Posts

Showing posts from June, 2021

ಹಳ್ಳಿ ಹುಡುಗ...ನಿ(ರಂಜ)ನ ಭಾಗ 1.

Image
ಕೊನೆಗು ಬಂದೇ ಬಿಟ್ಟಿತು, ಶಾಮಿಯಾನ,ಕುರ್ಚಿ,ದೊಡ್ಡ ಪರದೆಯಿಂದ ಅಲಂಕೃತವಾದ, ರಾಜ್ಯದ ಎಲ್ಲ ಕಡೆಯಿಂದ ಬಂದ  ವಿದ್ಯಾರ್ಥಿ ಮತ್ತು ಪೋಷಕರ ಕನಸುಗಳನ್ನು ನನಸು ಮಾಡಲೆಂದೇ ನಿರ್ಮಿಸಿರುವ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿ.ಇ.ಟಿ ಕಛೇರಿಯ ಮುಂದೆ ನಿಲ್ಲುವ ದಿನ. ಆತಂಕಗೊಂಡ ಮಕ್ಕಳು ಮತ್ತು ಪೋಷಕರು,ಗಡಿ ಬಿಡಿಯಲ್ಲಿನ ಆಯೋಜಕರು, ಇವರ ನಡುವೆ ಕಾಲೇಜುಗಳ ಹಾಗು ಶಿಕ್ಷಣ ಸಾಲ ನೀಡುವ ಬ್ಯಾಂಕಿನ ಜಾಹಿರಾತುಗಳನ್ನು ನೀಡುತ್ತಿರುವ ವ್ಯಕ್ತಿಗಳು.ಇವೆಲ್ಲವನ್ನು ನೋಡಿ ಮಂಕಾದ ನಮ್ಮ ಹಳ್ಳಿ ಹುಡುಗ. ಕರ್ನಾಟಕದ ಒಂದು ಮೂಲೆಯಲ್ಲಿರುವ ಚಿಂಚನಕಟ್ಟೆ ಎಂಬ ಹಳ್ಳಿ, ಆಗ ತಾನೆ  ವಿಜ್ಞಾನ ವಿಷಯದಲ್ಲಿ ಕಂಠಪಾಠ ಮಾಡಿ  ಪಿಯುಸಿ ಪರೀಕ್ಷೆ ಮುಗಿಸಿದ ನಿರಂಜನ. ಒಂದು ಕಡೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆ,ಜೀವ ಬದುಕಿದರೆ ಸಾಕು ಎಂದು ಚಿನ್ನದ ಸರವನ್ನು ಮಾರಿ ಚಿಕಿತ್ಸೆಗೆ ಹಣ ಹೊಂದಿಸಿದ ತಾಯಿ,ಇವೆಲ್ಲದರ ಪರಿವೆ ಇಲ್ಲದೆ ಆಟ ಪಾಠದಲ್ಲಿ ಮಗ್ನವಾಗಿರುವ ತಂಗಿ.ಹೀಗಿರುವಾಗ ಇದಾವುದನ್ನು  ಲೆಕ್ಕಿಸದೇ ವ್ಯಕ್ತಿಯ ಬೆಳವಣಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನಿಟ್ಟು ಆಸಕ್ತಿ ಮತ್ತು ಶ್ರದ್ಧೆಯಿಂದ ಶಕ್ತಿಗನುಸಾರವಾಗಿ ಓದಿ ಪ್ರಥಮ ದರ್ಜೆಯಲ್ಲಿ ಪಾಸಾದ ನಮ್ಮ ಹಳ್ಳಿ ಹುಡುಗ ನಿರಂಜನ. ಭವಿಷ್ಯದ ಬಗ್ಗೆ ಯಾವುದೇ ರೀತಿಯ ಮಾನಸಿಕ,ಆರ್ಥಿಕ ಸಿದ್ಧತೆಗಳಲ್ಲಿದಿರುವುದರ ಕಾರಣ, ಇವನ ಫಲಿತಾಂಶ ಕಂಡು ಸಲಹೆಗಾರರಾದವರು ಉಂಟು

ಕರೋನಾದ ಲಾಕ್ ಡೌನ್ ಅರಿವಿಗೆ ತಂದ ವಿಚಾರಗಳು

ಸಾಮಾನ್ಯನಾದ ನನಗೆ ಕರೋನಾದ ಲಾಕ್ ಡೌನ್ ದಿಂದಾಗಿ ಅರಿವಿಗೆ ಬಂದ ವಿಚಾರಗಳು 1)ಹೊರಗಿನಿಂದ ಬಂದೊಡನೆ ಕೈ-ಕಾಲು ತೊಳೆದು ಮನೆ ಒಳಗೆ ಪ್ರವೇಶಿಸುವುದು. 2)ಮನೆಯಲ್ಲೇ ಇದ್ದು ಒಟ್ಟಿಗೆ ಜೀವನ ನಡೆಸುವುದು. 3)ರೋಗ ನಿರೋಧಕ ಶಕ್ತಿಯ ಮಹತ್ವ. 4)ಮನೆಯ ಮದ್ದಿನ ಉಪಯೋಗ. 5)ಆಸ್ಪತ್ರೆ ಮತ್ತು ವೈದ್ಯರ  ಅನಿವಾರ್ಯತೆ. 6)ವೈವಿಧ್ಯಮಯ ಔಷಧಿಗಳ ಮಾಹಿತಿ. 7)ಜೀವನದಲ್ಲಿ ಅನವಶ್ಯಕ ಸಂಗತಿಗಳು. 8)ಸಮಾಜ ಮುಖಿ ಸಂಘಟನೆಗಳ,ಸಾಮಾನ್ಯರ ಅಸಮಾನ್ಯ ಕಾರ್ಯಗಳು. 9)ಹಣಕ್ಕಾಗಿ ಹಾತೂರೆಯುವ,ಹಣವಿದ್ದರು ಹೆಣವಾದ, ಜೀವಗಳು. 10)ಮಗುವಿನ ಶಿಕ್ಷಣದಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಮುಖ್ಯವೇ ಹೊರತು ಕಟ್ಟಡಗಳಲ್ಲ. 11) ರಾಜಕೀಯದ ವಿವಿಧ ಮುಖಗಳು/ನೀತಿಗಳು. 12)ಮಾಡಬೇಕಾದದ್ದು ಆನೆಯಷ್ಟು,ಮಾಡಿರುವುದು ಇರುವೆಯಷ್ಟು. 13)ಓದಿದ್ದೆಲ್ಲವನ್ನು ನಂಬಬೇಕಿಲ್ಲ ನಂಬ ಬೇಕಾದ ಸತ್ಯವನ್ನು ತಿರುಚಿದ್ದೆ ಹೆಚ್ಚು. 14)ಬಡವ ಬಡವನಾಗೆ ಇರುವುದು, ಶ್ರೀಮಂತ ಅತಿ ಶ್ರೀ ಮಾತನಾಡುವುದು ಸಮಾಜದಲ್ಲಿರುವ ಕಾಣದ ನಿಯಮವಾಗಿರುವುದು. 15)ಪ್ರತಿಯೊಬ್ಬ ವ್ಯಕ್ತಿಯು,ವ್ಯವಸ್ಥೆಯು  ನಿಸ್ವಾರ್ಥದಿಂದ ಸೇವಾ ಮನೋಭಾವದಿಂದ ರಾಷ್ಟ್ರಹಿತಕ್ಕಾಗಿ ದುಡಿಯುವ ಅನಿವಾರ್ಯತೆಯ ತೀವ್ರತೆಯ ಕುರಿತಾದ ಚಿಂತನ ಮಂಥನ.

ಯೋಗದಿಂದ ಪ್ರತಿಯೊಬ್ಬರಿಗೂ ರಾಜ ಯೋಗ.

Image
ಭಾರತೀಯ ಜ್ಞಾನ ಸಂಪತ್ತಿನ ಒಂದು ಆಯಾಮ ಶಾಸ್ತ್ರಗಳು,ಶಾಸ್ತ್ರಗಳಲ್ಲಿ ವೈದ್ಯ,ನಾಟ್ಯ,ವಾಸ್ತು ಮತ್ತು ಯೋಗ ಶಾಸ್ತ್ರವು ಒಂದು. ಯೋಗ ಎಂದರೆ ಕೇವಲ ಆಸನಗಳಲ್ಲ, ಅದು ದೇಹಕ್ಕೆ,ಮನಸ್ಸಿಗೆ ಮತ್ತು ಬುದ್ಧಿಗೆ ಬೇಕಾದ ಅವಶ್ಯಕ ಕ್ರಿಯೆ ಎನ್ನಬಹುದು. ಇತಿಹಾಸ ಕಾಲದಿಂದ ಇಲ್ಲಿಯವರೆಗೆ ಯೋಗದ ಮಹತ್ವವನ್ನು ಅರಿತು ಅಭ್ಯಾಸ ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ವಯಸ್ಸಿನ ಮಾನದಂಡವನ್ನು ಲೆಕ್ಕಿಸದೆ ಸಾಧನೆಗಾಗಿ ಜೀವಿಸಿದ ವ್ಯಕ್ತಿಗಳ ಎಷ್ಟೋ ನಿದರ್ಶನಗಳಿವೆ. ಮನಸ್ಸಿನ ಭಾವನೆಗಳನ್ನು ಮತ್ತು ಮೆದುಳಿನ ವಿಚಾರಗಳನ್ನು ಯಾವಾಗ ಹೇಗೆ ಹತೋಟಿಯಲ್ಲಿಡ ಬೇಕು ಎಂಬುದನ್ನು ತಿಳಿಸುವುದು ಯೋಗಶಾಸ್ತ್ರ. ಇದರಿಂದ ಚಿತ್ತ ಮತ್ತು ವೃತ್ತಿ ಅಂದರೆ,ಮಾನವನಿಗೆ ಕಾಡುವ 9 ರೀತಿಯ ವಿಕ್ಷೇಪಗಳಾದ ಮತ್ತು ನಿಶಕ್ತಿ ಗಳನ್ನು ಜಯಸಿ ಸಾಧನೆಯ ಶಿಖರ ಏರುವ ಸರಳ ದಾರಿಯನ್ನು ನಮ್ಮ ಪೂರ್ವಜರು ನೀಡಿದ್ದಾರೆ. ಆದರೆ ಬ್ರಿಟಿಷರು ಇವೆಲ್ಲವನ್ನು ಲೆಕ್ಕಿಸದೆ ಕೇವಲ ಹಣ,ಅಧಿಕಾರ ಮತ್ತು ಲೌಕಿಕ ಸಿರಿತನವನ್ನು ತುಂಬುವ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ನಮ್ಮನ್ನು ದಾರಿ ತಪ್ಪಿಸಿದ ಸತ್ಯ ಅರಿವಾಗಿದೆ ಮತ್ತು ಹೊಸ ಶಿಕ್ಷಣ ನೀತಿಯ ಮೂಲಕ ಪುನರುಜ್ಜೀವನ ಕಾರ್ಯ ಪ್ರಗತಿಯಲ್ಲಿದೆ. ದೇಶದಲ್ಲಿ ವಿವಿಧ ಸಂಘಟನೆಗಳ ಮತ್ತು ಸರಕಾರದ ಯೋಜನೆಗಳ ಮೂಲಕ ಯೋಗ ಶಾಸ್ತ್ರದ ಅಭಿಯಾನಗಳು ಜನರನ್ನು ಯೋಗದ  ವಿಷಯದಲ್ಲಿ ಜಾಗೃತಿಯನ್ನು ಮೂಡಿಸಿವೆ. ಋಷಿ ಪತಂಜಲಿಯು ಯೋಗ ಸೂತ್ರದ ಕರ್ತೃವಾಗಿದ್ದು

"ಬಲಿದಾನ ದಿವಸ ಮಹತ್ವ"

Image
ತಾಯಿ ಭಾರತಮಾತೆ ಎಷ್ಟು ಶಾಂತಿಪ್ರಿಯಳು ಅಂದರೆ, ಭಾರತದ ಸ್ವಾತಂತ್ರ,ಬ್ರಿಟಿಷರ ಭಿಕ್ಷೆಯೋ ಅಥವಾ ನಮ್ಮ 1ಹೋರಾಟದ ಪ್ರತಿಫಲವೋ? ಅನ್ನೋ ವಿಷಯವು ಇನ್ನು ಅಧಿಕೃತವಾಗಿ, ಸವಿಸ್ತಾರವಾಗಿ ಮತ್ತು ಸಾಕ್ಷಾಧಾರಿತವಾಗಿ ಎಲ್ಲ ರೀತಿಯ ಚಿಂತಕರು ಒಪ್ಪುವಂತೆ ಮೂಡಿಬಂದಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರು ಮತ್ತು ನಾಯಕರುಗಳ ನಡೆ,ವಿಚಾರ ಮತ್ತು ಪುರಾವೆಗಳನ್ನು ಅಧ್ಯಯನ ಮಾಡಿದಷ್ಟು ಬೇರೆ ಬೇರೆ ಆಯಾಮಗಳು ಹೊರ ಬರುತ್ತಿವೆ. ಸ್ವಾತಂತ್ರಕ್ಕಾಗಿ ಅಹಿಂಸಾತ್ಮಕ ಚಳುವಳಿ ದಾರಿ ಹಿಡಿದು ದೇಶದ ಪಿತಾಮಹ ಆಗಿರೋದು ಉಂಟು, ಅದೇ ರೀತಿ ಸ್ವಾಭಿಮಾನದಿಂದ ಸ್ವಾತಂತ್ರದ ಸಾಧನೆಗೆಂದೇ ತಮ್ಮ ಅತ್ಯಮೂಲ್ಯವಾದ ಜೀವನವನ್ನು ಬಲಿ ಕೊಟ್ಟು ಹುತಾತ್ಮರಾದದ್ದು ಉಂಟು. ಇಂದಿಗೂ ಕೂಡ ನಾವು ಎರಡು ರೀತಿಯ ಜನರನ್ನು ಗುರುತಿಸಬಹುದು, ಒಂದು ಸ್ವಾರ್ಥ ಸಾಧನೆಗೆ ಸಮಾಜವನ್ನು, ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿದು ರಾಜಕೀಯ ಲಾಭ ಮಾಡುವ ಜನರ ಗುಂಪು, ಅದೇ ರೀತಿ ಎರಡನೆಯದು, ನಿಸ್ವಾರ್ಥ ಭಾವನೆಯಿಂದ ಸಮಾಜದ ಯವುದೋ ಒಂದು ಕ್ಷೇತ್ರದಲ್ಲಿ ಯಾವ ಪ್ರತಿಫಲದ ಅಪೇಕ್ಷೆಯಿಲ್ಲದೆ ಸೇವೆ ಮಾಡುತ್ತ್ತಿರುವ ನಿಷ್ಕಲ್ಮಶ ಜನರ ಒಂದು ಗುಂಪು. ಇನ್ನು  ಪುರಾಣಗಳಲ್ಲಿ ನಾವು ಕಾಣುವ ಸುರ ಮತ್ತು ಅಸುರರನ್ನು ಸಲಹುತ್ತಿರುವುದು ಶಕ್ತಿ ಸ್ವರೂಪಿಣಿಯಾದ ತಾಯಿ ಆಧಿಶಕ್ತಿ, ಅದೇರೀತಿ ಭಾರತ ಮಾತೆ ಮೇಲೆ ತಿಳಿಸಿದ ಎರೆಡು ಗುಂಪಿನ ಜನರನ್ನು ಸಲಹುತ್ತಿದ