"ಬಲಿದಾನ ದಿವಸ ಮಹತ್ವ"



ತಾಯಿ ಭಾರತಮಾತೆ ಎಷ್ಟು ಶಾಂತಿಪ್ರಿಯಳು ಅಂದರೆ, ಭಾರತದ ಸ್ವಾತಂತ್ರ,ಬ್ರಿಟಿಷರ ಭಿಕ್ಷೆಯೋ ಅಥವಾ ನಮ್ಮ 1ಹೋರಾಟದ ಪ್ರತಿಫಲವೋ? ಅನ್ನೋ ವಿಷಯವು ಇನ್ನು ಅಧಿಕೃತವಾಗಿ, ಸವಿಸ್ತಾರವಾಗಿ ಮತ್ತು ಸಾಕ್ಷಾಧಾರಿತವಾಗಿ ಎಲ್ಲ ರೀತಿಯ ಚಿಂತಕರು ಒಪ್ಪುವಂತೆ ಮೂಡಿಬಂದಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರು ಮತ್ತು ನಾಯಕರುಗಳ ನಡೆ,ವಿಚಾರ ಮತ್ತು ಪುರಾವೆಗಳನ್ನು ಅಧ್ಯಯನ ಮಾಡಿದಷ್ಟು ಬೇರೆ ಬೇರೆ ಆಯಾಮಗಳು ಹೊರ ಬರುತ್ತಿವೆ.

ಸ್ವಾತಂತ್ರಕ್ಕಾಗಿ ಅಹಿಂಸಾತ್ಮಕ ಚಳುವಳಿ ದಾರಿ ಹಿಡಿದು ದೇಶದ ಪಿತಾಮಹ ಆಗಿರೋದು ಉಂಟು, ಅದೇ ರೀತಿ ಸ್ವಾಭಿಮಾನದಿಂದ ಸ್ವಾತಂತ್ರದ ಸಾಧನೆಗೆಂದೇ ತಮ್ಮ ಅತ್ಯಮೂಲ್ಯವಾದ ಜೀವನವನ್ನು ಬಲಿ ಕೊಟ್ಟು ಹುತಾತ್ಮರಾದದ್ದು ಉಂಟು.

ಇಂದಿಗೂ ಕೂಡ ನಾವು ಎರಡು ರೀತಿಯ ಜನರನ್ನು ಗುರುತಿಸಬಹುದು, ಒಂದು ಸ್ವಾರ್ಥ ಸಾಧನೆಗೆ ಸಮಾಜವನ್ನು, ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿದು ರಾಜಕೀಯ ಲಾಭ ಮಾಡುವ ಜನರ ಗುಂಪು, ಅದೇ ರೀತಿ ಎರಡನೆಯದು, ನಿಸ್ವಾರ್ಥ ಭಾವನೆಯಿಂದ ಸಮಾಜದ ಯವುದೋ ಒಂದು ಕ್ಷೇತ್ರದಲ್ಲಿ ಯಾವ ಪ್ರತಿಫಲದ ಅಪೇಕ್ಷೆಯಿಲ್ಲದೆ ಸೇವೆ ಮಾಡುತ್ತ್ತಿರುವ ನಿಷ್ಕಲ್ಮಶ ಜನರ ಒಂದು ಗುಂಪು. ಇನ್ನು  ಪುರಾಣಗಳಲ್ಲಿ ನಾವು ಕಾಣುವ ಸುರ ಮತ್ತು ಅಸುರರನ್ನು ಸಲಹುತ್ತಿರುವುದು ಶಕ್ತಿ ಸ್ವರೂಪಿಣಿಯಾದ ತಾಯಿ ಆಧಿಶಕ್ತಿ, ಅದೇರೀತಿ ಭಾರತ ಮಾತೆ ಮೇಲೆ ತಿಳಿಸಿದ ಎರೆಡು ಗುಂಪಿನ ಜನರನ್ನು ಸಲಹುತ್ತಿದ್ದಾಳೆ.ಸ್ವಾತಂತ್ರ ಪಡೆದು ಸರಿಸುಮಾರು 75 ವರ್ಷಗಳ ಸಮೀಪದಲ್ಲಿರುವ ನಾವು ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ ಅಥವಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಅನುಮಾನದಲ್ಲಿರುವುದನ್ನು ಸುಳ್ಳು ಎಂದು ತಳ್ಳಿಹಾಕುವುದು ಅಸಾಧ್ಯ.

ರಕ್ಷಣಾ ಕ್ಷೇತ್ರದಲ್ಲಿ $71 ಬಿಲಿಯನ್ ಬಜೆಟ್ ನೀಡುವ ಮೂಲಕ ಪ್ರಪಂಚದಲ್ಲೇ ನಾಲ್ಕನೇ ಸ್ಥಾನ ಪಡೆದಿರುವುದು, ಅದೇ ರೀತಿಯಾಗಿ ಪ್ರಪಂಚಕ್ಕೆ ಕರೋನ ಮಹಾಮಾರಿಯ ವಿರುದ್ಧ ಹೋರಾಡಲು ಲಸಿಕೆ ಕಂಡು ಹಿಡಿದಿರುವುದು ಮತ್ತು 92 ರಾಷ್ಟ್ರಗಳು ಉತ್ಪಾದಿತ ಲಸಿಕೆಯನ್ನು ಕಂಡಿಕೊಳ್ಳಲು ಮುಂದೆ ಬಂದಿರುವುದು, ಯೋಗ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿರುವುದು, ಭಾರತದ ರಾಷ್ಟ್ರಪತಿಗಳಿಂದ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ಸಾಮಾನ್ಯರಲ್ಲಿ ಅಸಾಮಾನ್ಯರಾದ ಜನರು ಸ್ವೀಕರಿಸಿದ್ದು, ಈ ರೀತಿ ಹತ್ತು ಹಲವು ಉದಾಹರಣೆಗಳನ್ನು ನೋಡಿದಾಗ ಪ್ರತಿಯೊಬ್ಬ ದೇಶಪ್ರಜೆಗು ಅನ್ನಿಸುತ್ತೆ ದೇಶ ಅಭಿವೃದ್ಧಿ ಹೊಂದಿದೆ ಆದರೆ,ವಿಶ್ವ ಗುರು ಸ್ಥಾನವನ್ನು ,ತನ್ನ ವೈಭವನ್ನು ಪಡೆಯಲು ಪ್ರತಿಯೊಬ್ಬ ನಾಗರಿಕರು ಆಲೋಚನೆ ಮಾಡಲೇಬೇಕು, ದೇಶದ ಪ್ರಗತಿಯ ಬಗ್ಗೆ ಆಲೋಚನೆ ಮಾಡಲೇಬೇಕಾಗಿರುವುದು ನಿಜ ಎಂದರೇ ತಪ್ಪಾಗಲಾರದು.

ಸ್ವಾಭಿಮಾನಿ ಭಾರತ, ಆತ್ಮ ನಿರ್ಭರ ಭಾರತ, make in india,skill india  ಮತ್ತು ಸ್ವಚ್ಛ ಭಾರತ್ ಇವೆಲ್ಲದರ ಆಲೋಚನೆ ಮತ್ತು ಯೋಜನೆಗಳು ಒಂದು ದಿನದಲ್ಲಿ ಜನ್ಮ ತಾಳಿದ್ದಲ್ಲ, ಅದೇ ರೀತಿ ಎಲ್ಲಿಂದಲೋ ಎರವಲು ತಂದದ್ದು ಅಲ್ಲ.

ವಿನಾಯಕ ದಾಮೋದರ್ ಸಾವರ್ಕರ್, ಬಾಲಗಂಗಾಧರ ತಿಲಕ್, ಸುಭಾಷ್ ಚಂದ್ರ ಭೋಸ್, ಚಂದ್ರಶೇಖರ್ ಅಜಾದ್,

ಭಗತ್ ಸಿಂಗ್, ರಾಜಗುರು, ಸುಖ್ ದೇವ್ ಮತ್ತು  ಚಾಪೇಕರ್ ಸಹೋದರರು ಇನ್ನು ಹಲವರು  ಕ್ರಾಂತಿಕಾರಿ ಯೋಜನೆಗಳ ಮೂಲಕ ಬ್ರಿಟಿಷರ ಸಾಮ್ರಾಜ್ಯ ಶಾಹಿ ಧೋರಣೆಯ ವಿರುದ್ಧ ಹೋರಾಡಿ, ದೇಶದ ಘನತೆಗೆ ಎಳ್ಳಷ್ಟೂ ದಕ್ಕೆ ತರದೆ ತಮ್ಮ ಜೀವವನ್ನು ಭಾರತ ಮಾತೆಗೆ ದಾನ ಮಾಡಿದ ದೇಶ ಭಕ್ತ ಯುವಜನಾಂಗದ ಪೂಜಾಫಲ ಎಂಬುದು ನನ್ನ ನಂಬಿಕೆ.

ಈ ರೀತಿ ದೇಶದ ಸ್ವಾತಂತ್ರ ಹೋರಾಟದಲ್ಲಿ  ಕ್ರಾಂತಿಕಾರಿ ದಾರಿಯನ್ನು ಹಿಡಿದ ಮೂರು ಸಿಂಹಗಳನ್ನು ನೇಣುಕಂಬಕ್ಕೇರಿಸಿದ ದಿನವನ್ನು ನಾವು ಬಲಿದಾನ ದಿವಸ್ ಅಥವಾ ಸಂಕಲ್ಪ ದಿವಸ್ ಎಂದು ಮಾರ್ಚ್ 23, 2021 ರಂದು ದೇಶದೆಲ್ಲೆಡೆ ಸಾಧ್ಯವಾದಷ್ಟು ಕಡೆ ಆಚರಿಸಿರುವದನ್ನು ನಾವು ಕಾಣುತ್ತೇವೆ.

ತಮ್ಮ ಯೋಚನೆ ಮತ್ತು ಯೋಜನೆಗಳ ಮೂಲಕ ಬ್ರಿಟಿಷರನ್ನೇ ನಡುಗಿಸಿದ ಆ ಮೂರು ಸಿಂಹಗಳು, ಭಗತ್ ಸಿಂಗ್,

ಶಿವರಾಂ ರಾಜಗುರು ಮತ್ತು ಸುಖದೇವ್. ಸರ್ಕಾರದ ಆದೇಶದ ಮೇರೆಗೆ ಅವರ ಮರಣ ದಂಡನೆ ಶಿಕ್ಷೆ ನಿಶ್ವಯವಾದದ್ದು ಮಾರ್ಚ್ 24, 1931 ರಂದು ಲಾಹೋರ್ ಸೆಂಟ್ರಲ್ ಜೈಲಿನಲ್ಲಿ, ಆದರೆ ನೇಣಿಗೆ ಹಾಕಿದ್ದು ಮಾತ್ರ ಮಾರ್ಚ್ 23, 1931 ರ ಸಂಜೆ 7:33 ಕ್ಕೆ ಅಂದರೆ ಸರಿಸುಮಾರು 11 ಗಂಟೆ ನಿಗದಿಯಾದ ಸಮಯಕ್ಕಿಂತ ಮುಂಚೆ ಕಾರಣವೇನಿರಬಹುದು ತಿಳಿಯೋಣ ಬನ್ನಿ.

ಅಂದು ಮಾರ್ಚ್ 23,1931 ರೆಂದು ನಿಸ್ಪಕ್ಷಪಾತಿಯಾದ ಸೂರ್ಯನು ಎಂದಿನಂತೆ ಉದಯಿಸಿದನು, ಲಾಹೋರ್ ಜೈಲಿನಲ್ಲಿ ಮಾತ್ರ ಯಾಕಾದರೂ ಬೆಳಗಾಯಿತು ಎಂಬ ಪ್ರಶ್ನೆ ಎಲ್ಲರ ಮುಖದಲ್ಲಿ ಮೌನ ಮೂಡಿಸಿತ್ತು, ಎಲ್ಲರದು ಒಂದೇ ಆಶಯ ಮಾರ್ಚ್ 24 ಬರಬಾರದು, ಸಮಯ ಈಗಲೇ ಓಡದೆ ನಿಲ್ಲಬೇಕಿತ್ತು ಆ ದೇಶಭಕ್ತ ಯುವಕರಿಗೆ ಶಿಕ್ಷೆಯಾಗಬಾರದು ಎಂಬ ಒಂದೇ ಕಾರಣಕ್ಕೆ.

ಸರಿಸುಮಾರು 12 : 00 ಗಂಟೆಯ ಮಧ್ಯಾಹ್ನದ ಸಮಯ ವಾಡಿಕೆಯಂತೆ ತಂದೆ. ತಾಯಿ, ಮಡದಿ. ಮಕ್ಕಳು, ಬಂಧು ಮಿತ್ರರು ಭಗತ್ ಸಿಂಗ್, ಶಿವರಾಂ ರಾಜಗುರು ಮತ್ತು ಸುಖದೇವ್ ಅವರನ್ನು ಭೇಟಿಮಾಡಲು ಕಾತರದಿಂದ ಕಾಯುತ್ತಿದ್ದರು ಆದರೆ ಜೈಲಿನ ಅಧಿಕಾರಿಗಳು ಕೇವಲ ಖೈದಿಯ ತಂದೆ ತಾಯಿಯನ್ನು ಮಾತ್ರ ಭೇಟಿಗೆ ಅವಕಾಶ ನೀಡುವುದಾಗಿ ಆದೇಶಿಸಿದರು. ಇದನ್ನು ಮೊದಲೇ ಊಹಿಸಿದ್ದ ಭೇಟಿಗೆ ಬಂಡ ಜನರ ಗುಂಪು ಇದನ್ನು ವಿರೋಧಿಸಿ ಹೂರ ನಡೆದರು. ಕ್ಷಣಾರ್ಧದಲ್ಲಿ ಈ ಸುದ್ಧಿ ಎಲ್ಲ ಕಡೆ ಹಬ್ಬಿ ಸಾರ್ವಜನಿಕರು, ಪತ್ರಕರ್ತರು ಜಮಾಯೆಸಿದರು ಮತ್ತು ಸರಕಾರ ಹಾಗು ಜೈಲಿನ ಅಧಿಕಾರಿಗಳ ವಿರುದ್ಧ ಘೋಷಣೆ ಹಾಕಲು ಪ್ರಾರಂಭಿಸಿದರು ಕ್ರಾಂತಿಯ ಕಿಡಿ ವಾತಾವರಣವನ್ನು ಆವರಿಸಲು ಪ್ರಾರಂಭ ಮಾಡಿತು.

ಇತ್ತ ಜೈಲಿನಲ್ಲಿ ಸುಮಾರು 1:00 ಗಂಟೆ ಸಮಯಕ್ಕೆ ಪುಸ್ತಕವನ್ನು ಓದುತ್ತಾ ಕುಳಿತಿದ್ದ ಭಗತ್ ಸಿಂಗ್ ಮತ್ತು ಸಾವಿನ ದಿನ ಸಮೀಪಿಸುತ್ತಿಂದಂತೆ ರಾಜಗುರು ಅವರು ಮೌನಕ್ಕೆ ಶರಣಾಗಿದ್ದು ನಿಜ ಆದರೆ ಅವರು ತನ್ನ ಸಹವರ್ತಿಗೆ ಕಾರಣವನ್ನು ಈ ರೀತಿಯಾಗಿ ತಿಳಿಸುತ್ತಾರೆ, "ನನ್ನ ಈ  ಸ್ಥಿತಿಗೆ ನಾನು ಹೆಮ್ಮೆ ಪಡುತ್ತೇನೆ, ಸಾವಿನ ಬಗ್ಗೆ ಭಯವನ್ನು ಬಿಟ್ಟಮೇಲೆ ನಾವು ಇಲ್ಲಿಯವರೆಗೂ ಬಂದಿದ್ದು, ನಮ್ಮ ಸಾವಿನ ನಂತರ ಎಷ್ಟೂಜನ ಪ್ರೇರಿತರಾಗಿ ನಮ್ಮ ದಾರಿ ಹಿಡಿದು ನಮ್ಮನ್ನು ಆಶಿಸುತ್ತಾರೆ ಮತ್ತು ಸ್ವಾತಂತ್ರದ ಬೆಳಕನ್ನು ಕಾಣುತ್ತಾರೆ".

 ಸಂಜೆ 4:00  ಗಂಟೆಗೆ ಬರ್ಕತ್ ಎಂಬ ಕ್ಷೌರಿಕನಿಂದ ಆದೇಶದ ಸಮಯವನ್ನು 11 ಗಂಟೆ ಮುಂಚಿತವಾಗಿ ಅಂದರೆ ಮಾರ್ಚ್ 23 ರ 7:00 ಗಂಟೆಗೆ ಬದಲಾವಣೆ ಮಾಡಿರುವ ಸುದ್ದಿ ಹೊರಗಡೆ ಬಂದಿತು. ಜೈಲಿನ ಅಧಿಕಾರಿಗಳು ಹೊಸ ಆದೇಶದಂತೆ ಜೈಲಿನ ಕಿಟಕಿ ಬಾಗಿಲುಗಳನ್ನು ಮುಚ್ಚಲು ಆರಂಭಿಸಿದರು ಕಾರಣ ಇಷ್ಟೇ ಅಧಿಕಾರವಿದ್ದರೂ ಕ್ರಾಂತಿಕಾರಿಗಳ ಮೇಲಿದ್ದ ಭಯ ಎನ್ನಬಹುದು.

 ಹೊಸ ಆದೇಶದ ಅನ್ವಯ ಸಂಜೆ 7:00 ಗಂಟೆಗೆ ವೈದ್ಯರು ತೂಕ ಪರಿಶೀಲಿಸಿದಾಗ ಹಿಂದಿನ ತೂಕಕ್ಕಿಂತ ಜಾಸ್ತಿಯಾಗಿರುವುದು ಕಂಡು ಬಂದಿತು. ಸಿಂಹಗಳು ಬೋನಿನಿಂದ ಹೊರಬಂದಂತೆ ೩ ಸಿಂಹಗಳು ಹೊರಬಂದವು, ಮಧ್ಯದಲ್ಲಿ  ಭಗತ್ ಸಿಂಗ್, ಅವರ ಬಲಕ್ಕೆ ಶಿವರಾಂ ರಾಜಗುರು ಮತ್ತು ಎಡಕ್ಕೆ ಸುಖದೇವ್ ನಿಂತಿದ್ದರು.ಇವರು ಕೈಕೋಳವನ್ನು ನಿರಾಕರಿಸಿದರು ಕಾನೂನಿನಂತೆ ಹಾಕಲಾಯಿತು ನಂತರ ಭಗತಸಿಂಗ್ ಅವರು ಈ ಕೆಳ್ಗಗಿನ ಭಾವಾರ್ಥ ಇರುವ ಹಾಡನ್ನು ಹಾಡುತ್ತಾ  ನೇಣು ಕಂಬದ ಕಡೆಗೆ ನಡೆದರು,

"ಕೇವಲ ನನ್ನ ಹೃದಯದಿಂದ ಅಲ್ಲ, ನನ್ನ ಚಿತಾಭಸ್ಮದಿಂದ ಕೂಡ ನನ್ನ ಭೂಮಿಯ ಸುಗಂಧ ಹೊರಹೊಮ್ಮುತ್ತದೆ."

ಅದೇ ರೀತಿ ಅಲ್ಲಿಯೇ ನಿಂತಿದ್ದ ಅಧಿಕಾರಿಗೆ," ಮಿಸ್ಟರ್. ಮ್ಯಾಜಿಸ್ಟ್ರೇಟ್, ಒಬ್ಬ ಕ್ರಾಂತಿಕಾರಿ ತನ್ನ ದೇಶಕ್ಕಾಗಿ ಮತ್ತು ಸಿದ್ಧಾಂತಕ್ಕಾಗಿ ತನ್ನ ಜೀವ ತ್ಯಾಗ ಮಾಡುವುದನ್ನು ನಿನ್ನ ಕಣ್ಣಾರೆ ತುಂಬಿಕೊಳ್ಳುತ್ತಿರುವುದು ನಿನ್ನ ಅದೃಷ್ಟವೇ ಸರಿ", ಎಂದು ಹೇಳುತ್ತಾರೆ.

ಈ ವಿಷಯವನ್ನು ಪಂಡಿತ್,ಕೆ. ಶಾಂತನಂ ಮ್ಯಾನೇಜರ್, ಲಕ್ಷ್ಮಿ ಇನ್ಶೂರೆನ್ಸ್ ಕಂಪನಿ. ಅವರು ಜೈಲಿನ ಹೊರಗಡೆ ಸೇರಿದ ಜನರ ಗುಂಪನ್ನು ಕುರಿತು ಮಾತನಾಡುತ್ತಿದ್ದ  ಭಗತ್ ಸಿಂಗ್ ತಂದೆ ಸರ್ದಾರ್ ಕಿಶನ್ ಸಿಂಗ್ ಅವರಿಗೆ ತಿಳಿಸುತ್ತಾರೆ. ಅಲ್ಲಿ ನೆರೆದಿದ್ದ ಜನರ ಗುಂಪಿನ ಮೇಲೆ ಹಿಡಿತ ಬಿಟ್ಟರೆ ಕರ್ಫ್ಯೂ ಮತ್ತು ಲಾಠಿಚಾರ್ಜ್ ಮಾಡುವುದು ನಿಶ್ಚಿತ ಎಂದು ಊಹಿಸಿ, ಯಾವುದೇ ಪ್ರತಿಕ್ರಿಯೆ ನೀಡದೆ ತಮ್ಮ ಭಾಷಣ ಮುಂದುವರೆಸುತ್ತಾರೆ.

ತನ್ನ ಕೊನೆಯ ಆಸೆಯಂತೆ, "ಸಾಮ್ರಾಜ್ಯ ಶಾಹಿ  ದೋರಣೆಗೆ ನನ್ನ ದಿಕ್ಕಾರ", "Inquilab Zindabad", "ವಂದೇ ಮಾತರಂ" ಎಂಬ ಘೋಷಣೆ ಕೂಗುತ್ತಾ, ಕೊನೆಯ ಬಾರಿ ತಮ್ಮ ಮುಖಗಳನ್ನು ಒಬ್ಬರಿಗೊಬ್ಬರು ನೋಡಿಕೊಂಡು, ನೇಣು ಹಾಕುವ ಹಗ್ಗಕ್ಕೆ ಮುತ್ತಿಡುತ್ತಾರೆ.

ಕಪ್ಪು ಬಟ್ಟೆಯನ್ನು ಮುಖಕ್ಕೆ ಹಾಕಿ, ನೇಣು ಕಂಬದ ಕೆಳಗಡೆ ಇರುವ ಬಾಗಿಲ ಮೇಲೆ ನಿಲ್ಲಿಸಿ, ಹಗ್ಗವನ್ನು ಕುತ್ತಿಗೆಯ ಭಾಗಕ್ಕೆ ಬರುವಂತೆ ಕಟ್ಟಲಾಗುತ್ತದೆ, ಮ್ಯಾಜಿಸ್ಟ್ರೇಟ್ ಸರಿಯಾಗಿ 7:33 ಗಂಟೆಗೆ ತನ್ನ ಕೈ ಇಂದ ಆದೇಶಿಸುತ್ತಾನೆ ಅದೇರೀತಿಯಾಗಿ ನೇಣು ಹಾಕುವ  ವ್ಯಕ್ತಿ ಬಾಗಿಲನ್ನು ಒಂದೇ ಸಮನೆ ತಗೆಯುತ್ತಾನೆ, ದೇಹಗಳು ದಬ್ಬನೆ ಕೆಳಗೆ ನೇತು ಬಿದ್ದು, ಒದ್ದಾಡಿ ಶಾಂತವಾಗುತ್ತವೆ,ಕುತ್ತಿಗೆ ಭಾಗ ದೇಹದಿಂದ ಬೇರೆಯಾದಂತೆ ಕಾಣುತ್ತದೆ. ಅಲ್ಲಿಯೇ ಇದ್ದ ವೈದ್ಯರು ನೆಲದ ಮೇಲೆ ದೇಹವನ್ನು ಮಲಗಿಸಿದ ನಂತರ ಪರೀಕ್ಷಿಸಿ ಮರವನ್ನು ದೃಢಪಡಿಸುತ್ತಾರೆ ಆದರೆ ಜೈಲಿನ ತುಂಬಾ ಭಗತ್ ಸಿಂಗ್ ಅಮರ್ ರಹೇ, ಶಿವರಾಂ ರಾಜಗುರು ಅಮರ್ ರಹೇ, ಮತ್ತು ಸುಖದೇವ್ ಅಮರ್ ರಹೇ ಎಂಬ ಘೋಷಣೆ ಕೇಳುತ್ತಲೇ ಇರುತ್ತವೆ.ಹುತಾತ್ಮರು ಮರಣದ ಹಾದಿ ಹಿಡಿದರೆ, ಇತ್ತ ಸ್ವಾತಂತ್ರ ಹೋರಾಟದ ಇತಿಹಾಸದಲ್ಲಿ ಅವರ ಹೆಸರುಗಳು ಚರಿತ್ರೆಯಾಗಿ  ನಿಂತವು.

ಇಲ್ಲಿ ಮತ್ತದೇ ಎರಡು ಗುಂಪುಗಳನ್ನು ಕಾಣಬಹುದು, ಒಂದು ಸ್ವಾಭಿಮಾನ, ದೇಶಪ್ರೇಮ,ಸ್ನೇಹ, ಸಮಾಜಮುಖಿ ಆಲೋಚನೆಗಳು,ಅಧ್ಯಯನ ಶೀಲ, ಚಾರಿತ್ರ ಸಹಿತ ವ್ಯಕ್ತಿತ್ವ ಬಿಂಬಿಸುವುದು. ಇನ್ನೊಂದು ಅಧಿಕಾರವಿದ್ದರೂ ಭಯದಿಂದ ಜನರನ್ನು ಶೋಷಣೆ ಮಾಡಿದ, ಸಾವಿನಂಚಿನಲ್ಲಿದ್ದರು ಭೇಟಿಗೆ  ಅವಕಾಶ ನೀಡದ ಪೈಶಾಚಿಕ ಪ್ರವೃತ್ತಿಯ ಮತ್ತು ಅಧಿಕಾರವನ್ನು ಹೇಗೆ ಬೇಕೋ ಹಾಗೆ ಬಳಸಿದ ಕುತಂತ್ರಿಗಳ ಗುಂಪು.ಇಷ್ಟಾದರೂ ಇನ್ನು ಸಮಾಜದಲ್ಲಿನ  ಎಲ್ಲ ಮನಸ್ಥಿತಿಯ ಜನರು ಬಲಿದಾನ ದಿವಸ್ ಅನ್ನು ಮುಕ್ತವಾಗಿ ಆಚರಣೆ ಮಾಡಲು ಹಿಂಜರಿಯುವುದನ್ನು ಕಾಣಬಹುದು.ನನ್ನ ಕಟ್ಟಕಡೆಯ ಭಾವನೆ, ಸ್ವಾತಂತ್ರ  ತಂದು ಕೊಟ್ಟೆವು ಎಂದು ಹೇಳುವವರಿಗೆ ಮಾತ್ರ ಸೀಮಿತ ಮಾಡದೆ, ಕ್ರಾಂತಿಕಾರಿ ಆಲೋಚನೆಗಳಿಂದ,ಸ್ವಾತಂತ್ರ ಪಡೆಯುವ ಉದ್ದೇಶಕ್ಕೆ ತ್ಯಾಗ ಮಾಡಿದ ಆತ್ಮಗಳನ್ನು ಸ್ಮರಿಸಿವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಜವಾಬ್ದಾರಿ ಎಂದುಕೊಂಡರೆ ಮಾತ್ರ ಭಾರತ ವೈವಿಧ್ಯತೆಯಲ್ಲಿ ಏಕತೆ ಯನ್ನು ಸಾಧಿಸಲು ಸಾಧ್ಯವಾಗುತ್ತದೆ.

ಹೇಮಂತ್ ಕುಮಾರ್ ಆರ್ ಕಪ್ಪಾಳಿ  

hemanth.kappali@gmail.com 

 Note:Images are used in this video  belongs to respective owners..I used only for better explanation and also Educational purpose.

Comments

  1. ಎಲ್ಲರು ಅಮ್ಮ ಭಾರತಿಯ ಮಕ್ಕಳು ,ಕೆಲವರು ಶಾಂತಿ ಪ್ರೀಯರು , ಕೆಲವರು ಕ್ರಾಂತಿ ಪ್ರಿಯರು , ವಂದೇ ಮಾತರಂ 🙏🙂

    ReplyDelete
  2. ಇಂದಿನ ಯುವ ಪೀಳಿಗೆಯಲ್ಲಿ ದೇಶಾಭಿಮಾನ ಮತ್ತು ಕ್ರಾಂತಿಕಾರಿ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ಹಾಗೂ ಅವರ ವ್ಯಕ್ತಿತ್ವವನ್ನು ಪ್ರಸ್ತುತ ಸಂದರ್ಭಾನುಸಾರ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.ಈ ದಿಸೆಯಲ್ಲಿ ನಿಮ್ಮ ಅಂಕಣ ಅತ್ಯುತ್ತಮವಾಗಿ ಮೂಡಿಬಂದಿದೆ.

    ReplyDelete

Post a Comment

Popular posts from this blog

"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ "ಭಾಗ-೧

ಹಳ್ಳಿ ಹುಡುಗ.......ನಿ(ರಂಜ)ನ ಭಾಗ 2.

ಬದಲಾದ ಕಾಲದಲ್ಲಿ ಬೇಕಾದ ಬದಲಾವಣೆಗಳು