವುದೇ ರಾಜ್ಯವು ಸುಖ, ನೆಮ್ಮದಿ ಮತ್ತು ಸೊಂತೋಶದಿಂದ ಇದೆ ಎಂದರೆ ಅದನ್ನು ಹಾಳು ಮಾಡುವವರೆಗೂ ಇವನಿಗೆ ನಿದ್ದೆ ಬರುವುದಿಲ್ಲ ಅಂತಹ ವ್ಯಕ್ತಿಯ ಕೆಳಗೆ ಹರ್ಷಗೀತ ಕುಟುಂಬದವರು ಉದ್ಯೋಗಿಗಳಾಗಿ ಅಲ್ಲ ಜೀತದಾಳಾಗಿ ಸೇರಿಕೊಂಡಿದ್ದರು.ಕಾಕತಾಳೀಯ ಎಂಬಂತೆ ರಹೀಮನ ವಂಶಸ್ಥರು ಮತ್ತು ಖಲೀಜಾನ ವಂಶಸ್ಥರು ಒಂದೇ ಮೂಲದವರಾಗಿದ್ದ ಕಾರಣ ಅವನಿಗೆ ಇಲ್ಲ ಸಲ್ಲದ ಆಮಿಷ ತೋರಿಸಿ, ಅವನು ನೋಡಿಕೊಳ್ಳುತ್ತಿದ್ದ ಎಲ್ಲ ವಿಭಜಿತ ಆಸ್ತಿಯನ್ನು ಬಲವಂತವಾಗಿ ವಶಪಡಿಸಿಕೊಂಡನು. ಕಾಲ ಉರುಳಿದಂತೆ ಖಲೀಜಾನನಿಗೂ ವಯಸ್ಸಾಯಿತು ಅವನ ಹಿಡಿತ ಕಡಿಮೆಯಾಯಿತು.
ಈ ಸಮಯದಲ್ಲಿ ಕೃಪಾಕರ್ ವಂಶಸ್ಥರು ವಸುಧಾ ರಾಜ್ಯಕ್ಕೆ ವ್ಯಾಪಾರ ಮಾಡಲು ಬರುತ್ತಾರೆ ಅವರ ಹೆಸರು ಬೆಂಟಿಕರಾಯ.ಇಲ್ಲಿನ ನೈಸರ್ಗಿಕ ಸಂಪತ್ತು ಮತ್ತು ಜನರ ಮನಸ್ಥಿತಿಯನ್ನು ಕಂಡು ಸಮಾಜದಲ್ಲಿ ಕುತಂತ್ರದ ಬುದ್ದಿಯಿಂದ ಜನರಿಗೆ ಮೋಸ ಮಾಡಿ, ಖಲೀಜಾನ ಜೂತೆ ಒಳ ಒಪ್ಪಂದ ಮಾಡಿಕೊಂಡು,ವಸುಧಾ ರಾಜ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಾರೆ ನಂತರ ಅವರ ಹಿಂದೆ ಬಂದವರೆಲ್ಲ ರಾಜ್ಯವನ್ನು, ರಾಜ್ಯದ ಜನರನ್ನು ಮತ್ತು ಸಂಪತ್ತನ್ನು ಕೇವಲ ಭೋಗಕ್ಕೆ ಇರುವ ವಸ್ತುವಿನಂತೆ ಅನುಭವಿಸುತ್ತ ಹಾಳು ಮಾಡುತ್ತಾರೆ.
ಕೃಪಾಕರ್ ಮಾತ್ರ  ತುಂಬಿದ ಕುಟುಂಬದಿಂದ ಆಗುವ ಪ್ರಯೋಜನವನ್ನು ಸಾಧ್ಯವಾದಷ್ಟು ಎಲ್ಲರಿಗೂ ತಿಳಿಸುತ್ತಾ ಇರುತ್ತಾನೆ, ಅದೇ ರೀತಿ ಉಮರ್ ಕೂಡ  ಒಳ ಒಪ್ಪಂದಗಳ ಮೂಲಕ ಸುಖವಾದ ಜೀವನ ನಡೆಸುತ್ತಿರುತ್ತಾನೆ ಇದಕ್ಕೆ ಅವರ ತಾಯಿ ರುಬಿಯಾರವರ ವಿರೋಧ ಇರುತ್ತದೆ, ನ್ಯಾಯವಾಗಿ ದುಡಿಯುವ ಬಗ್ಗೆ ಸದಾ ಹೇಳುತ್ತಾ ಇರುತ್ತಾಳೆ.
ಇತ್ತ ಜಂಬುನಾಥನ ಕುಟುಂಬವು, ತನ್ನ ಹಿರಿಯರು ಬದುಕಿದ್ದ ರೀತಿ, ಮಕ್ಕಳನ್ನು ಬೆಳೆಸಿದ್ದ ಬಗೆ, ಮನೆ, ಸಂಸಾರ ಮತ್ತು ಹೊಲ ಗದ್ದೆಯನ್ನು ನೋಡಿಕೊಳುತ್ತಿದ್ದ ಸಂಸ್ಕೃತಿ ಅವರು ಅಧ್ಯಯನ ಮಾಡುತ್ತಿದ್ದ ವಿಷಯಗಳು, ರಹೀಮ ಮತ್ತು ಕೃಪಾಕರ್ ಕುಟುಂಬದ ಜೂತೆ ಇದ್ದು ಬಾಂಧವ್ಯ, 
ಈ ರೀತಿ ಎಲ್ಲ ವಿಷಯಗಳಲ್ಲಿನ ಸೂಕ್ಷ್ಮತೆಯ ಆಳವನ್ನು ಅರಿತುಕೊಳ್ಳಲು ಖಲೀಜಾ ಮತ್ತು ಬೆಂಟಿಕರಾಯ ನಂತಹ ವಿಷಘಾತಕರು ಬರಬೇಕಾಯಿತು ಎಂದು ಪಶ್ಚಾತಾಪ ಪಟ್ಟರು ಮಾನಸಿಕವಾಗಿ ಕುಗ್ಗಿದರು ಪರಿಣಾಮವಾಗಿ ಆರೋಗ್ಯ ಹದಗೆಟ್ಟಿತು ಅನೇಕರು ಅಸುನೀಗಿದರು ಆದರೆ ಜಂಬುನಾಥನ  ಅಕ್ಕ ತಂಗಿ ಅಣ್ಣ ತಮ್ಮ ಮಾತ್ರ ಇದಕ್ಕೊಂದು ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಆಲೋಚಿಸಲು ಪ್ರಾರಂಭಿಸಿದರು.
ಜಂಬೂನಾಥ ಮತ್ತು ಅವನ  ತಮ್ಮ,ತಂಗಿ  ಇದಕ್ಕೆಲ್ಲಾ ಹೋರಾಟ ಮತ್ತು ಕ್ರಾಂತಿಯೇ ಸರಿಯಾದ ಮಾರ್ಗ ಎಂದು ಹೇಳಿದರೆ, ಅವನ ಅಣ್ಣ ಅಕ್ಕ ಮಾತ್ರ ಇದಕ್ಕೆ ಕೇವಲ ಶಾಂತಿ ಮತ್ತು ಅಹಿಂಸೆಯ ಮಾರ್ಗ ಒಂದೇ ಪರಿಹಾರ ಎಂದರು. ಆದರೆ ಒಮ್ಮತದ ಅಭಿಪ್ರಾಯ ಬರಲೇ ಇಲ್ಲ. ಅಂದು ಅಜ್ಜ ಅಜ್ಜಿಯ ನಿಧನ, ನಂತರ ಆಸ್ತಿಯ ಭಾಗ, ಇಂದು ಮೊಮ್ಮಕ್ಕಳ ವೈಚಾರಿಕತೆಯ ಭಿನ್ನತೆ, ಮೂರು ತಲೆಮಾರುಗಳು ಇತಿಹಾಸದ ಗರ್ಭದಲ್ಲಿ ಅಸ್ತಂಗತವಾದವು.
ಆದರೆ ವಸುಧೆಯು ಮಾತ್ರ ತನ್ನನ್ನು ನಂಬಿದವರಿಗೂ,ನಂಬಿದಂತೆ ನಟನೆ ಮಾಡುವವರಿಗೂ ಮತ್ತು ನಂಬದೆ ಕೊಳ್ಳೆ ಹೊಡೆಯುವವರಿಗೂ  ಏನು ಬೇಕೋ ಅದನ್ನು ನೀಡುತ್ತಾ ಎಲ್ಲರನ್ನು ಒಂದೇ ಭಾವನೆಯಲ್ಲಿ ನೋಡುತ್ತಾ ಅಖಂಡತೆಯ ಭಾವವನ್ನು ನೋಡುವವರ ದೃಷ್ಟಿಕೋನಕ್ಕೆ, ವೈಚಾರಿಕತೆಯ ಬುಧ್ಧಿಮಟ್ಟಕ್ಕೆ ಬಿಟ್ಟಿದ್ದಾಳೆ.

ಕೃಪೆ: ಗೂಗಲ್ 

Comments

  1. ಚನ್ನಾಗಿ ಬರೆದಿದ್ದೀರಿ

    ReplyDelete
  2. ತುಂಬಾ ಒಳ್ಳೆಯ ಕಥೆ....ಪ್ರಸ್ತುತ ಸ್ಥಿತಿಯ ನೈಜ ಚಿತ್ರಣ....

    ReplyDelete
  3. Vastu sthitiya kai gannadi

    ReplyDelete
  4. ತುಂಬಾ ಚೆನ್ನಾಗಿದೆ

    ReplyDelete
  5. One of the best story it's heart touching... ❤👌

    ReplyDelete
  6. ಚನ್ನಗಿ ಇದೆ 👌👌👍👍

    ReplyDelete
  7. ಅದ್ಬುತವಾದ ಬರವಣಿಗೆ

    ReplyDelete
  8. Baravanige karaghathavagide innu hechu hechu bareyuva havyasa belasikolli...
    Pada jodane adbutha

    ReplyDelete
  9. Very nice information thank you sir

    ReplyDelete

Post a Comment

Popular posts from this blog

"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ "ಭಾಗ-೧

ಹಳ್ಳಿ ಹುಡುಗ.......ನಿ(ರಂಜ)ನ ಭಾಗ 2.

ಬದಲಾದ ಕಾಲದಲ್ಲಿ ಬೇಕಾದ ಬದಲಾವಣೆಗಳು